ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ: ನಾವು ವಿದೇಶಿ ಆಹಾರ ಪದಾರ್ಥಗಳಾದ ಫಾಸ್ಟ್ ಫುಡ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದು, ಮಕ್ಕಳಿಗೂ ಅದನ್ನೇ ತಿನ್ನಿಸುತ್ತಿರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೊಸ ಹೊಸ ರೋಗಿಗಳು ಉತ್ಪತ್ತಿಯಾಗುತ್ತಿವೆ ಎಂದು ಆರಕ್ಷಕ ಮೌಲಾಲಿ ಆಲಗೂರ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಿಂದಗಿ: ನಾವು ವಿದೇಶಿ ಆಹಾರ ಪದಾರ್ಥಗಳಾದ ಫಾಸ್ಟ್ ಫುಡ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದು, ಮಕ್ಕಳಿಗೂ ಅದನ್ನೇ ತಿನ್ನಿಸುತ್ತಿರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೊಸ ಹೊಸ ರೋಗಿಗಳು ಉತ್ಪತ್ತಿಯಾಗುತ್ತಿವೆ ಎಂದು ಆರಕ್ಷಕ ಮೌಲಾಲಿ ಆಲಗೂರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಲಿಟಲ್ ವಿಂಗ್ಸ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಆಯೋಜಿಸಿದ್ದ ಆಹಾರ ಉತ್ಸವದಲ್ಲಿ ಅವರು ಮಾತನಾಡಿದರು. ಮನೆಯಲ್ಲಿ ತಯಾರಿಸಿದ ಆಹಾರದ ಅವಶ್ಯಕತೆ ಹಾಗೂ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಒಂದಲ್ಲಾ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡುತ್ತ ಬರುತ್ತಿರುವ ಲಿಟಲ್ ವಿಂಗ್ಸ್ ಶಾಲೆಯ ಶಿಕ್ಷಕರಿಗೆ ಅಭಿನಂದಿಸಿದರು.ಪಾಲಕರಾದವರು ಮಕ್ಕಳಿಗೆ ಬಾಲ್ಯದಲ್ಲಿಯೇ ಆಟ-ಪಾಠದ ಜೊತೆಗೆ ದೇಶಿಯ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳ ಕುರಿತು ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಆಹಾರ ಮೇಳ ಅಥವಾ ಆಹಾರ ಉತ್ಸವಗಳಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಗ ಮಕ್ಕಳಿಗೆ ಗುಣಮಟ್ಟದ ಆಹಾರ ಸೇವನೆಯ ಅರಿವು ಮೂಡುತ್ತದೆ. ಜೊತೆಗೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಮೂಡುತ್ತದೆ. ಅಡುಗೆ ಮಾಡುವ ಬಗ್ಗೆಯೂ ಮನವರಿಕೆ ಮಾಡಿಕೊಳ್ಳುತ್ತಾರೆ. ಶಾಲಾ ಬಿಡುವಿನ ವೇಳೆಯಲ್ಲಿ ಪೋಷಕರು ಅಡುಗೆ ಮಾಡುವುದಕ್ಕೆ ಮಕ್ಕಳು ಸಹಾಯವಾಗುತ್ತಾರೆ. ಆದ್ದರಿಂದ ಮಕ್ಕಳಿಗೆ ಇಂದಿನಿಂದಲೇ ನಮ್ಮ ಸ್ವದೇಶಿ ಆರೋಗ್ಯಕರ ಆಹಾರ ಪದಾರ್ಥಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ಮಕ್ಕಳು ಮನೆಯಲ್ಲಿ ಪದಾರ್ಥಗಳನ್ನು ತಯಾರಿಸಿ ಆಹಾರ ಉತ್ಸವದಲ್ಲಿ ಪ್ರದರ್ಶನ ಮಾಡುವ ಮೂಲಕ ಸೃಜನಶೀಲತೆಯನ್ನು ವಿಕಾಸಗೊಳಿಸಿದ್ದಾರೆ ಎಂದು ಪತ್ರಕರ್ತ ಮಹಾಂತೇಶ ನೂಲನವರ ಹೇಳಿದರು.ಶಾಲೆಯ ಸಂಚಾಲಕಿ ಭಾರತಿ ಚೌಧರಿ, ಅಭಿಷೇಕ ಚೌಧರಿ ಪ್ರಸಾವಿಕ ಮಾತನಾಡಿದರು. ಗಣಿಯಾರ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಸಿದ್ಧಲಿಂಗ ಚೌಧರಿ ಅತಿಥಿಗಳಾಗಿದ್ದರು. ಆಹಾರ ಉತ್ಸವದಲ್ಲಿ ಮಕ್ಕಳ ಕುರುಕಲು ತಿನಿಸುಗಳು ತಿಂಡಿಗಳು ಗಮನ ಸೆಳೆದವು. ಆಹಾರ ಉತ್ಸವದಲ್ಲಿ ಮಂದಾರ ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು.