ಕಿಕ್ಕೇರಿ:

ಮಾನವನ ಒಳಿತು ಕೆಡುಕುಗಳನ್ನು ತೋರಿಸಿ ಸನ್ನಡತೆಗೆ ಸಾಗಿಸಲು ನಾಟಕಗಳು ದಾರಿದೀಪವಾಗಿವೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.

ಗೋವಿಂದನಹಳ್ಳಿ ವೀರಭದ್ರೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಏರ್ಪಡಿಸಿದ್ದ ಕುರುಕ್ಷೇತ್ರ ನಾಟಕದ ವೇಳೆ ಮಾತನಾಡಿ, ಕುರುಕ್ಷೇತ್ರ ನಾಟಕದಲ್ಲಿರುವ ಎಲ್ಲ ಘಟನೆಗಳು ಬದುಕಿಗೆ ಹತ್ತಿರದ ಸತ್ಯ ಘಟನೆ, ಸಂಗತಿಗಳಾಗಿವೆ ಎಂದರು.

ಹಠ, ದ್ವೇಷವಿದ್ದರೆ ದುರ್ಯೋಧನನ ಸ್ಥಿತಿ, ಧರ್ಮದ ಮಾರ್ಗದಲ್ಲಿ ನಡೆದರೆ ಧರ್ಮರಾಯನಂತೆ ಬದುಕುವ, ಶೂರನಂತಿದ್ದರೆ ಕರ್ಣನಂತೆ ಕೀರ್ತಿ, ಶಕ್ತಿಶಾಲಿಯಾದರೆ ಭೀಮನಂತಿರಲು, ಎಲ್ಲವನ್ನು ಅಳೆದು ಸುರಿಯುವ ರೀತಿಯಲ್ಲಿ ಸಂಧಾನವನ್ನು ಮಾಡುವ ಕೃಷ್ಣನಂತೆ ಇರಬೇಕು ಎಂಬುದನ್ನು ಕುರುಕ್ಷೇತ್ರ ನಾಟಕ ತೋರಿಸಿಕೊಡಲಿದೆ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ದೂರದ ಆಲೋಚನೆ ಇಲ್ಲದೆ ವೀಕ್ಷಣೆ ಮಾಡುವ ದೂರದರ್ಶನ ಬದುಕನ್ನು ಕಿತ್ತು ಕೊಳ್ಳುತ್ತಿದ್ದರೆ, ಮೊಬೈಲ್ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿದೆ. ಎಲ್ಲರ ಮನಸ್ಸಿಗೆ ಉಲ್ಲಾಸ ನೀಡುವ ರಂಗಕಲೆಯ ಮೇಲೆ ಅಭಿರುಚಿ ಮೂಡಿಸಿಕೊಳ್ಳಬೇಕು. ಕಲೆ ಬದುಕನ್ನು ಕಟ್ಟಿಕೊಟ್ಟರೆ ಮೊಬೈಲ್ ಬದುಕನ್ನು ಕಿತ್ತುಕೊಳ್ಳಲಿದೆ ಎಚ್ಚರಿಕೆ ನೀಡಿದರು.


ಬಿಜೆಪಿ ಮುಖಂಡ ಚೋಕನಹಳ್ಳಿ ಪ್ರಕಾಶ್ ಮಾತನಾಡಿ, ನಾಟಕಗಳನ್ನು ಕಲಾವಿದರು ಕಷ್ಟಪಟ್ಟು ಮಾಡುತ್ತಾರೆ. ನಾಟಕ ಮುಗಿಯುವವರಿಗೆ ವೀಕ್ಷಣೆ ಮಾಡಿ ಎಂದು ವಿನಂತಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಶಾಮಣ್ಣ, ಕೆಂಪೇಗೌಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್. ಆನಂದ್, ಭರತ್ ಮಾಸ್ತಿ, ಪ್ರಕಾಶ್, ಕುಮಾರ್, ಅಶೋಕ, ಚಿನ್ನಸ್ವಾಮಿ, ಮೂರ್ತಿ, ಲಿಂಗಪ್ಪ, ರೇಣುಕಾ, ನಾಗರಾಜು, ಗ್ರಾಮ ಮುಖಂಡರು ಇದ್ದರು.

ಪವಿತ್ರ ರಂಜಾನ್ ವಿಶ್ವಕ್ಕೆ ಶಾಂತಿ ಸಿಗುವಂತೆ ಮಾಡಲಿ: ಪಿ.ರವಿಕುಮಾರ್‌ಕನ್ನಡಪ್ರಭ ವಾರ್ತೆ ಮಂಡ್ಯಪವಿತ್ರ ರಂಜಾನ್ ಹಬ್ಬವು ವಿಶ್ವಕ್ಕೆ ಶಾಂತಿ ದೊರಕುವಂತೆ ಮಾಡಲಿ. ವಿಶ್ವದಲ್ಲಿ ನಡೆಯುತ್ತಿರುವ ಯುದ್ಧವು ನಿಲ್ಲುವಂತಾಗಲಿ ಎಂದು ಶಾಸಕ ಪಿ.ರವಿಕುಮಾರ್‌ ಆಶಿಸಿದರು.

ನಗರದ ಗಾಂಧೀನಗರದಲ್ಲಿ ಹಮ್ಮಿಕೊಂಡಿದ್ದ ಇಫ್ತೀಯಾರ್‌ಕೂಟದಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಜನಾಂಗದವರು ಕಳೆದ ಹಲವು ದಿನಗಳಿಂದ ಉಪವಾಸದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ರಂಜಾನ್ ಹಬ್ಬ ಬರಲಿದೆ. ರಂಜಾನ್ ಎಲ್ಲಾ ವರ್ಗಕ್ಕೂ ಒಳಿತನ್ನು ಉಂಟುಮಾಡಲಿ ಎಂದು ಹೇಳಿ.ಮುಡಾ ಮಾಜಿ ಅಧ್ಯಕ್ಷ ಅಸಾದುಲ್ಲಾಖಾನ್ ಮಾತನಾಡಿ, ರಂಜಾನ್ ಮಾಸದಲ್ಲಿ ಮುಸಲ್ಮಾನ್ ಬಾಂಧವರು ಸಮಾಜಕ್ಕೆ ಒಳಿತಾಗಲಿ ಎಂದು ಉಪವಾಸ ಮಾಡುತ್ತಾರೆ. ಜಾತಿ, ಧರ್ಮದ ಬೇಧವಿಲ್ಲದೇ ಜನರು ಇಫ್ತಿಯಾರ್ ಕೂಟಕ್ಕೆ ಆಗಮಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ನಡುವೆ ಸೌಹಾರ್ದತೆ ಹೀಗೆ ಮುಂದುವರೆದುಕೊಂಡು ಹೋಗಬೇಕು ಎಂದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ನಂತರ ನೂರಾರು ಮಂದಿ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡಿದ್ದರು.