ಬೀರೂರುಆಟೋಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತನಾಗಿರುವುದು ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಟೋದಲ್ಲಿದ್ದ ಇತರರಿಗೆ ಸಣ್ಣ ಪುಟ್ಟ ಗಾಯ
ಕನ್ನಡಪ್ರಭ ವಾರ್ತೆ, ಬೀರೂರುಆಟೋಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತನಾಗಿರುವುದು ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಲಪ್ಪ ಬಡಾವಣೆಯ ನಿವಾಸಿ ಆಟೋ ಚಾಲಕ ಶಿವು (45) ಮೃತ ವ್ಯಕ್ತಿ. ಪತ್ನಿ ಪುಷ್ಪಲತಾ, ಒಬ್ಬನೇ ಮಗನನ್ನು ಶಿವು ಅಗಲಿದ್ದಾರೆ. ಆಟೋದಲ್ಲಿ ಅಂತರಘಟ್ಟೆ ಜಾತ್ರೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಆಟೋದಲ್ಲಿದ್ದ ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಅಂತರಘಟ್ಟೆ ರಥೋತ್ಸವದ ಜಾತ್ರೆಗೆ ಜ.31ರ ಬೆಳಗಿನ ಜಾವ 5.30ರಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ದೋಗೆಹಳ್ಳಿ ಸಮೀಪ ಹೋಗುವಾಗ ನಾಯಿಯೊಂದು ದಿಢೀರ್ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋದಾಗ ಆಟೋ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.ಆಟೋದಲ್ಲಿದ್ದ ಹನುಮಂತರಾವ್, ಪ್ರಮೀಳಬಾಯಿ, ಪಲ್ಲವಿ, ಧನ್ಯ ಮತ್ತು ವರುಣಾಗೆ ಪೆಟ್ಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಆಟೋ ಹಿಂಬದಿಯಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಶಿವು ಅವರ ತಮ್ಮ ಶ್ರೀನಿವಾಸ್ ಮತ್ತು ಪ್ರೇಮಕುಮಾರ್, ಈ ಅಪಘಾತ ಕಂಡು ಕೂಡಲೇ ಅವರನ್ನು ಬೀರೂರು ಸಾರ್ವಕನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಶಿವು ಮೃತಪಟ್ಟಿದ್ದರು. ನಂತರ ಉಳಿದ ಗಾಯಾಳುಗಳನ್ನು ಪ್ರಾಥಮಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು. ಪಿಎಸೈ ಡಿ.ವಿ.ತಿಪ್ಪೇಶ್ ಸ್ಥಳ ಮಹಜರು ನಡೆಸಿ, ಬೀರೂರು ಪೊಲೀಸರು ಶಿವು ತಮ್ಮ ಶ್ರೀನಿವಾಸ್ ನೀಡಿದ ದೂರು ದಾಖಲಿಸಿಕೊಂಡಿದ್ದಾರೆ.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸಂತಾಪ:ಬೆಳ್ಳಂಬೆಳಗ್ಗೆ ಬಾಡಿಗೆಗೆ ಹೋದ ಗೆಳೆಯ ಶಿವು ಆಟೋ ಪಲ್ಟಿಯಾಗಿ ಸಾವನಪ್ಪಿದ್ದಾನೆಂಬ ಸುದ್ದಿ ಆಟೋ ಚಾಲಕರಿಗೆ ತಿಳಿದು ಆತಂಕಗೊಂಡ ಬಹಳಷ್ಟು ಚಾಲಕರು ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ದೇವಿಯ ಜಾತ್ರೆಗೆ ಹೋದವನು ಮಸಣ ಸೇರುತ್ತಾನೆಂದು ಗೊತ್ತಾಗಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.ಶಿವುವಿನ ಕುಟುಂಬಕ್ಕೆ ಶಾಸಕ ಕೆ.ಎಸ್.ಆನಂದ್ ಭೇಟಿ ಮಾಡಿಸಿ ಕೈಲಾದ ಸಹಾಯ ಮಾಡಿಸುವುದಾಗಿ ಪುರಸಭಾ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್ ಪತ್ರಿಕೆಗೆ ತಿಳಿಸಿದರು.31 ಬೀರೂರು 2ಶಿವು (ಕೊಂಗಾಳಿ)45 ವರ್ಷ