ಕನ್ನಡಪ್ರಭ ವಾರ್ತೆ ಅಥಣಿ: ಜ.15ರಂದು ಸಂಕ್ರಾಂತಿ ಸಂಭ್ರಮದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹರಜಾತ್ರಾ ಮಹೋತ್ಸವ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಥಣಿ ಹಾಗೂ ಸುತ್ತಮುತ್ತಲಿನ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪೀಠದ ವಚನಾನಂದ ಸ್ವಾಮೀಜಿ ಕೋರಿದರು.

ಕನ್ನಡಪ್ರಭ ವಾರ್ತೆ ಅಥಣಿ: ಜ.15ರಂದು ಸಂಕ್ರಾಂತಿ ಸಂಭ್ರಮದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹರಜಾತ್ರಾ ಮಹೋತ್ಸವ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಥಣಿ ಹಾಗೂ ಸುತ್ತಮುತ್ತಲಿನ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪೀಠದ ವಚನಾನಂದ ಸ್ವಾಮೀಜಿ ಕೋರಿದರು.ಪಟ್ಟಣದಲ್ಲಿ ಹರಜಾತ್ರಾ ಮಹೋತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹರಿಹರ ಜಗದ್ಗುರು ಪೀಠದಲ್ಲಿ ಪ್ರತಿವರ್ಷ ವಿವಿಧ ಧಾರ್ಮಿಕ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಳೇದ ವರ್ಷ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ನಡೆಸಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಜಯಶಾಲಿಯಾದ ಕಿತ್ತೂರಿನ ವೀರರಾಣಿ ಚನ್ನಮ್ಮಳ ವಿಜಯೋತ್ಸವದ ದ್ವಿಶತಮಾನ ಸಮಾರೋಪ ಕಾರ್ಯಕ್ರಮ. ಈ ವರ್ಷದಿಂದ ನಾಡಿನ ಸಾಧಕ ಮಹಿಳೆಯರಿಗೆ ವೀರರಾಣಿ ಕಿತ್ತೂರು ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷರನ್ನಾಗಿ ಬಸವರಾಜ ಜೋರಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ವೀರಶೈವ ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಗುಡ್ಡಾಪುರ ಮಾತನಾಡಿ, ಪೀಠಾಧ್ಯಕ್ಷರಾಗಿದ್ದ ಲಿಂ.ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ 13ನೇ ಸ್ಮರಣೋತ್ಸವ ನಡೆಯಲಿದೆ. ವಚನಾನಂದ ಮಹಾಸ್ವಾಮಿಜಿ ಪೀಠಾರೋಹಣದ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ. ಧಾರ್ಮಿಕ ಪ್ರವಚನಗಳು, ವಿಶೇಷ ಪೂಜೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಶರಣರು, ಭಕ್ತಾದಿಗಳು ಹಾಗೂ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಈ ವೇಳೆ ಸಮಾಜದ ಮುಖಂಡರಾದ ಶಿವು ಗುಡ್ಡಾಪೂರ, ವಿಜಯಕುಮಾರ ನೇಮಗೌಡ, ಸುರೇಶ ಚಿಕ್ಕಟ್ಟಿ, ಶಿವಾನಂದ ಮಾಲಗಾಂವಿ, ಶಿವರುದ್ರಪ್ಪ ಘುಳಪ್ಪನವರ, ರಾಮಣ್ಣ ಧರಿಗೌಡ, ಸುರೇಶ ವಾಡೇದ, ರಾಜು ಗುಡೋಡಗಿ, ಎಸ್.ಪಿ.ತಾಂವಶಿ, ಚನ್ನಪ್ಪ ಹಂಚಿನಾಳ, ಶಿವಾನಂದ ತಂಗಡಿ, ಸದಾಶಿವ ಚಿಕ್ಕಟ್ಟಿ ಸೇರಿ ಹಲವರು ಇದ್ದರು.