ಮಾಗಡಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಶಶಾಂಕ್ ಅವರಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಸಮೀಪ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.ತಾಲೂಕಿನ ಬೆಳಗುಂಬ ಗ್ರಾಮದ ಗುಡ್ಡೇಗೌಡ ರವರ ಪುತ್ರ ರಾಜೇಶ್ (27) ಮೃತರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರು, ಕೆಲಸ ಮುಗಿಸಿಕೊಂಡು ರಾತ್ರಿ 10ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು.ಈ ವೇಳೆ ಮಾಗಡಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಶಶಾಂಕ್ ಅವರಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.ಕಾರು ನಿಲ್ಲಸಿಲ್ಲ ಎಂದು ಆರೋಪ:
ಅಪಘಾತ ನಡೆದ ಸಮಯದಲ್ಲಿ ಕಾರನ್ನು ನಿಲ್ಲಿಸದೆ ಏಕಾಏಕಿ ಕಾರನ್ನು ಒಡೆಸಿಕೊಂಡು ಹೋಗಿದ್ದು ಸ್ಥಳದಲ್ಲಿದ್ದ ಕೆಲವರು ಫಾರ್ಚುನರ್ ಕಾರು ಅಪಘಾತ ಮಾಡಿ ಬರುತ್ತಿದೆ ಎಂದು ಗುಡೇಮಾರನಹಳ್ಳಿ ಗ್ರಾಮಸ್ಥರಿಗೆ ತಿಳಿಸಿದ್ದು ಕಾರು ವೇಗವಾಗಿ ಹೋಗಿದ್ದನ್ನು ಗಮನಿಸಿದ ಸ್ಥಳೀಯರು ಹಿಂದೆ ಕಾರಿನಲ್ಲಿ ಹೋಗಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಲಕ್ಕೇನಹಳ್ಳಿ ಸಮೀಪ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಎಚ್.ಎಂ. ರೇವಣ್ಣರವರ ಪುತ್ರ ಶಶಾಂಕ್ ರೇವಣ್ಣ ಎಂಬುದು ಗೊತ್ತಾಗಿದೆ ಕಾರನ್ನು ಮುಂದೆ ನಿಲ್ಲಿಸುತ್ತೇನೆಂದು ಹೇಳಿ ಕಾರನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ ಅಪಘಾತವಾದಾಗ ಏನಾಗಿದೆ ಎಂಬುದನ್ನು ಗಮನಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.ಅಪಘಾತವಾಗಿದ್ದ ಸ್ಥಳಕ್ಕೆ ರಾತ್ರಿ ಎಚ್.ಎಂ.ರೇವಣ್ಣ ಬಂದು ಕಾರನ್ನು ನಿಲ್ಲಿಸಿ ಬೈಕ್ ಸವಾರನನ್ನು ನೋಡಿದಾಗ ಬೈಕ್ ಸವಾರ ಸಾವನಪ್ಪಿದ್ದು ತಿಳಿದು ಬಂದಿದೆ. ಎರಡು ಬೈಕ್‌ಗಳನ್ನು ಓವರ್ ಟೆಕ್ ಮಾಡಿ ನಮ್ಮ ಮಗನ ಕಾರಿಗೆ ಬಂದು ಬೈಕ್ ಗುದ್ದಿದ್ದು ಗುದ್ದಿದ್ದಾ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. ಅಪಘಾತ ಆಗಿರುವುದನ್ನು ವಿಷಾದಿಸುತ್ತೇವೆ ಸಾವಾಗಿರುವುದು ನೋವು ತಂದಿದೆ. ಮಾಗಡಿ ವಿಧಾನಸಭಾ ಕ್ಷೇತ್ರದ ಯುವಕನಾಗಿದ್ದು ಅವರ ಕುಟುಂಬಸ್ಥರು ನಮಗೆ ಪರಿಚಯವಿದ್ದು ಎಲ್ಲಾ ಕಾರ್ಯ ಮುಗಿದ ನಂತರ ನಾನು ಮನೆಗೆ ತೆರಳಿ ಅವರಿಗೆ ಸಾಂತ್ವನ ಹೇಳುತ್ತೇನೆ.ಅಪಘಾತವಾದ ಕಾರಿನಲ್ಲಿ ನನ್ನ ಮಗ, ಸೊಸೆ, ಮೊಮ್ಮಗಳು ಹಾಗೂ ಬೀಗರು ಇದ್ದಿದ್ದರಿಂದ ಗಾಬರಿಯಾಗಿ ಗಾಡಿಯನ್ನು ಮುಂದಕ್ಕೆ ಹೋಗಿದ್ದಾರೆ. ಕಾರಿಗೆ ಇನ್ಸೂರೆನ್ಸ್, ನಮ್ಮ ಚಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಎಲ್ಲವೂ ಇದೆ. ಕಾನೂನಿನ ಪ್ರಕಾರ ಕುಟುಂಬಕ್ಕೆ ಏನು ಪರಿಹಾರ ತಲುಪಬೇಕು ಎಲ್ಲಾ ಪರಿಹಾರ ತಲುಪಲಿ. ನಾನು ಕೂಡ ವಯಕ್ತಿಕವಾಗಿ ಕುಟುಂಬದ ಜತೆ ನಿಲ್ಲುವ ಕೆಲಸ ಮಾಡುತ್ತೇನೆ. ಭಯದಿಂದ ನನ್ನ ಮಗ ಹೋಗಿದ್ದು ಈಗಾಗಲೇ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನವನ್ನು ಕೂಡ ಬಿಡಲಾಗಿದೆ. ಆಕಸ್ಮಿಕವಾಗಿ ಅಪಘಾತ ನಡೆದಿದ್ದು ಉದ್ದೇಶಪೂರ್ವಕವಾಗಿ ಯಾವುದೇ ಅಪಘಾತ ಮಾಡಿಲ್ಲ ಎಂದು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ. ರೇವಣ್ಣ ಅಪಘಾತದ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕುದೂರು ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.