ಗ್ರೂಪ್‌ ಡಿ ಸಿಬ್ಬಂದಿಯಿಂದ ಹೆರಿಗೆ, ನವಜಾತ ಶಿಶು ಸಾವು: ಪ್ರತಿಭಟನೆ

| Published : Nov 13 2025, 12:45 AM IST

ಗ್ರೂಪ್‌ ಡಿ ಸಿಬ್ಬಂದಿಯಿಂದ ಹೆರಿಗೆ, ನವಜಾತ ಶಿಶು ಸಾವು: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಡಿಹಳ್ಳಿ ಗ್ರಾಮದ ನಿವಾಸಿಯಾದ ರೂಪ ಎಂಬು ಗರ್ಭಿಣಿ ಮಹಿಳೆ ಚಿಕಿತ್ಸೆಗಾಗಿ ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ.

ಕನ್ನಡಪ್ರಭ ವಾರ್ತೆ ಕೆಜಿಎಫ್ತಾಲೂಕಿನ ಗುಟ್ಟಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಸಂದರ್ಭದಲ್ಲಿ ಆಸ್ಪತ್ರೆಯ ಡಿ ಗ್ರೂಪ್‌ ದರ್ಜೆಯ ಸಿಬ್ಬಂದಿ ಅವಧಿಪೂರ್ವ ಹೆರಿಗೆಯನ್ನು ಮಾಡಿಸಿ ನವಜಾತ ಶಿಶುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಸಾರ್ವಜನಿಕ ಆಸ್ಪತ್ರೆ, ತಾಲೂಕಿನ ಕ್ಯಾಸಂಬಳ್ಳಿ, ಬೇತಮಂಗಲ ಗುಟ್ಟಹಳ್ಳಿ, ಉರಿಗಾಂಪೇಟೆ, ಅಂಡ್ರಸನ್‌ಪೇಟೆ ಸೇರಿದಂತೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಸಂದರ್ಭದಲ್ಲಿ ಸಿಬ್ಬಂದಿ ಚಿಕಿತ್ಸೆ ನೀಡುವುದು ಸಾಮಾನ್ಯವಾಗಿದೆ. ಆಸ್ಪತ್ರೆಯ ಸಿಬ್ಬಂದಿ ಗರ್ಭೀಣಿಯರಿಗೆ ಚಿಕಿತ್ಸೆ ನೀಡಿ ಮಕ್ಕಳ ಸಾವಿಗೆ ಕಾರಣಾವಾಗಿದ್ದಾರೆ. ಇದಕ್ಕೆಲ್ಲಾ ಕೆಜಿಎಫ್ ತಾಲೂಕಿನ ಆಡಳಿತ ಶಾಸಕರ ಕೈ ತಪ್ಪಿದ್ದು, ಶಾಸಕಿ ರೂಪಕಲಾ ಶಶಿಧರ್ ನವಜಾತು ಶಿಶುವಿನ ಸಾವಿನ ಹೊಣೆಯನ್ನು ಹೊರಬೇಕಿದೆ ಎಂದು ಮೋಹನ್ ಕೃಷ್ಣ ತಿಳಿಸಿದ್ದಾರೆ.ಘಟನೆಯ ವಿವರ:ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿಯಾದ ರೂಪ ಎಂಬು ಗರ್ಭಿಣಿ ಮಹಿಳೆ ಚಿಕಿತ್ಸೆಗಾಗಿ ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ, ಇಲ್ಲಿನ ಸಿಬ್ಬಂದಿಯೇ ವೈದ್ಯರಿಗೆ ಮಾಹಿತಿ ನೀಡದೇ ಹಣದ ಆಸೆಗೆ ತಾವೇ ಗರ್ಭಿಣಿ ಹೆಂಗಸಿಗೆ ಅವಧಿ ಪೂರ್ವ ಹೆರಿಗೆಯನ್ನು ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಗಂಡು ನವಜಾತು ಶಿಶುವಿಗೆ ಸರಿಯಾದ ಚಿಕಿತ್ಸೆ ಹಾಗೂ ಅರೈಕೆ ಇಲ್ಲದೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪೋಷಕರು ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪ್ರತಿಭಟನೆ ನಡೆಸಿ ನವಜಾತು ಶಿಶುವಿನ ಸಾವಿಗೆ ಕಾರಣಕರ್ತರಾದರವನ್ನು ಕೂಡಲೇ ಅಮಾನತುಪಡಿಸಬೇಕೆಂದು ಒತ್ತಾಯಿಸಿದ್ದಾರೆ.