ಶಿಲಾ ಮಠ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರಿಂದ ಪವಿತ್ರ ಸ್ನಾನ

| Published : Feb 17 2025, 12:31 AM IST

ಶಿಲಾ ಮಠ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರಿಂದ ಪವಿತ್ರ ಸ್ನಾನ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ತಾವರೆಕೆರೆಯ ಶಿಲಾ ಮಠದ ಹಿರಿಯ ಶ್ರೀ ಮತ್ತು ಎಡೆಯೂರು ಕ್ಷೇತ್ರದ ಶ್ರೀ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವ ಅಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಲೋಕಲ್ಯಾಣಾರ್ಥ ನಾಡಿನ ವಿವಿಧ ಮಠಗಳಿಂದ 10 ಸ್ವಾಮಿಗಳ ಸಹಿತ 90 ಭಕ್ತರೊಂದಿಗೆ ವಾಯುಯಾನದ ಮೂಲಕ ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್‌ ತಲುಪಿ ಭಾನುವಾರ ಸಂಜೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಳ್ಳಲಾಯಿತು.

- ಪ್ರಯಾಗ್ ರಾಜ್‌ ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಲೋಕಕಲ್ಯಾಣಾರ್ಥ ಪ್ರಾರ್ಥನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕು ತಾವರೆಕೆರೆಯ ಶಿಲಾ ಮಠದ ಹಿರಿಯ ಶ್ರೀ ಮತ್ತು ಎಡೆಯೂರು ಕ್ಷೇತ್ರದ ಶ್ರೀ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವ ಅಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಲೋಕಲ್ಯಾಣಾರ್ಥ ನಾಡಿನ ವಿವಿಧ ಮಠಗಳಿಂದ 10 ಸ್ವಾಮಿಗಳ ಸಹಿತ 90 ಭಕ್ತರೊಂದಿಗೆ ವಾಯುಯಾನದ ಮೂಲಕ ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್‌ ತಲುಪಿ ಭಾನುವಾರ ಸಂಜೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಳ್ಳಲಾಯಿತು.

ತ್ರಿವೇಣಿ ಸಂಗಮಕ್ಕೆ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಲಿಂಗದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ಬಿರೂರು ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ದೊಡ್ಡಮೇಟಿ ಕುರ್ಕೆಯ ಶ್ರೀ ಶಶಿಶೇಖರ ಬಸವ ಸ್ವಾಮಿಗಳು, ನಾಗಪುರದ ಶ್ರೀ ತೇಜಸ್ ಲಿಂಗ ಸ್ವಾಮಿಗಳು, ಹಿರೇಮಠದ ಶ್ರೀ ಗುರುಪ್ರಸಾದ ದೇವರು ಈ ಎಲ್ಲ ಶ್ರೀಗಳು ಪ್ರಯಾಗ್ ರಾಜ್‌ ಪುಣ್ಯಸ್ನಾನ ಕೈಗೊಂಡರು.

ಅನಂತರ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ, ಶ್ರೀ ಕಾಶಿ ಜಗದ್ಗುರು ದರ್ಶನ ಮತ್ತು ಆಶೀರ್ವಾದ ಪಡೆಯಲಾಯಿತು ಎಂದು ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಉದ್ಘಾಟನೆ:

ಇದೇ ಸಂದರ್ಭದಲ್ಲಿ ಪ್ರಯಾಗ್ ರಾಜ್‌ನಲ್ಲಿರುವ ಜಂಗಮವಾಡಿ ಮಠದಲ್ಲಿ ತಾವರೆಕೆರೆ ಶಿಲಾಮಠದ ವತಿಯಿಂದ ₹15 ಲಕ್ಷ ವೆಚ್ಚದಲ್ಲಿ ಒಂದು ವಿಶ್ರಾಂತಿ ಗೃಹ ಕಟ್ಟಿಸಲಾಗಿದೆ. ಅದರ ಉದ್ಘಾಟನೆ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಶ್ರೀ ಭಾನುವಾರ ಉದ್ಘಾಟಿಸಿದರು.

- - - -16ಕೆಸಿಎನ್ಜಿ,3, 4: ಎಡೆಯೂರು ಕ್ಷೇತ್ರದ ಶ್ರೀಗಳ ನೇತೃತ್ವದಲ್ಲಿ ಪ್ರಯಾಗ್ ರಾಜ್‌ಗೆ ತೆರಳಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲಾಯಿತು.