ಹದಿಹರೆಯದ ಸಮಸ್ಯೆಗಳು, ತಾಯಿ ಮಗುವಿನ ಆರೋಗ್ಯ, ತಾಯಿ ಎದೆ ಹಾಲಿನ ಮಹತ್ವ, ಲಸಿಕಾ ಕಾರ್ಯಕ್ರಮಗಳು, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ದಡಾರ, ರೂಬೆಲ್ಲ ಲಸಿಕೆ, ಸ್ವಚ್ಛತೆ ಮುಂತಾದವುಗಳ ಬಗ್ಗೆ ಜನತೆ ತಿಳಿದುಕೊಳ್ಳುವುದು ಅಗತ್ಯ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೀಲಾರ ಸಮುದಾಯ ಆರೋಗ್ಯ ಕೇಂದ್ರದಿಂದ ತಾಲೂಕಿನ ಆಲಕೆರೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಮುರಳೀಧರ್ ಬೀದಿನಾಟಕ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕಗಳು ಸಹಕಾರಿಯಾಗಿವೆ. ಹದಿಹರೆಯದ ಸಮಸ್ಯೆಗಳು, ತಾಯಿ ಮಗುವಿನ ಆರೋಗ್ಯ, ತಾಯಿ ಎದೆ ಹಾಲಿನ ಮಹತ್ವ, ಲಸಿಕಾ ಕಾರ್ಯಕ್ರಮಗಳು, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ದಡಾರ, ರೂಬೆಲ್ಲ ಲಸಿಕೆ, ಸ್ವಚ್ಛತೆ ಮುಂತಾದವುಗಳ ಬಗ್ಗೆ ಜನತೆ ತಿಳಿದುಕೊಳ್ಳುವುದು ಅಗತ್ಯ ಎಂದರು.

ತಡಗವಾಡಿಯ ಸ್ನೇಹಜೀವಿ ಸಾಂಸ್ಕೃತಿಕ ಯುವಕ ಸಂಘ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಆಯುಷ್ ವೈದ್ಯಾಧಿಕಾರಿಗಳಾದ ದಿವ್ಯಾ, ಮಧು, ಜಗದೀಶ್, ಎಂ.ಕೆ.ಸುಷ್ಮಾ, ಕಲಾತಂಡದ ಮುಖ್ಯಸ್ಥರಾದ ತಡಗವಾಡಿ ಟಿ.ಎಂ.ನಾಗರಾಜು, ಕಲಾವಿದರಾದ ಬೆಸಗರಹಳ್ಳಿ ಗುರುಸಿದ್ದು, ಯರಹಳ್ಳಿ ಕೃಷ್ಣ, ಚೆಲುವಸ್ವಾಮಿ, ಸಿ.ಎಂ.ಶ್ವೇತಾ, ಶರತ್‌ಬಾಬು, ಆಶಾ ಇತರರಿದ್ದರು.ಫೆ.೩ರಂದು ನೇರಲಕೆರೆ ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ

ಮಂಡ್ಯ:

ಬುದ್ಧ ಭಾರತ ಫೌಂಡೇಷನ್ ವತಿಯಿಂದ ಫೆ.೩ರಂದು ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ಸರ್ವಧರ್ಮ ಮಾನವ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಸದಸ್ಯ ಗಂಗರಾಜು ತಿಳಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ಶ್ರೀ ಮನೋರಕ್ಕಿತ ಭಂತೆ, ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಆಂಡ್ರೂಜಾನ್, ಮೊಹಮ್ಮದ್ ಕುನ್ನಿ, ಗುರುಬಚ್ಚನ್ ಸಿಂಗ್ ಭಾಗವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಎಸ್.ಬಿ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ನಿವೃತ್ತ ಡಿಸಿಪಿ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಇತರರು ಸಮಾರಂಭದಲ್ಲಿ ಭಾಗವಹಿಸುವರು ಎಂದರು.

ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಮುಖಂಡರಾದ ಮಹೇಂದ್ರ, ಪ್ರಶಾಂತ್, ನರಸಿಂಹಮೂರ್ತಿ ಇತರರಿದ್ದರು.