ಸೌಜನ್ಯಕ್ಕಾದರೂ ಭೇಟಿ ನೀಡದ ಶಾಸಕಿ:ಗುಟ್ಟಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಡು ಮಗು ಸಾವನ್ನಪಿದ್ದು, ಕನಿಷ್ಟ ಪೋಷಕರಿಗೆ ಸಾಂತ್ವನ ಹೇಳುವ ಕೆಲಸವನ್ನು ಶಾಸಕರು ಮಾಡುತ್ತಿಲ್ಲವೆಂದು ವಿ. ಮೋಹನ್ ಕೃಷ್ಣ ತಿಳಿಸಿದರು. ಪುಸ್ತಕದಲ್ಲೇ ಹಾಜರಾತಿಯೇ ಇಲ್ಲ:ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಸರ್ಮಪಕ ದಾಖಲೆಗಳೇ ಇರುವುದಿಲ್ಲ, ಹಾಜರಾತಿ ಪುಸಕ್ತದಲ್ಲಿ ಸಿಬ್ಬಂದಿ ಹಾಜರಾತಿ ಹಾಕುವುದಿಲ್ಲ. ಅಂದರೆ ಸಿಬ್ಬಂದಿ ಸಂಬಳವನ್ನು ಹೇಗೆ ಮಾಡುತ್ತೀರಾ ಎಂದು ಸಾರ್ವಜನಿಕರು ಪ್ರಶ್ನೆಸಿದ್ದಾರೆ.ಬಲವಂತವಾಗಿ ಹೆರಿಗೆ ಮಾಡಿಸಿರುವ ಸಿಬ್ಬಂದಿ:ನನ್ನ ಮಗುವಿನ ಸಾವಿಗೆ ಕಾರಣವಾಗಿರುವ ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕು, ನನ್ನ ಮಗವಿನ ಅರೈಕೆಗೆ ಮೂರು ಲಕ್ಷ ಹಣವನ್ನು ವೆಚ್ಚ ಮಾಡಲಾಗಿದೆ, ಸಿಬ್ಬಂದಿ ನಿರ್ಲಕ್ಷದಿಂದ ನನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಕೊಲೆ ಮಾಡಿದ್ದಾರೆಂದು ಮಗುವಿನ ತಂದೆ ಬಾಬು ತಿಳಿಸಿದರು.ತಾಲೂಕು ವೈದ್ಯಾಧಿಕಾರಿಗಳಿಗೆ ತರಾಟೆ:ತಾಲೂಕು ವೈದ್ಯಾಧಿಕಾರಿ ಸುನಿಲ್ ಪ್ರತಿಭಟನೆಕಾರರನ್ನು ಸಮಾಧಾನಪಡಿಸಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರೂ ಸಮಾಧಾನಗೊಳ್ಳದ ಪ್ರತಿಭಟೆನೆಕಾರರು, ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದಕ್ಕೆ ಯಾವುದೇ ದಾಖಲೆಗಳು ನಿರ್ವಹಣೆ ಮಾಡಿಲ್ಲ, ವೈದ್ಯರು ಆಸ್ಪತ್ರಗೆ ಗೈರಾದರೂ ಹಾಜರಾತಿ ಪುಸ್ತಕದಲ್ಲಿ ತಿದ್ದಿರುವುದು ತಿಳಿಯಲಿದೆ ಎಂದರು.ನವೆಂಬರ್ 16 ರೊಳಗೆ ಸಿಬ್ಬಂದಿಯನ್ನು ಅಮಾನತುಪಡಿಸದೇ ಹೋದಲ್ಲಿ ಕೆಜಿಎಫ್ ತಾಲೂಕಿನ ಆಸ್ಪತ್ರೆಗಳ ಮುಂಭಾಗ ಉಗ್ರಹೋರಾಟ ನಡೆಸಲಾಗುವುದೆಂದು ತಿಳಿಸಿದರು.೧೨ಕೆಜಿಎಫ್೧ಗುಟ್ಟಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದರು.