ಸಾರಾಂಶ
ನಾವೆಲ್ಲ ಹಿಂದುಗಳೇ, ಹಿಂದು ಎಂಬುವುದು ಮಹಾಸಾಗರ. ಮಹಾಸಾಗರದಲ್ಲಿ ಅನೇಕ ನದಿಗಳು ವಿಲೀನವಾಗಿವೆ. ಹಿಂದು ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಾವೆಲ್ಲ ಹಿಂದುಗಳೇ, ಹಿಂದು ಎಂಬುವುದು ಮಹಾಸಾಗರ. ಮಹಾಸಾಗರದಲ್ಲಿ ಅನೇಕ ನದಿಗಳು ವಿಲೀನವಾಗಿವೆ. ಹಿಂದು ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ನುಡಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಭೌದ್ದ, ಜೈನ್, ಶಿಖ್, ವೀರಶೈವ ಲಿಂಗಾಯತ, ವೈಷ್ಟವ ಎಂಬ ನದಿಗಳು. ಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯ, ಗುರುನಾನಕರು, ಜ್ಞಾನೇಶ್ವರ, ಬಸವಣ್ಣನವರು ಆಯಾ ಕಾಲ ಘಟ್ಟದಲ್ಲಿ ಅವರ ವಿಚಾರಧಾರೆ ಹೇಳಿದರು. ಹಾಗಾಗಿ ಅವು ಧರ್ಮಗಳಾದವು ಎಂದು ತಿಳಿಸಿದರು.
ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಬಸವಣ್ಣನವರ ವಿಚಾರಗಳನ್ನು ಸೀಮಿತ ಮಾಡಬಾರದು. ಯಾವುದೇ ಮಹಾನ್ ವ್ಯಕ್ತಿಗಳ ಅನುಕರಣೆ ಮಾಡುವವರನ್ನು ಟೀಕೆ ಮಾಡಬಾರದು. ನಾವೇ ಶ್ರೇಷ್ಠ ಎಂದು ಟೀಕಿಸಬಾರದು. ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ. ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು.ಎಲ್ಲವೂ ಒಂದೇ ಹೇಳುವ ಮೂಲಕ ಹಿಂದು ಹಾಗೂ ಲಿಂಗಾಯತ ಧರ್ಮ ಎರಡೂ ಒಂದೇ ಎಂದು ಸ್ಪಷ್ಟನೆ ನೀಡಿದರು.