ಸರಬರಾಜುದಾರರಿಗೆ ಅಪಘಾತ ವಿಮೆಯ ಬಾಂಡ್ ವಿತರಣೆ ಹಾಗೂ ಜಿಪಂ ವತಿಯಿಂದ ಇ- ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡುವರು, ಕೊರಟಗೆರೆ ಪಟ್ಟಣದ ಗೋಕುಲ ಶ್ರೀ ಆಂಜನೇಯಸ್ವಾಮಿ ದೇವಸ್ತಾನದ ಜೀರ್ಣೋದ್ಧಾರ ಕಾಮಗಾರಿಗೆ ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಕೊರಟಗೆರೆ: ಡಿ. 13ರಂದು ಗೃಹ ಸಚಿವರು ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮದ ರೈಲ್ವೆ ಗೇಟ್ ಎಲ್‌ಸಿ-೪೪ನಲ್ಲಿ ಆರ್‌ಓಬಿ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ನಂತರ ಕೊರಟಗೆರೆ ನಗರದ ಸರಸ್ವತಿಪುರಂನಲ್ಲಿ ನಿರ್ಮಾಣವಾಗಿರುವ ಸೇವಾಲಾಲ್ ಭವನದ ಉದ್ಘಾಟನೆ ಸಮಾರಂಭ ಸೇರಿದಂತೆ ಕೊರಟಗೆರೆ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಪಂನಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ರವರು ಡಿ.೧೩ರಂದು ಮಧ್ಯಾಹ್ನ ೩ ಗಂಟೆಗೆ ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಅವಾರ್ಡ್‌ದಾರರಿಗೆ ಮತ್ತು ಆಹಾರ ಅದಾಲತ್ ಮತ್ತು ಗ್ರಾಮಾಡಳಿತ ಅಧಿಕಾರಿಗಳಿಗೆ ಆದೇಶ ಮತ್ತು ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩-೩೦ ಗಂಟೆಗೆ ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕಾಲೇಜು ಹೆಚ್ಚುವರಿ ಕಟ್ಟಡದ ಉದ್ಘಾಟನೆ ಮಾಡುವರು, ನಂತರ ಸಾಯಂಕಾಲ ೪ ಗಂಟೆಗೆ ಕಾಮೇನಹಳ್ಳಿ ಗ್ರಾಮದಲ್ಲಿ ಪೌರ ಕಾರ್ಮಿಕರ ಮನೆಗಳ ಉದ್ಘಾಟನೆ, ಪೌರ ಕಾರ್ಮಿಕರಿಗೆ ಹಾಗೂ ನೀರು ಸರಬರಾಜುದಾರರಿಗೆ ಅಪಘಾತ ವಿಮೆಯ ಬಾಂಡ್ ವಿತರಣೆ ಹಾಗೂ ಜಿಪಂ ವತಿಯಿಂದ ಇ- ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡುವರು, ಕೊರಟಗೆರೆ ಪಟ್ಟಣದ ಗೋಕುಲ ಶ್ರೀ ಆಂಜನೇಯಸ್ವಾಮಿ ದೇವಸ್ತಾನದ ಜೀರ್ಣೋದ್ಧಾರ ಕಾಮಗಾರಿಗೆ ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.