ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅತಿಥಿ ಉಪನ್ಯಾಸಕರ ವೇತನ ₹13 ಸಾವಿರ ಇದ್ದದ್ದನ್ನು ₹32 ಸಾವಿರಕ್ಕೆ ಏರಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಎದುರು 26 ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನಿಡಿದ ಮಾಜಿ ಅವರು ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿ, ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿ, ಸರ್ಕಾರ ಕೂಡಲೇ ಖಾಲಿ ಇರುವ ಉಪ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ನಮ್ಮ ರಾಜ್ಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತಂದು, ಸಂಬಂಧ ಪಟ್ಟ ಅಧಿಕಾರಿಗಳೊಡನೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ವೇಳೆ ರಾಜ್ಯ ಅತಿಥಿ ಉಪನ್ಯಾಸಕ ಸಂಘದ ಸದಸ್ಯ ಡಾ.ಚಂದ್ರಶೇಖರ ಕಾಳನ್ನವರ, ಪ್ರೊ.ಸಂಗಮೇಶ ಬ್ಯಾಳಿ, ಡಾ.ಶಶಿಕಲಾ ಜೋಳದ, ಪ್ರೊ.ವಿದ್ಯಾಧರ ಶೀಲವಂತ, ನಾಗಯ್ಯ ಜ್ಯೋತಪ್ಪನ್ನವರ, ಡಾ.,ಮನೊಹರ ಪುಜಾರ,ಪ್ರೊ.ಸಂತೋಷ ಕಳ್ಳಿಮನಿ, ಶಶಿಧರ ಪುಜಾರ, ಸುನೀಲ ಮಠಪತಿ, ಸತೀಶ ಲಮಾಣಿ, ಸೇರಿದಂತೆ ಬಿಳಗಿ, ರಾಂಪೂರ, ಬಾಗಲಕೋಟೆ, ನವನಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಎಲ್ಲಾ ಅತಿಥಿ ಉಪನ್ಯಾಸಕರು ಇದ್ದರು.
-- ಬಾಕ್ಸ್:ಅತಿಥಿ ಉಪನ್ಯಾಸಕರಿಂದ ಜಿಲ್ಲಾ ಆಡಳಿತ ಭವನದ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಕಬ್ಬಿನ ಹಾಲು ಮಾರಟ ಮಾಡುವ ಮೂಲಕ ವಿನೂತನ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದರು. (ಫೋಟೋ 20ಬಿಕೆಟಿ1, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಮನವಿ ಸಲ್ಲಿಕೆ.)