ವ್ಯಕ್ತಿತ್ವ ರೂಪಿಸುವ ಶಕ್ತಿಯೇ ಗುರು

| Published : Sep 07 2024, 01:34 AM IST

ಸಾರಾಂಶ

ಪ್ರತಿಯೊಬ್ಬರ ವ್ಯಕ್ತಿತ್ವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಅದು ಗುರುಗಳು, ಶಾಲೆಯಲ್ಲಿ ಶಿಕ್ಷಕ ಶಿಕ್ಷಕಕಿಯರ ಕಲಿಸುವ ಪಾಠ, ನೀಡುವ ಮಾರ್ಗದರ್ಶನ ತೋರುವ ಜ್ಞಾನದ ಬೆಳಕು ಎಲ್ಲರ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಡುತ್ತದೆ, ಸಾಧನೆಯ ಹಾದಿ ತೆರೆಯುತ್ತದೆ,

ಕನ್ನಡಪ್ರಭ ವಾರ್ತೆ ಕೆಜಿಎಫ್ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು, ಗುರು ಬದುಕಿಗೆ ದಾರಿ, ಜೀವನಕ್ಕೆ ಶಕ್ತಿ, ಎಲ್ಲರ ಬದುಕಿನಲ್ಲೂ ಗರುವಿನ ಪಾತ್ರ ಹಿರಿದು, ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರಿಗೆ ಇರುವಷ್ಟೇ ಉನ್ನತ, ಪವಿತ್ರ ಸ್ಥಾನ ಗುರುಗಳಿಗೂ ಇದೆ ಎಂದು ಶಾಸಕಿ ರೂಪಕಲಾಶಶಿಧರ್ ತಿಳಿಸಿದರು.ನಗರದ ಎಸ್‌ಎಸ್ ಮಹಲ್‌ನಲ್ಲಿ ಶಿಕ್ಷಕರ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಅಕ್ಷರ ಕಲಿಸಿಕೊಟ್ಟವರೂ ಗುರುಗಳೇ, ಅಂದರೆ ಜೀವನದ ಪ್ರತಿ ಹಂತವೂ ನಮಗೆ ಒಂದಲ್ಲ ಒಂದು ವಿಷಯ ಗುರುಗಳಿಂದಲು ಸಿಗುತ್ತದೆ ಎಂದರು. ಬದುಕಿಗೆ ದಾರಿ ತೋರುವ ಗುರುಜೀವನಕ್ಕೆ ಜ್ಯೋತಿ, ಪ್ರತಿಯೊಬ್ಬರ ವ್ಯಕ್ತಿತ್ವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಅದು ಗುರುಗಳು, ಶಾಲೆಯಲ್ಲಿ ಶಿಕ್ಷಕ ಶಿಕ್ಷಕಕಿಯರ ಕಲಿಸುವ ಪಾಠ, ನೀಡುವ ಮಾರ್ಗದರ್ಶನ ತೋರುವ ಜ್ಞಾನದ ಬೆಳಕು ಎಲ್ಲರ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಡುತ್ತದೆ, ಸಾಧನೆಯ ಹಾದಿ ತೆರೆಯುತ್ತದೆ, ಬರೀ ಅಷ್ಟೇ ಅಲ್ಲದೆ ಉತ್ತಮ ಭವಿಷ್ಯವನ್ನೂ ರೂಪಿಸುತ್ತದೆ, ಜೀವನದ ಶಿಸ್ತು ಜ್ಞಾನದ ಹಸಿವು ಆರಂಭವಾಗುವುದೇ ಶಿಕ್ಷಕರ ಒಡನಾಟದಿಂದ ಎಂದರೂ ತಪ್ಪಲ್ಲ ಎಂದರು.ಬಿಇಓ ಮುನಿವೆಂಕಟರಾಮಚಾರಿ ಮಾತನಾಡಿ, ಶಿಕ್ಷಕ ನಮ್ಮ ಕೈಹಿಡಿದು, ನಮ್ಮ ತಪ್ಪುಗಳನ್ನು ಸರಿಪಡಿಸಿ ನಮ್ಮನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ತತ್ವಜ್ಞಾನಿ ಮತ್ತು ಮಾರ್ಗದರ್ಶಿ. ಪ್ರಪಂಚದ ಅನೇಕ ದೇಶಗಳಲ್ಲಿ ಶಿಕ್ಷಕರ ದಿನವು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಶಿಕ್ಷಕರನ್ನು ಗೌರವಿಸುವ ವಿಶೇಷ ದಿನವಾಗಿದೆ ಎಂದರು.ನಾಲ್ವರು ಶಿಕ್ಷಕರಿಗೆ ಸನ್ಮಾನ

ರಾಮಸಾಗರ ಶಾಲೆಯು ಹಸಿರು ವಲಯ ಶಾಲೆಗೆ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಶಾಲೆಯ ನಾಲ್ವರು ಶಿಕ್ಷಕರನ್ನು ಗೌವರಿಸಲಾಯಿತು, ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತಗೊಂಡ ಶಿಕ್ಷಕರಿಗೂ ಶಾಸಕರು ಸನ್ಮಾನಿಸಿದರು.ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ನಗರಭಿವೃದ್ದಿ ಪ್ರಾದಿಕಾರದ ಆಯುಕ್ತ ಧರ್ಮೇಂದ್ರ, ಸಿಡಿಪಿಒ ರಾಜೇಶ್, ಡಿವೈಎಸ್ಪಿ ಪಾಂಡುರಂಗ, ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾಶಸ್ತ್ರ ಚಿಕ್ಸಿಕ ಡಾ.ಸುರೇಶ್‌ಕುಮಾರ್, ಆರ್‌ಟಿಒ ನಯಾಜ್‌ಪಾಷ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡ ಅ.ಮು.ಲಕ್ಷ್ಮಿನಾರಾಯಣ್ ಇದ್ದರು.