ಶಿಕ್ಷಣವಂತರಿಂದ ಸಮಾಜ ಸುಧಾರಣೆ ಸಾಧ್ಯ

| Published : Feb 17 2025, 12:31 AM IST

ಸಾರಾಂಶ

ವಿದ್ಯೆ ಬಾಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಪ್ರತಿಯೊಬ್ಬರೂ ವಿದ್ಯೆಯನ್ನು ಕಲಿತರೆ ಸಮಾಜ ಸುಧಾರಣೆ ಆಗುತ್ತದೆ. ಸಾಮಾಜಿಕ ಸಮತೋಲನ ಅಭಿವೃದ್ಧಿಗೆ ವಿದ್ಯೆ ಅಡಿಪಾಯವಾಗಿದೆ ಎಂದು ಉಪನ್ಯಾಸಕ ಎಸ್.ಆರ್. ನಯನಮೂರ್ತಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕೊಡಗನೂರು ಸರ್ಕಾರಿ ಶಾಲೆ ಕಾರ್ಯಕ್ರಮದಲ್ಲಿ ನಯನಮೂರ್ತಿ - - - ದಾವಣಗೆರೆ: ವಿದ್ಯೆ ಬಾಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಪ್ರತಿಯೊಬ್ಬರೂ ವಿದ್ಯೆಯನ್ನು ಕಲಿತರೆ ಸಮಾಜ ಸುಧಾರಣೆ ಆಗುತ್ತದೆ. ಸಾಮಾಜಿಕ ಸಮತೋಲನ ಅಭಿವೃದ್ಧಿಗೆ ವಿದ್ಯೆ ಅಡಿಪಾಯವಾಗಿದೆ ಎಂದು ಉಪನ್ಯಾಸಕ ಎಸ್.ಆರ್. ನಯನಮೂರ್ತಿ ಹೇಳಿದರು.

ತಾಲೂಕಿನ ಕೊಡಗನೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯೆ ಬಾಳಿನ ಬೆಳಕು ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ ಅತ್ಯಂತ ಸೂಕ್ತವಾಗಿಸಬೇಕಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ಅವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಶಿಕ್ಷಣ ತರಬೇತಿ ನೀಡಬೇಕು. ಇದಾದಲ್ಲಿ ಸಮಾಜಕ್ಕೆ ಒಳಿತಾಗುತ್ತದೆ. ಸರ್ಕಾರಗಳು ಯಾವುದೇ ಇರಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಶಾಲೆಯಿಂದ ಹೊರಗೆ ಉಳಿಯಬಾರದೆಂದು ಹಲವಾರು ಯೋಜನೆಗಳನ್ನು ರೂಪಿಸಿವೆ ಎಂದರು.

ಮುಖ್ಯಶಿಕ್ಷಕಿ ಕೆ.ಎಂ.ಗೀತಾ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ನಿರ್ದೇಶಕರಾದ ಪರಿಮಳ ಜಗದೀಶ, ಷಡಕ್ಷರಪ್ಪ ಎಂ.ಬೇತೂರು, ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಶಿವಶಂಕರ, ವಿವಿಧ ವಿಭಾಗಗಳ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-15ಕೆಡಿವಿಜಿ35.ಜೆಪಿಜಿ:

ದಾವಣಗೆರೆ ತಾಲೂಕಿನ ಕೊಡಗನೂರಿನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉಪನ್ಯಾಸಕ ಎಸ್.ಆರ್. ನಯನಮೂರ್ತಿ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಕೆ.ಎಂ.ಗೀತಾ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ನಿರ್ದೇಶಕರಾದ ಪರಿಮಳ ಜಗದೀಶ, ಷಡಕ್ಷರಪ್ಪ ಇತರರು ಇದ್ದರು.