ವಿಜಯಪುರ: ಪಟ್ಟಣದ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪತ್ರ (ಟಿಸಿ), ನೋಂದಣಿ ಪುಸ್ತಕ ಹಾಗೂ ಶಾಲಾ ಆಸ್ತಿಪಾಸ್ತಿಗಳೂ ಸೇರಿದಂತೆ ಹತ್ತಾರು ಪ್ರಮುಖ ದಾಖಲಾತಿಗಳು ನಶಿಸಿ ಹೋಗುತ್ತಿದ್ದು, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಕೂಡಲೇ ಎಚ್ಚೆತ್ತುಕೊಂಡು ಇವುಗಳನ್ನು ಗಣಕೀಕೃತ (ಅomಠಿuಣeಡಿizಚಿಣioಟಿ) ಗೊಳಿಸಬೇಕು ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಪ್ರಾರಂಭಗೊಂಡು ೮೦ ವರ್ಷಗಳಾಗಿವೆ. ಇಲ್ಲಿನ ಹಳೆಯ ದಾಖಲಾತಿ ಪುಸ್ತಕಗಳನ್ನು ಎಷ್ಟೇ ಮುತುವರ್ಜಿ ವಹಿಸಿ ರಕ್ಷಿಸಿದ್ದರೂ, ಕಾಲದ ಹೊಡೆತಕ್ಕೆ ಸಿಲುಕಿ ಬುಕ್‌ನಲ್ಲಿನ ಹಾಳೆಗಳು ಹಳತಾಗಿ, ಮುಟ್ಟಿದರೆ ಪುಡಿಪುಡಿಯಾಗುತ್ತಿದೆ.

ಪ್ರತಿಯೊಬ್ಬ ನಾಗರಿಕನ ಅಸ್ತಿತ್ವಕ್ಕೆ ಮತ್ತು ಆತನ ಶೈಕ್ಷಣಿಕ, ಸಾಮಾಜಿಕ ಬದುಕಿಗೆ ಶಾಲಾ ದಾಖಲಾತಿಗಳೇ ಮೂಲ ಆಧಾರ. ಅತ್ಯಂತ ಪ್ರಮುಖ ಸಾಕ್ಷಿ. ಇಂತಹ ದಶಕಗಳ ಇತಿಹಾಸವಿರುವ ಶಾಲೆಗಳ ದಾಖಲೆಗಳು ನಾಶವಾದರೆ, ಭವಿಷ್ಯದಲ್ಲಿ ಸಾರ್ವಜನಿಕರು ತಮ್ಮ ಅಸ್ತಿತ್ವ ನಿರೂಪಿಸಲು ಕಚೇರಿಗಳಿಗೆ ಅಲೆಯಬೇಕಾಗುತ್ತದೆ ಎಂದು ಕಿಶೋರ್ ಕುಮಾರ್ ಎಚ್ಚರಿಸಿದ್ದಾರೆ.

ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಲಿ:

ತಾಲ್ಲೂಕಿನ ಇತಿಹಾಸವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಈ ಎಲ್ಲಾ ಸರ್ಕಾರಿ ಶಾಲೆಗಳ ಅಮೂಲ್ಯ ದಾಖಲೆಗಳನ್ನು ಡಿಜಿಟಲೀಕರಣ (ಆigiಣಚಿಟizಚಿಣioಟಿ) ಮಾಡಿ ಕಂಪ್ಯೂಟರ್‌ಗಳಲ್ಲಿ ಸುರಕ್ಷಿತವಾಗಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆಯ ಮೇಲಿದೆ. ಸರ್ಕಾರ ಈ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ, ಹಳೆಯ ಶಾಲೆಗಳ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಯುದ್ಧೋಪಾದಿಯಲ್ಲಿ ಚಾಲನೆ ನೀಡಬೇಕು ಎಂದು ಸಾರ್ವಜನಿಕರ ಪರವಾಗಿ ತೀವ್ರ ಒತ್ತಾಯ ಕೇಳಿಬಂದಿದೆ.


ಕೋಟ್‌................

ಪ್ರೌಢಶಾಲೆಯ ಪಕ್ಕದಲ್ಲೇ ಇರುವ ಸರ್ಕಾರಿ ಮಾದರಿ ಬಾಲಕರ ಶಾಲೆಗೆ ಬರೋಬ್ಬರಿ ೧೧೫ ವರ್ಷಗಳ ಇತಿಹಾಸವಿದೆ. ಅಲ್ಲಿನ ಹಳೆಯ ದಾಖಲೆಗಳ ಪರಿಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ. ಹಳೆಯ ದಾಖಲೆಗಳು ಸಿಗುವ ಸಂಭವವೇ ಕ್ಷೀಣಿಸುತ್ತಿದೆ. ಇನ್ನು ೭-೮ ದಶಕಗಳನ್ನು ಕಂಡಿರುವ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ದಾಖಲೆಗಳೂ ಸಹ ಇದೇ ರೀತಿ ಹಾಳಾಗುತ್ತಿವೆ.

-ಕಿಶೋರ್ ಕುಮಾರ್, ಅಧ್ಯಕ್ಷರು, ಹಿರಿಯ ವಿದ್ಯಾರ್ಥಿಗಳ ಸಂಘ