- ಡಿಕೆಶಿ, ಬಿಎಸ್‌ವೈ, ಎಚ್‌ಡಿಕೆ, ವಿ.ಸೋಮಣ್ಣ, ಈಶ್ವರ ಖಂದ್ರೆ ಇತರರು ಭಾಗಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಿವಾಚಾರ್ಯ ರತ್ನ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ 91 ನೇ ವರ್ಷದ ಜಯಂತ್ಯುತ್ಸವ ಸ್ಮರಣೆಗಾಗಿ ಹೊನ್ನಾಳಿ ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು,ಸೈನಿಕ ಶಾಲೆ, ಸಿಬಿಎಸ್‌ಇ ಶಾಲೆ ಹಾಗೂ ಗೋಸಂವರ್ಧನ ಕೇಂದ್ರದ ಕಟ್ಟಡಗಳ ಭೂಮಿ ಪೂಜೆ ಶಿಲಾ ಫಲಕ ಅನಾವರಣ ಕಾರ್ಯಕ್ರಮ ಜುಲೈ 1ರಂದು ನಡೆಯಲಿದೆ.ಭಾನುವಾರ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಅವರು ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ರೇಣುಕಾಚಾರ್ಯ ಅವರೊಂದಿಗೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ವೀಕ್ಷಿಸಿ ಮಾತನಾಡಿದರು. ಜೂನ್ 30 ರಂದು ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಕತೃಗದ್ದುಗೆಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, ಶ್ರೀ ಮಠದಲ್ಲಿ ಅಭ್ಯಾಸ ಮಾಡಿ ಈಗ ನಾಡಿನ ವಿವಿಧ ಮಠಗಳಲ್ಲಿರುವ ಸ್ವಾಮೀಜಿಗಳ ಕಾರ್ಯಕ್ರಮ ಹಾಗೂ ಸಂಗಿತ ಕಾರ್ಯಕ್ರಮ ನಡೆಯಲಿದೆ ಎಂದರು.
ಜುಲೈ 1ರಂದು ಹೈಟೆಕ್ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು, ಸೈನಿಕ ಶಾಲೆ, ಸಿಬಿಎಸ್‌ಇ ಶಾಲೆ, 10 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಗೋಸಂವರ್ಧನ ಕೇಂದ್ರದ ಕಟ್ಟಡಗಳ ಭೂಮಿಪೂಜೆ ಶಿಲಾ ಫಲಕ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ರಂಭಾಪುರಿ ಮಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿಜ್ಞಾನ ಪೀಠದ ೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಜಗದ್ಗುರು ಡಾ.ಮಲ್ಲಿಕಾರ್ಜುನಾ ವಿಶ್ವಾರಾಧ್ಯ ಶಿವಾಚಾರ್ಯ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದರು.
ಸಿಎಂ ಡಿ.ಕೆ.ಶಿವಕುಮಾರ್ ಆಗಮನ:
ಹೈಟೆಕ್ ಆಸ್ಪತ್ರೆ ಹಾಗೂ ವಿವಿಧ ಕಟ್ಟಡಗಳ ಕಾಮಗಾರಿ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಸಚಿವರಾದ ಈಶ್ವರ ಖಂಡ್ರೆ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಡಾ. ಸಿ.ಎನ್. ಮಂಜುನಾಥ್, ಬಿ.ವೈ.ರಾಘವೇಂದ್ರ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಶಾಸಕರಾದ ಬಿ.ಪಿ. ಹರೀಶ್, ಬಿ.ಕೆ. ಸಂಗಮೇಶ್, ಬಸವರಾಜ ಶಿವಗಂಗಾ, ಸಮರ್ಥ ಶಾಮನೂರು, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜೆ.ಬಿ. ವಿನಯಕುಮಾರ್ ಹಾಗೂ ವಿವಿಧ ಜಿಲ್ಲೆಯ ಶಾಸಕರು ಆಗಮಿಸಲಿದ್ದಾರೆ ಎಂದರು.ಸನ್ಮಾನಿತರು:
ಜುಲೈ 1ರಂದು ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ವೈದ್ಯರು ಹಾಗೂ ಪತ್ರಕರ್ತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ, ಇದೇ ಸಂದರ್ಭದಲ್ಲಿ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೂರೆಂಟು ನಾಮವಳಿಯ ಕಿರುಕೃತಿ ಬಿಡುಗಡೆ, ಅಂತರ ರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ.ಮಂಜರಿ ಮತ್ತು ಬಳಗ ಹಾಗೂ ಸರಿಗಮಪ ಗಾಯಕ ಯಶವಂತ್ ಮತ್ತು ಬಳಗದಿಂದ ಸಂಗಿತ ಸಂಜೆ ಹಾಗೂ ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿ ಮತ್ತು ಕುಮಾರಿ ಕವನ ಹಾಗೂ ವಿಧ್ಯಾರ್ಥಿಗಳಿಂದ ಸಂಸ್ಕೃತಿ ಹಾಗೂ ಸಂಸ್ಕಾರ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ವಿವರಿಸಿದರು.ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಚ್.ಎ. ಉಮಾಪತಿ, ಸುರೇಶ್ ಹೊಸಕೇರಿ, ಕತ್ತಿಗೆ ನಾಗರಾಜ್, ವೀರಣ್ಣ, ಕುಮಾರಸ್ವಾಮಿ, ರಾಜು ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.
- - --28ಎಚ್.ಎಲ್.ಐ2:
ಕಾರ್ಯಕ್ರಮ ಪೂರ್ವಸಿದ್ಧತೆಗಳನ್ನು ಹಿರೇಕಲ್ಮಠದ ಶ್ರೀ, ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಚ್.ಎ.ಉಮಾಪತಿ ಪರಿಶೀಲಿಸಿದರು.