ನಿರ್ಗತಿಕ ಮಹಿಳೆಗೆ ಮನೆ ಹಸ್ತಾಂತರ

| Published : Mar 28 2024, 12:52 AM IST

ಸಾರಾಂಶ

ತಾಂಬಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಂಬಾ ಗ್ರಾಮದ ನಿರ್ಗತಿಕ ಮಹಿಳೆ ಸುಂದ್ರಾಬಾಯಿ ತೆಗ್ಗೇಳಿ ಅವರಿಗೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮನೆ ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಸಮಾಜ ಸೇವಕ ಗುರುಲಿಂಗಪ್ಪ ಗೋರನಾಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಾಂಬಾ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಂಬಾ ಗ್ರಾಮದ ನಿರ್ಗತಿಕ ಮಹಿಳೆ ಸುಂದ್ರಾಬಾಯಿ ತೆಗ್ಗೇಳಿ ಅವರಿಗೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮನೆ ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಸಮಾಜ ಸೇವಕ ಗುರುಲಿಂಗಪ್ಪ ಗೋರನಾಳ ಮಾತನಾಡಿದರು.ಜಿಲ್ಲಾ ನಿರ್ದೇಶಕ ಸಂತೋಷ ರೈ ಮಾತನಾಡಿ, ಗ್ರಾಮದ ನಿರ್ಗತಿಕ, ಅಸಹಾಯಕ ಮಹಿಳೆ ಸುಂದ್ರಾಬಾಯಿ ತೆಗ್ಗೇಳಿ ಸೇರಿದಂತೆ ಮೂರು ಕುಟುಂಬಕ್ಕೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣವನ್ನು ಮಾತೋಶ್ರೀ ಅಮ್ಮನವರ ಆಶಯದಂತೆ ನಿರ್ಮಾಣ ಮಾಡಿಕೊಡಲಾಗಿದೆ. ವಯಸ್ಸಾದ ಕಾಲದಲ್ಲಿ ನೆಮ್ಮದಿಯಿಂದ ಸಂತೋಷದಿಂದ ಬದುಕುವ ನಿಟ್ಟಿನಲ್ಲಿ ಕೊನೆಯ ಹಂತದವರೆಗೂ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಟ್ಟಿರುವುದು ಅಮ್ಮನವರು ತಮ್ಮದೇ ಆದ ಸೋರು ನಿರ್ಮಾಣವಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಈ ವಾತ್ಸಲ್ಯ ಮನೆಯನ್ನು ರಚನೆ ಮಾಡಿ ದುರ್ಬಲ ವರ್ಗದವರ ಜೊತೆಗೆ ನಾವಿದ್ದೇವೆ ಎನ್ನುವದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ತಾಲೂಕು ಯೋಜನಾಧಿಕಾರಿ ನಟರಾಜ ಎಮ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ರುದ್ರಪ್ಪ ಪೂಜಾರಿ, ಜ್ಞಾನ ವಿಕಾಸ ಯೋಜನಾಧಿಕಾರಿ ಶಕುಂತಲಾ ಮಾತನಾಡಿದರು. ಕಾಂಗ್ರೆಸ್ ಮುಖಂಡ ರಜಾಕಸಾಬ ಚಿಕ್ಕಗಸಿ, ಗ್ರಾಪಂ ಸದಸ್ಯರಾದ ರಾಮಚಂದ್ರ ದೊಡಮನಿ, ಚಿದಾನಂದ ಗೌಡಗಾವಿ, ದಾನಪ್ಪ ಯಳಕೋಟಿ, ತಾಪಂ ಸದಸ್ಯ ಪ್ರಕಾಶ ಮುಂಜಿ, ಗುರಪ್ಪ ಜಂಬಗಿ, ಕುಬೇರ ನಾವದಗಿ, ಪ್ರವೀಣ ತಂಗಾ, ಪತ್ರಕರ್ತರಾದ ಲಕ್ಷ್ಮಣ ಹಿರೇಕುರಬರ, ಸಿದ್ದು ಹತ್ತಳಿ, ವಿಠಲ ಕತ್ತಾಳೆ, ನಾಗಪ್ಪ ಜೋರಾಪುರ, ಯಮುನಾ ಅಂಬಲಗಿ, ಸವಿತಾ ಆರ್.ಕೆ, ಜಯಶ್ರೀ ಸೇರಿದಂತೆ ವಲಯದ ಸೇವೆ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಸಂಘದ ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.