ಎಚ್‌,ಡಿ.ಕುಮಾರಸ್ವಾಮಿ ಅವರ ಉತ್ತಮ ಆರೋಗ್ಯ, ಹೆಚ್ಚಿನ ಅಯಸ್ಸು ವೃದ್ದಿಸುವ ಮೂಲಕ ಅವರ ಜನಪರ ಸೇವೆಗೆ ಮತ್ತಷ್ಟು ಶಕ್ತಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಮಾಜಿ ಮುಖ್ಯಮಂತ್ರಿ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೇಕ್‌ ಕತ್ತರಿಸಿ ತಮ್ಮ ನೆಚಿನ ನಾಯಕನಿಗೆ ಜೈಕಾರ ಮೊಳಗಿಸುವ ಮೂಲಕ ಶುಭಾಶಯ ಕೋರಿದರು. ಬಳಿಕ ಎಚ್‌,ಡಿ.ಕುಮಾರಸ್ವಾಮಿ ಅವರ ಉತ್ತಮ ಆರೋಗ್ಯ, ಹೆಚ್ಚಿನ ಅಯಸ್ಸು ವೃದ್ದಿಸುವ ಮೂಲಕ ಅವರ ಜನಪರ ಸೇವೆಗೆ ಮತ್ತಷ್ಟು ಶಕ್ತಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಬೆಳಿಗ್ಗೆ 11ಗಂಟೆಗೆ ಕೇಕ್‌ ಕತ್ತರಿಗೆ ಸಿಹಿ ಹಂಚಿದ ಬಳಿಕ ಮುಖಂಡರು ಮತ್ತು ಕಾರ್ಯಕರ್ತರೆಲ್ಲ ತೆರಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಬ್ರೆಡ್‌ ಹಾಗೂ ಹಣ್ಣುಗಳನ್ನು ವಿತರಿಸಿದರು. ನಂತರ ಪಟ್ಟಣದ ಹೊರವಲಯದಲ್ಲಿನ ವೃದ್ದಾಶ್ರಮಕ್ಕೆ ತೆರಳಿ ಅಲ್ಲಿನ ನೂರಾರು ಮಂದಿ ವೃದ್ದರಿಗೆ,ಅನ್ನಸಂತರ್ಪಣೆ ವಿತರಿಸಿ,ಆರೋಗ್ಯ ವಿಚಾರಿಸಿ ದೈರ್ಯ ತುಂಬಿದರು.

ಇದೇ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ,ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ, ಹಿರಿಯ ಮುಖಂಡರಾದ ಎನ್‌.ತಿಮ್ಮಾರೆಡ್ಡಿ, ರಾಜಶೇಖರಪ್ಪ, ಕೆ.ಎನ್‌.ರಾಮಕೃಷ್ಣರೆಡ್ಡಿ, ಅಕ್ಕಲಪ್ಪನಾಯ್ಡ್‌,ಜೆಡಿಎಸ್‌ ಕಾರ್ಯಾಧ್ಯಕ್ಷ,ಸೊಗಡು ವೆಂಕಟೇಶ್‌,ಗಡ್ಡಂ ತಿಮ್ಮರಾಜು, ಗ್ರಾಪಂ ಮಾಜಿ ಅಧ್ಯಕ್ಷ ರೊಪ್ಪ ಕೃಷ್ಣಪ್ಪ,ಮಾಜಿ ಪುರಸಭೆ ಸದಸ್ಯರಾದ ಮನಮಹೇಶ್, ಗೋಪಾಲ್‌, ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನೆರಳೇಕುಂಟೆ ಭರತ್‌ ಕುಮಾರ್‌, ಜೆಡಿಎಸ್‌ ರೈತ ವಿಭಾಗದ ಅಧ್ಯಕ್ಷ ಕೆಂಚಗಾನಹಳ್ಳಿ ಗಂಗಾಧರ ನಾಯ್ಡ್‌, ಮಂಜುನಾಥ ಚೌಧರಿ, ಶಾಂತಿ ಮೆಡಿಕಲ್‌ ದೇವರಾಜ್‌, ಅಲ್ಪ ಸಂಖ್ಯಾತರ ವಿಭಾಗದ ಯುನಿಸ್‌, ಎಸ್‌ಸಿ ನಗರ ಘಟಕದ ಅಧ್ಯಕ್ಷ ಅಪ್‌ಬಂಡೆ ಗೋಪಾಲ್‌, ಕೃಷ್ಣಗಿರಿ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾರಮೇಶ್, ಯುವ ಮುಖಂಡ ಓಬಳೇಶ್‌ ಇತರರಿದ್ದರು.