ವಿಜಯಪುರ: 2026 -27ನೇ ಸಾಲಿನ ಜಿಲ್ಲಾ ಬಾಲಭವನದ ವತಿಯಿಂದ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಏ.10 ರಿಂದ 24ರ ವರೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ನಡೆಯಲಿದೆ.

ಮಕ್ಕಳ ಸೃಜನಾತ್ಮಕತೆ, ಕೌಶಲ್ಯಾಭಿವೃದ್ಧಿ ಮತ್ತು ಮನರಂಜನೆಗಾಗಿ ಚಿತ್ರಕಲೆ, ನೃತ್ಯ, ಕರಾಟೆ ಹಾಗೂ ಕರಕುಶಲ ಕಲೆ ಚಟುವಟಿಕೆಗಳು ಶಿಬಿರದಲ್ಲಿ ಏರ್ಪಡಿಸಿದೆ. ಕಚೇರಿ ವೇಳೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಜಿಲ್ಲಾ ಬಾಲಭವನ, ಮನಗೂಳಿ ರಸ್ತೆ, ವಿಜಯಪುರ ಅವರನ್ನು ಮೊ.7760402239 ಸಂಪರ್ಕಿಸಿ.