ಹರಿಹರ ನಗರಸಭೆ ಕಂದಾಯ ನಿರೀಕ್ಷಕ, ಅಧಿಕಾರಿ ಲೋಕಾಯುಕ್ತ ಬಲೆಗೆ

| Published : Oct 26 2024, 12:54 AM IST

ಹರಿಹರ ನಗರಸಭೆ ಕಂದಾಯ ನಿರೀಕ್ಷಕ, ಅಧಿಕಾರಿ ಲೋಕಾಯುಕ್ತ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್ ಬಂಕ್ ನಿವೇಶನದ 3-4 ವರ್ಷದ ಕಂದಾಯ ಕಡಿಮೆ ಮಾಡಲು ಸುಮಾರು ₹50-₹60 ಸಾವಿರಕ್ಕೆ ಲಂಚಕ್ಕೆ ಬೇಡಿಕೆಯಿಟ್ಟು, ₹20 ಸಾವಿರ ಪಡೆಯುವಾಗ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹಾಗೂ ಕಂದಾಯ ಅಧಿಕಾರಿ ಲೋಕಾಯುಕ್ತರ ಗಾಳಕ್ಕೆ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.

- ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ, ಕಂದಾಯ ಅಧಿಕಾರಿ ಯು.ರಮೇಶ ಆರೋಪಿಗಳು

- - - - ಕಂದಾಯ ಮೊತ್ತ ಕಡಿಮೆಗೊಳಿಸಲು ₹50-60 ಸಾವಿರ ಲಂಚ ನೀಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು

- ಪೆಟ್ರೋಲ್‌ ಬಂಕ್‌ ಜಾಗದ ಮಾಲೀಕನಿಂದ ಲಂಚ ಪಡೆಯುವಾಗ ಪೊಲೀಸರ ದಾಳಿ - ಲಂಚ ನೀಡುವಂತೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ರಾಜು ಲಕ್ಷ್ಮಣ ಕಾಂಬ್ಳೆ ಎಂಬವರಿಗೆ ಬೇಡಿಕೆ

- ಮೂರ್ನಾಲ್ಕು ವರ್ಷಗಳ ₹1,39,400 ಬಾಕಿ ಉಳಿಸಿಕೊಂಡಿದ್ದ ಜಾಗದ ಮಾಲೀಕ ರಾಜು ಕಾಂಬ್ಳೆ

- ಹರಿಹರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀದೇವಿ ಪೆಟ್ರೋಲ್‌ ಬಂಕ್‌ ನಿವೇಶನ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪೆಟ್ರೋಲ್ ಬಂಕ್ ನಿವೇಶನದ 3-4 ವರ್ಷದ ಕಂದಾಯ ಕಡಿಮೆ ಮಾಡಲು ಸುಮಾರು ₹50-₹60 ಸಾವಿರಕ್ಕೆ ಲಂಚಕ್ಕೆ ಬೇಡಿಕೆಯಿಟ್ಟು, ₹20 ಸಾವಿರ ಪಡೆಯುವಾಗ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹಾಗೂ ಕಂದಾಯ ಅಧಿಕಾರಿ ಲೋಕಾಯುಕ್ತರ ಗಾಳಕ್ಕೆ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ನಿವಾಸಿ ರಾಜು ಲಕ್ಷ್ಮಣ ಕಾಂಬ್ಳೆ ಎಂಬವರು ಹರಿಹರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀದೇವಿ ಪೆಟ್ರೋಲ್‌ ಬಂಕ್‌ ನಿವೇಶನ ಹೊಂದಿದ್ದಾರೆ. ಮೂರ್ನಾಲ್ಕು ವರ್ಷಗಳ ಕಂದಾಯ ಪಾವತಿ ಬಾಕಿ ಉಳಿಸಿಕೊಂಡಿದ್ದರು. ಹರಿಹರ ನಗರಸಭೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ ಹಾಗೂ ಕಂದಾಯ ಅಧಿಕಾರಿ ಯು.ರಮೇಶ ಸದರಿ ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ ₹1,39,400 ಪಾವತಿಸುವಂತೆ ಜಾಗದ ಮಾಲೀಕ ರಾಜು ಲಕ್ಷ್ಮಣ ಕಾಂಬ್ಳೆಗೆ ಹೇಳಿದ್ದರು.

ಸದ್ಯಕ್ಕೆ 2020-2021ನೇ ಸಾಲಿನ ಕರದಂತೆ ಈವರೆಗೆ ಲೆಕ್ಕ ಹಾಕಿ ಬರುವ ಕಂದಾಯ ಮೊತ್ತ ₹1,39,400 ಗಳಲ್ಲಿ ಕಡಿಮೆ ಮಾಡಿ, ಉಳಿದ ಹಣದಲ್ಲಿ ಶೇ.50ರಷ್ಟು ಅಂದರೆ ಸುಮಾರು ₹50-60 ಸಾವಿರ ಮೊತ್ತವನ್ನು ಲಂಚವಾಗಿ ನೀಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಆದರೆ, ಪಿರ್ಯಾದಿ ರಾಜು ಎಲ್‌. ಕಾಂಬ್ಳೆಗೆ ಲಂಚದ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಈ ಕಾರಣಕ್ಕೆ ಹರಿಹರ ನಗರಸಭೆಯ ಇಬ್ಬರೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅ.23ರಂದು ಮೊಕದ್ದಮೆ ದಾಖಲು ಮಾಡಿದ್ದರು.

ಸಂ:11/2024 ಕಲಂ:7(ಎ) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡರು. ಬಂಕ್ ಜಾಗದ ಮಾಲೀಕ ರಾಜು ಕಾಂಬ್ಳೆಯಿಂದ ಹರಿಹರ ನಗರಸಭೆಯ ಎ-1 ಆರೋಪಿತ ಅಧಿಕಾರಿ ನಾಗೇಶ ₹20 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಕೈಗೆ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ. ಅನಂತರ 2ನೇ ಆರೋಪಿ ಅಧಿಕಾರಿ ಯು.ರಮೇಶನನ್ನೂ ಲೋಕಾಯುಕ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ, ಪೊಲೀಸ್ ಉಪಾಧೀಕ್ಷಕಿ ಕೆ.ಕಲಾವತಿ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಸಿ.ಮಧುಸೂದನ್‌, ಪ್ರಭು ಬ.ಸೂರಿನ, ಪಿ.ಸರಳ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

- - - -25ಕೆಡಿವಿಜಿ3: ನಾಗೇಶ

-25ಕೆಡಿವಿಜಿ4: ಯು.ರಮೇಶ