ಮಾನವ ಕಳ್ಳ ಸಾಗಣೆ ತಡೆಗೆ ಸಹಕರಿಸಿ

| Published : Aug 01 2024, 12:30 AM IST

ಸಾರಾಂಶ

ಮಹಿಳೆಯರನ್ನು ಮತ್ತು ಮಕ್ಕಳನ್ನು ಅಪರಣ ಮಾಡಿ ಮಕ್ಕಳನ್ನು ಭಿಕ್ಷೆ ಬೇಡಲು, ಜೀತಕ್ಕೆ ದೂಡುವುದು, ವೇಶ್ಯಾವಾಟಿಕೆಗೆ ಬಳಸುವುದು, ಅಕ್ರಮ ಚಟುವಟಿಕೆಗಳಿ ಬಳಸಿಕೊಳ್ಳುವು ಕಳ್ಳ ಸಾಗಾಣಿಕೆಯ ಉದ್ದೇಶವಾಗಿರುತ್ತದೆ. ನೂತನ ಕಠಿಣ ಕಾಯ್ದೆಗಳಿಂದಾಗಿ ಇಂತಹ ಪ್ರಕರಣಗಳು ಕಡೆಮೆಯಾಗುತ್ತಿವೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಮಾನವ ಕಳ್ಳ ಸಾಗಾಣಿಕೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಎಂ.ಹರೀಶ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಎಚ್ಚರ ವಹಿಸಿ

ಮಹಿಳೆಯರು ಆಸೆ ಆಮಿಷಗಳಿಗೆ ಒಳಗಾದರೆ, ಮಕ್ಕಳು ಅರಿವಿಲ್ಲದೇ ಮಾನವ ಸಾಗಾಣಿಕೆಗೆ ಒಳಗಾಗುತ್ತಾರೆ. ಮಹಿಳೆಯರು ಹೊರ ಹೋಗಬೇಕಾದರೆ ಒಂಟಿಯಾಗಿ ಹೋಗದೆ ಇನ್ನೊಬ್ಬರ ಒಡಗೂಡಿ ಎಚ್ಚರಿಕೆಯಿಂದ ಇದ್ದರೆ ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ಮಹಿಳೆಯರನ್ನು ಮತ್ತು ಮಕ್ಕಳನ್ನು ಅಪರಣ ಮಾಡಿ ಮಕ್ಕಳನ್ನು ಭಿಕ್ಷೆ ಬೇಡಲು, ಜೀತಕ್ಕೆ ದೂಡುವುದು, ವೇಶ್ಯಾವಾಟಿಕೆಗೆ ಬಳಸುವುದು, ಅಕ್ರಮ ಚಟುವಟಿಕೆಗಳಿ ಬಳಸಿಕೊಳ್ಳುವು ಕಳ್ಳ ಸಾಗಾಣಿಕೆಯ ಉದ್ದೇಶವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ನೂತನ ಕಾಯ್ದೆಗಳ ಬಂದ ನಂತರ ಇಂತಹ ಪ್ರಕರಣಗಳು ಕಡೆಮೆಯಾಗಿವೆ ಎಂದರು.

ಸಿಡಿಪಿಓ ಜಿ.ಎಂ.ರಫೀಕ್ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ಉಪಾಧ್ಯಕ್ಷ ನಂದೀಶ್ವರ ರೆಡ್ಡಿ, ಸರ್ಕಾರಿ ಅಭಿಯೋಜಕ ರಾಮಮೂರ್ತಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ವಕೀಲರಾದ ಚೇತನ್, ಶ್ರಾವಣಿ, ಮಮತ, ನ್ಯಾಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಭಾಗವಹಿಸಿದ್ದರು.