ಸಾರಾಂಶ
ಹಾವೇರಿ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ತಾವು ₹ 55.67 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಆನಂದಸ್ವಾಮಿ ಗಡ್ಡದೇವರಮಠ ಅವರ ಬಳಿ ₹೫೦ ಸಾವಿರ ನಗದು, ಬ್ಯಾಂಕ್ ಮತ್ತು ಫೈನಾನ್ಸ್‌ಗಳಲ್ಲಿ ೧.೬೯ ಕೋಟಿ, ವಿಮೆ, ಅಂಚೆ ಕಚೇರಿ ಇತ್ಯಾದಿಗಳಲ್ಲಿ ₹೭.೭೬ ಕೋಟಿ ಠೇವಣಿ ಹೊಂದಿದ್ದಾರೆ. ವಿವಿಧ ಸಂಸ್ಥೆ, ಫರ್ಮ್ಸ್, ಟ್ರಸ್ಟ್‌ಗಳು ಹಾಗೂ ವೈಯಕ್ತಿಕ ಸಾಲವಾಗಿ ₹ ೫.೧೫ ಕೋಟಿ ತೊಡಗಿಸಿದ್ದಾರೆ. ಒಂದು ಹೊಂಡಾ ಸಿಟಿ ಕಾರು, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಬ್ರಿಡ್ ಹಾಗೂ ಒಂದು ಬೈಕ್ ಸೇರಿದಂತೆ ₹ 50.54 ಲಕ್ಷ ಮೌಲ್ಯದ ವಾಹನಗಳನ್ನು ಇವರು ಹೊಂದಿದ್ದಾರೆ. ₹7.80 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು ₹19.16 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.₹6.20 ಕೋಟಿ ಮೌಲ್ಯದ ೫೬ ಎಕರೆ ಕೃಷಿ ಜಮೀನು ಹೊಂದಿದ್ದು, ₹೧೬.೮೭ ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಬೆಳಗಾವಿ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ೧೨.೧೫ ಕೋಟಿ ಮೌಲ್ಯದ ವಾಸದ ಮನೆ ಹೊಂದಿದ್ದಾರೆ. ಅಲ್ಲದೇ ಬೆಳಗಾವಿ, ಮೈಸೂರು ಜಿಲ್ಲೆಯಲ್ಲಿ ₹೧.೨೭ ಕೋಟಿ ಮೌಲ್ಯದ ಆಸ್ತಿ ಸೇರಿದಂತೆ ಒಟ್ಟು ₹19.16 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹ 36.51 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹55.67 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರು ₹೨೨.೪೬ ಕೋಟಿ ಸಾಲ ಹೊಂದಿದ್ದಾರೆ.
ನಾಲ್ಕು ಮಕ್ಕಳಿದ್ದು, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ.ಚಿನ್ನಾಭರಣ: ೨ ಕೆಜಿ ಬಂಗಾರ ಪಿತ್ರಾರ್ಜಿತವಾಗಿ ಬಂದಿದ್ದು, ೯೨ ಗ್ರಾಂ ಚಿನ್ನ, ೪ ಕೆಜಿ ಬೆಳ್ಳಿ ಸೇರಿ ಒಟ್ಟು ₹ ೭.೮೦ ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಬಳಿ ೭೫೦ ಗ್ರಾಂ ಚಿನ್ನ, ೧ ಕೆಜಿ ಬೆಳ್ಳಿ ಸೇರಿದಂತೆ ಒಟ್ಟು ೮೦ ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಅವರ ಪತ್ನಿ ಬಳಿ ₹ ೬೦ ಸಾವಿರ ನಗದು ಸೇರಿದಂತೆ ೬.೮೦ ಲಕ್ಷ ಮೌಲ್ಯದ ಚರಾಸ್ತಿ ಇದ್ದು, ಮೊದಲ ಪುತ್ರಿ ಬಳಿ ₹ ೩೦.೨೯ ಲಕ್ಷ, ಎರಡನೇ ಪುತ್ರಿ ಬಳಿ ₹ ೧೦.೨೮ ಲಕ್ಷ, ಮೂರನೇ ಪುತ್ರಿ ಬಳಿ ₹೧೦.೦೮ ಲಕ್ಷ ಹಾಗೂ ಪುತ್ರನ ಬಳಿ ₹ ೬.೭೨ ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತ್ನಿ ಬಳಿ ₹ ೪೯.೭೨ ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ.