ದೇವನಹಳ್ಳಿ: ಹುಟ್ಟುಹಬ್ಬ ಕೇವಲ ಆಚರಣೆಗೆ ಸೀಮಿತವಾಗದೆ ಸಾರ್ವಜನಿಕ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹುಟ್ಟುಹಬ್ಬಕ್ಕೆ ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಾಗೂ ಮಹಿಳೆಯರಿಗೆ ಬಾಗಿನ ಕೊಡಲಾಗಿದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು, ಲಯನ್‌ ಸಂಸ್ಥೆ ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಹುಟ್ಟುಹಬ್ಬಕ್ಕೆ ವಾಹನ ನೋಂದಣಿ ಮಾಡಿಸಿ ಹಸ್ತಾಂತರಿಸಿದ್ದೇನೆ. ಸಂಸ್ಥೆಗೆ ನನ್ನ ಸಹಕಾರ ಸದಾ ಇರಲಿದೆ ಎಂದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಮಹೇಶ್, ಯುವಘಟಕ ಅಧ್ಯಕ್ಷ ಹೊಸಹಳ್ಳಿ ಟಿ.ರವಿ, ಉಪಾಧ್ಯಕ್ಷ ಕೆ.ನಾಗೇಶ್, ಕಾರ್ಯಾಧ್ಯಕ್ಷ ರವೀಂದ್ರ, ಲಯನ್ಸ್ ಸಂಸ್ಥೆ ಅಧ್ಯಕ್ಷ ಶಂಕರ್, ಶ್ರೀರಾಮಯ್ಯ ಇತರರಿದ್ದರು.