ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದು ಈವರೆಗೆ ಇಬ್ಬರು ಮೃತಪಟ್ಟಿದ್ದು, 16 ಮಂದಿಗೆ ಗಾಯಗಳಾಗಿವೆ. ನಗರದಲ್ಲಿ ಪೂರ್ವ ಮುಂಗಾರು ಆರಂಭಗೊಂಡ ಮಾರ್ಚ್‌ನಿಂದ ಈವರೆಗೆ ಬರೋಬ್ಬರಿ 1,233 ಮರಗಳು ಸಂಪೂರ್ಣವಾಗಿ ಧರೆಗುರುಳಿದ್ದು, 3,308 ರಂಬೆ ಕೊಂಬೆಗಳು ಧರೆಗುರುಳಿವೆ. ಮಳೆ-ಗಾಳಿ ಇಲ್ಲದ ಸಂದರ್ಭದಲ್ಲಿಯೂ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ಉದಾಹರಣೆಯೂ ಇದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದು ಈವರೆಗೆ ಇಬ್ಬರು ಮೃತಪಟ್ಟಿದ್ದು, 17 ಮಂದಿಗೆ ಗಾಯಗಳಾಗಿವೆ. ನಗರದಲ್ಲಿ ಪೂರ್ವ ಮುಂಗಾರು ಆರಂಭಗೊಂಡ ಮಾರ್ಚ್‌ನಿಂದ ಈವರೆಗೆ ಬರೋಬ್ಬರಿ 1,233 ಮರಗಳು ಸಂಪೂರ್ಣವಾಗಿ ಧರೆಗುರುಳಿದ್ದು, 3,308 ರಂಬೆ ಕೊಂಬೆಗಳು ಧರೆಗುರುಳಿವೆ. ಮಳೆ-ಗಾಳಿ ಇಲ್ಲದ ಸಂದರ್ಭದಲ್ಲಿಯೂ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ಉದಾಹರಣೆಯೂ ಇದೆ.ಹೀಗೆ, ಮರ ಹಾಗೂ ಮರದ ರೆಂಬೆಕೊಂಬೆ ಬಿದ್ದ ಸಂದರ್ಭದಲ್ಲಿ ಇಬ್ಬರು ಆಟೋ ಚಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ 16 ಮಂದಿಗೆ ಎದೆ, ಬೆನ್ನು ಮೂಳೆ, ಕೈ-ಕಾಲಿನ ಮೂಳೆಗಳು ಮುರಿತವಾಗಿ, ಗಾಯಗಳಾಗಿವೆ. ಕೆಲವರಿಗೆ ಶಾಶ್ವತ ದೈಹಿಕ ಅಂಗವೈಕಲ್ಯ ಉಂಟಾಗಿದೆ.
ಬಿಬಿಎಂಪಿಯು ಈ ರೀತಿಯ ಪ್ರಾಣ ಹಾನಿ ಹಾಗೂ ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ ತಲಾ ಐದು ಲಕ್ಷ ರು. ಪರಿಹಾರ ನೀಡಲಾಗಿದೆ. ಇನ್ನು ಮೂಳೆ ಮುರಿತ ಸೇರಿದಂತೆ ಮೊದಲಾದ ಚಿಕಿತ್ಸೆಗೆ ಆಸ್ಪತ್ರೆ ವೆಚ್ಚವನ್ನು ಭರಿಸಿದೆ.ಇಬ್ಬರು ಮೃತಪಟ್ಟ ಕುಟುಂಬ ಪರಿಹಾರ ನೀಡಿರುವುದು ಸೇರಿದಂತೆ 18 ಮಂದಿಯ ಪೈಕಿ 7 ಮಂದಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಉಳಿದವರೆಗೆ ಚಿಕಿತ್ಸೆ ವೆಚ್ಚವಾಗಿ ₹3.56 ಲಕ್ಷ ನೀಡಲಾಗಿದೆ. ಒಟ್ಟು ಈವರೆಗೆ ಬಿಬಿಎಂಪಿ ಮರ ಬಿದ್ದು ಹಾನಿ ಪರಿಹಾರ ಮತ್ತು ಚಿಕಿತ್ಸೆಗೆ ₹10 ಕೋಟಿ ಅಧಿಕ ವೆಚ್ಚ ಮಾಡಿದೆ.