ದೇವನಹಳ್ಳಿ: ತಾಲೂಕು ನಾಗರಿಕರಿಗೆ ಮತ್ತು ಸಾರ್ವಜನಿಕರಿಗೆ ರೈತರಿಗೆ, ಬಗರ್ ಹುಕುಂ ಸಾಗುವಳಿ ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ಮನೆ ನಿವೇಶನ, ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ಛಕ್ತಿ ಪೂರೈಕೆ, ಅಕಾಲಿಕ ಮಳೆಯಿಂದಲೇ ಬೆಳೆ ನಷ್ಟ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿ.೨೧ರಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ರಾಜ್ಯ ಪ್ರಾಂತ ರೈತ ಸಂಘದ ಕೂಲಿ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಮೋಹನಬಾಬು ತಿಳಿಸಿದರು.

ಬಗರ್‌ಹುಕುಂ ಸಾಗುವಳಿ ವಿಚಾರ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರಾಂತ ರೈತ ಸಂಘ ಡಿ.21ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಜನಾಂದೋಲನ ಹಾಗೂ ಬೆಂಗಳೂರು ಚಲೋ ಪ್ರತಿಭಟನೆ ಸಂಬಂಧ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಪ್ರಜಾರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು.ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್. ವೀರಣ್ಣ ಮಾತನಾಡಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಮಹಾನಗರ ಪಾಲಿಕೆ ೧೮ ಕಿಲೋ ಮೀಟರ್, ನಗರ ಪಾಲಿಕೆ ೧೦ ಕಿಲೋಮೀಟರ್, ಪಂಚಾಯಿತಿ ಪಟ್ಟಣ ೫ ಕಿಲೋಮೀಟರ್ ವ್ಯಾಪ್ತಿಯನ್ನು ಕೂಡಲೇ ರದ್ದು ಪಡಿಸಬೇಕು. ತಹಸೀಲ್ದಾರ್ ಬಗರ್‌ಹುಕುಂ ಸಾಗುವಳಿ ಜಮೀನನ್ನು ತೆರವುಗೊಳಿಸುವುದನ್ನು ಕೂಡಲೇ ರದ್ದುಪಡಿಸಬೇಕು. ದರಖಾಸ್ತು ಮಂಡಳಿಯಿಂದ ಕೂಡಲೇ ಮಂಜೂರು ಮಾಡಿ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ಈಗಾಗಲೆ ವಶಪಡಿಸಿಕೊಂಡಿರುವ ಬಗರ್ ಹುಕುಂ ಸಾಗುವಳಿದಾರರ ಜಮೀನಿನ ರೈತರಿಗೆ ಶಿವಮೊಗ್ಗ ಮಾದರಿಯಲ್ಲಿ ಸೂಕ್ತ ಪರಿಹಾರ ನೀಡಬೇಕು. ಅಕಾಲಿಕ ಮಳೆಗೆ ನಷ್ಟವಾಗಿರುವ ಬೆಳಗಳ ಪರಿಹಾರವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಬಡವರ ಮತ್ತು ಕೂಲಿಕಾರ್ಮಿಕರ ವಸತಿಗಾಗಿ ಹತ್ತಾರು ವರ್ಷಗಳಿಂದ ನಿವೇಶನಗಳನ್ನು ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಗುವುದು. ರೈತರು ಮತ್ತು ಕನ್ನಡ ಪ್ರಜಾ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಗಳೂರಿಗೆ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಪ್ರಜಾ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಕೆ.ಪ್ರದೀಪ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶಬಾಬು, ರಾಜ್ಯ ಖಜಾಂಚಿ ಎ.ರಾಘವ, ಸಂಘಟನಾ ಕಾರ್ಯದರ್ಶಿ ಎಲ್.ಅರುಣಕುಮಾರ್, ಜಂಟಿ ಕಾರ್ಯದರ್ಶಿ ಎಸ್. ಮಂಜುನಾಥ, ತಾಲೂಕು ಅಧ್ಯಕ್ಷ ವೆಂಕಟರಾಜು , ಪ್ರದಾನ ಕಾರ್ಯದರ್ಶಿ ಮಧು ಎನ್, ಉಪಾಧ್ಯಕ್ಷ ಗೋವಿಂದರಾಜು, ನರಸಿಂಹಮೂರ್ತಿ, ಸಹ ಕಾರ್ಯದರ್ಶಿ ಪ್ರಭು, ಮುನಿರಾಜು, ನಾಗರಾಜು ಇತರರು ಉಪಸ್ಥಿತರಿದ್ದರು.೧೬ ದೇವನಹಳ್ಳಿ ಚಿತ್ರಸುದ್ದಿ :೦೧
ದೇವನಹಳ್ಳಿಯಲ್ಲಿ ಪ್ರಾಂತ ರೈತ ಸಂಘ ಬೆಂಗಳೂರು ಚಲೋ ಪ್ರತಿಭಟನೆ ಕುರಿತ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಪ್ರಾಂತ ರೈತ ಸಂಘದ ಕೂಲಿ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಮೋಹನಬಾಬು ಮಾಹಿತಿ ನೀಡಿದರು.