ಹನೂರಿನಲ್ಲಿ ಭಾರಿ ಬಿರುಗಾಳಿಯಿಂದ ತೋಟದ ಮನೆ ಮೇಲ್ಛಾವಣಿಗೆ ಹಾನಿ

| Published : Jul 29 2024, 12:54 AM IST

ಸಾರಾಂಶ

ಭಾರಿ ಬಿರುಗಾಳಿಗೆ ತೋಟದ ಮನೆಯ ಮೇಲ್ಛಾವಣಿ ಹಾನಿಯಾಗಿ ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಹನೂರು ತಾಲೂಕಿನ ಜಿಕೆ ಹೊಸೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.

ಲಕ್ಷಾಂತರ ರು. ನಷ್ಟ । ಜಿಕೆ ಹೊಸೂರು ಗ್ರಾಮದಲ್ಲಿ ಘಟನೆ । ಪರಿಹಾರಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಹನೂರು

ಭಾರಿ ಬಿರುಗಾಳಿಗೆ ತೋಟದ ಮನೆಯ ಮೇಲ್ಛಾವಣಿ ಹಾನಿಯಾಗಿ ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಜಿಕೆ ಹೊಸೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.

ಹನೂರು ತಾಲೂಕಿನ ಸಮೀಪದ ಜಿಕೆ ಹೊಸೂರು ಗ್ರಾಮದ ರೈತ ಮಾದೇಸ್ವಾಮಿಯವರ ತೋಟದ ಮನೆಯಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದ್ದ ಶೆಡ್ ಮೇಲ್ಛಾವಣಿ ಶೀಟ್‌ಗಳು ಹಾರಿ ಹೋಗಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ. ಜತೆಗೆ ಶೆಡ್‌ ಒಳಗಡೆ ಇದ್ದ ಕಾರ್ ಮತ್ತು ಟ್ರ್ಯಾಕ್ಟರ್‌ಗೂ ಸಹ ಹಾನಿಯಾಗಿದೆ.

ಪರಿಹಾರಕ್ಕೆ ಅಗ್ರಹ:

ಲಕ್ಷಾಂತರ ರು. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದ್ದ ಶೆಡ್ ಮೇಲ್ಛಾವಣಿ ಬಾರಿ ಬಿರುಗಾಳಿಗೆ ಸಿಲುಕಿ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಘಟನೆ ಒತ್ತಾಯಿಸಿದೆ.ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಹನೂರುಹೋಲಿ ಕ್ರಾಸ್ ಆಸ್ಪತ್ರೆ ವತಿಯಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.ಹನೂರು ಪಟ್ಟಣದ ಪೊಲೀಸ್ ಅಧಿಕಾರಿ ಸಿಬ್ಬಂದಿ ವರ್ಗದವರಿಂದ ರಕ್ತದಾನ ಶಿಬಿರ ಆಯೋಜಿಸುವಂತೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಹೋಲಿ ಕ್ರಾಸ್ ಆಸ್ಪತ್ರೆ ವ್ಯವಸ್ಥಾಪಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಿಬಿರವನ್ನು ಆಯೋಜಿಸಿದ್ದರು.ಹೋಲಿ ಕ್ರಾಸ್ ಆಸ್ಪತ್ರೆಯ ಸಂಯೋಜಕಿ ಪುಷ್ಪಾವತಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಚಯ್ಯ ಮತ್ತು ಆರೋಗ್ಯ ಸಿಬ್ಬಂದಿ ಮಮತಾ, ಮಹದೇವಿ ಅವರಿಂದ ಪೊಲೀಸ್ ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗದವರಿಂದ ರಕ್ತದಾನ ಶಿಬಿರ ವ್ಯವಸ್ಥೆಯನ್ನು ಠಾಣೆಯಲ್ಲಿ ಕಲ್ಪಿಸಲಾಗಿತ್ತು. ಈ ಮೂಲಕ 14 ಜನ ಪೊಲೀಸ್ ಸಿಬ್ಬಂದಿ ರಕ್ತದಾನ ಮಾಡಿದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.