ಕನ್ನಡಪ್ರಭ ವಾರ್ತೆ ಹೊಳೆನರಸೀಪುರಶಾಸಕ ಎಚ್. ಡಿ. ರೇವಣ್ಣನವರು ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿ, ರೈತರ ಸ್ವಾಭಿಮಾನದ ಬದುಕಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕರ್ನಾಟಕ ಹಾಲು ಒಕ್ಕೂಟದ ಮೂಲಕ ನಂದಿನಿ ಡೇರಿಯನ್ನು ರಾಜ್ಯದಲ್ಲಿ ಸ್ಥಾಪಿಸಿ, ಹೆಚ್ಚು ಉತ್ತೇಜನ ನೀಡಿದ್ದಾರೆ. ಇಂತಹ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿದ ಕೀರ್ತಿ ಹಾಗೂ ಹೆಗ್ಗಳಿಕೆಗೆ ಶಾಸಕ ರೇವಣ್ಣನವರು ಪಾತ್ರರಾಗಿದ್ದಾರೆ ಎಂದು ಶಾಸಕ ಎ. ಮಂಜು ತಿಳಿಸಿದರು.ಪಟ್ಟಣದ ಚೆನ್ನಾಂಬಿಕ ಕನ್ವೇಷನ್ ಹಾಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತರಿಗಾಗಿ ಸೋಮವಾರ ಆಯೋಜಿಸಿದ್ದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಶಾಸಕ ಎಚ್. ಡಿ. ರೇವಣ್ಣನವರ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿದ್ದು, ಎಲ್ಲರ ಕಣ್ಣಿಗೂ ಕಾಣುತ್ತಿದೆ. ಆದ್ದರಿಂದ ಶಾಸಕರ ಅಭಿವೃದ್ಧಿಯ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತರು ಮಾತನಾಡಬೇಕು, ಪ್ರತಿವ್ಯಕ್ತಿಗೂ ತಿಳಿಯುವಂತೆ ಆಗಬೇಕು, ಆ ಕೆಲಸವನ್ನು ನೀವುಗಳು ಮಾಡಬೇಕು ಎಂದು ಸಲಹೆ ನೀಡಿದರು. ೨೦೨೮ರ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಪುನಃ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದರೆ ಇಂದಿನ ಕಾರ್ಯಾಗಾರದಲ್ಲಿ ತರಬೇತುದಾರರು ನೀಡುವ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶವನ್ನು ಚೆನ್ನಾಗಿ ಅರ್ಥೈಸಿಕೊಂಡು ನಾಳೆಯಿಂದ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಸಲುವಾಗಿ ಮನೆ ಮನೆ ಭೇಟಿ ಸಂದರ್ಭದಲ್ಲಿ ಬಹಳ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಶಾಸಕ ಎಚ್. ಡಿ. ರೇವಣ್ಣ ಮಾತನಾಡಿ ನಾವುಗಳು ಖಾಸಗಿ ಕಾಲೇಜು ಸ್ಥಾಪನೆ ಮಾಡದೇ ಸರ್ಕಾರಿ ಶಾಲಾಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ, ಯುವ ಜನತೆಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ಜತೆಗೆ ಉತ್ತಮ ಬುನಾದಿ ನಿರ್ಮಿಸುವಲ್ಲಿ ಉತ್ತೇಜನ ನೀಡಲಾಗಿದೆ ಎಂದರು. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಜೆಡಿಎಸ್ ಆಡಳಿತ ಅವಧಿಯಲ್ಲಿ ಕೈಗೊಂಡು ಅಭಿವೃದ್ಧಿ ಕಾರ್ಯಗಳು ಹಾಗೂ ರಸ್ತೆ, ರೈಲ್ವೆ ಬ್ರಾಡ್‌ಗೇಜ್ ಉನ್ನತೀಕರಣ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಜೆಡಿಎಸ್ ವಕ್ತಾರ ದೇವರಾಜ್ ಅವರು ಬಿಎಲ್‌ಎ ೨ ಕಾರ್ಯಕರ್ತರ ಜವಾಬ್ದಾರಿ ಮತ್ತು ಅವರ ಕಾರ್ಯ, ಆಡಳಿತ ಪಕ್ಷದ ಬಗ್ಗೆ ಅಧಿಕಾರಿಗಳು ಹೆಚ್ಚು ಆಸಕ್ತಿ ತೋರುವುದರಿಂದ ಬಿಎಲ್‌ಒ ಅಧಿಕಾರಿಗಳ ಕಾರ್ಯದಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯತೆ ಮತ್ತು ಪಕ್ಷದ ನಿಷ್ಠಾವಂತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವುದು ಮತ್ತು ಮೃತಪಟ್ಟವರು ಹಾಗೂ ಕ್ಷೇತ್ರದಲ್ಲಿ ಇಲ್ಲದವರು ಹೆಸರುಗಳನ್ನು ತೆಗೆಸುವ ನಿಟ್ಟಿನಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು. ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಬಿಎಲ್ ಒ ಅಧಿಕಾರಿಗಳು ಏಕಪಕ್ಷೀಯವಾಗಿ ವರ್ತನೆ ಕಂಡುಬಂದಲ್ಲಿ ತಾಲೂಕು ಅಧಿಕಾರಿಗಳಿಗೆ ದೂರು ನೀಡುವುದು ಸೇರಿದಂತೆ ಹಲವಾರು ವಿಷಯ ಕುರಿತು ಸಮಗ್ರ ಮಾಹಿತಿ ನೀಡಿ, ಹೆಚ್ಚಿನ ಜಾಗ್ರತೆ ಹಾಗೂ ಜವಾಬ್ದಾರಿಯಿಂದ ಬಿಎಲ್‌ಎ ೨ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. ಶಾಸಕರಾದ ಎಚ್. ಡಿ. ರೇವಣ್ಣ ಹಾಗೂ ಎ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಪುಟ್ಟಸೋಮಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಸುಧಾನಳಿನಿ, ಎಚ್. ಕೆ. ಪ್ರಸನ್ನ ಹಾಗೂ ಎ.ಜಗನ್ನಾಥ್, ತಾ.ಪಂ. ಮಾಜಿ ಅಧ್ಯಕ್ಷ ಎನ್. ಆರ್. ಅನಂತ ಕುಮಾರ್, ಮಾಜಿ ಉಪಾಧ್ಯಕ್ಷ ಜವರೇಗೌಡ, ಜಿಪಂ ಮಾಜಿ ಸದಸ್ಯ ಎಚ್. ಎನ್. ದೇವೇಗೌಡ ಹಾಗೂ ಚಂದ್ರಶೇಖರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಜೆಡಿಎಸ್ ವಕ್ತಾರ ದೇವರಾಜ್ ಅವರು ಕಾರ್ಯಾಗಾರದಲ್ಲಿ ಕುಳಿತು ಅಗತ್ಯ ಮಾಹಿತಿ ಪಡೆದರು.ಜಿಲ್ಲೆಯಲ್ಲಿ ಹೈನುಗಾರಿಕೆಯ ಕೀರ್ತಿ ರೇವಣ್ಣಗೆ ಸಲ್ಲುತ್ತದೆ
ಶಾಸಕ ಎಚ್. ಡಿ. ರೇವಣ್ಣನವರು ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿ, ರೈತರ ಸ್ವಾಭಿಮಾನದ ಬದುಕಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕರ್ನಾಟಕ ಹಾಲು ಒಕ್ಕೂಟದ ಮೂಲಕ ನಂದಿನಿ ಡೇರಿಯನ್ನು ರಾಜ್ಯದಲ್ಲಿ ಸ್ಥಾಪಿಸಿ, ಹೆಚ್ಚು ಉತ್ತೇಜನ ನೀಡಿದ್ದಾರೆ. ಇಂತಹ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿದ ಕೀರ್ತಿ ಹಾಗೂ ಹೆಗ್ಗಳಿಕೆಗೆ ಶಾಸಕ ರೇವಣ್ಣನವರು ಪಾತ್ರರಾಗಿದ್ದಾರೆ ಎಂದು ಶಾಸಕ ಎ. ಮಂಜು ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.