ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯಿತಿ ಕಚೇರಿ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದ್ದಾರೆ.

ಜಿಪಂ ಕಚೇರಿಯ ಸಹಾಯವಾಣಿ ಸಂಖ್ಯೆ: 08352-277293, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯ ದೂ.ಸಂಖ್ಯೆ: 08352-244971, ಮುದ್ದೇಬಿಹಾಳ: 08356-200606, ತಾಳಿಕೋಟಿ: 08356-200103, ಸಿಂದಗಿ: 08488- 221772, ದೇವರ ಹಿಪ್ಪರಗಿ: 08424-200114, ಆಲಮೇಲ 08488-298900, ವಿಜಯಪುರ: 08352-242423, ಬಬಲೇಶ್ವರ: 08355-200005, ತಿಕೋಟಾ: 08352-294506. ಇಂಡಿ: 08359-200026, ಚಡಚಣ: 9480831718, ಬಸವನ ಬಾಗೇವಾಡಿ: 08358-245236, ನಿಡಗುಂದಿ: 08426-200163, ಕೊಲ್ಹಾರ: 08426-200103 ಈ ಸಹಾಯ ಸಂಖ್ಯೆಗೆ ಸಂಪರ್ಕಿಸಿ.