ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಗತ್ಯ ಹಾಸ್ಟೆಲ್ ವ್ಯವಸ್ಥೆ: ಶಾಸಕ ರುದ್ರಪ್ಪ ಲಮಾಣಿ

| Published : Sep 17 2025, 01:07 AM IST

ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಗತ್ಯ ಹಾಸ್ಟೆಲ್ ವ್ಯವಸ್ಥೆ: ಶಾಸಕ ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದುವರೆಗೂ ನಗರದ ಬಾಡಿಗೆ ಕಟ್ಟಡ ಮತ್ತು ನಿರಾಶ್ರಿತರ ಕಟ್ಟಡದಲ್ಲಿ ಇರಬೇಕಿತ್ತು. ಆದರೀಗ ಆರೂವರೆ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಉದ್ಘಾಟನೆಗೊಂಡಿದೆ.

ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಸತಿನಿಲಯಗಳ ಸಂಖ್ಯೆ ಹೆಚ್ಚಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ದೇಶಕ್ಕೆ ಉತ್ತಮ ಪ್ರಜೆಗಳಾಗಬೇಕೆಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕರ ವಸತಿನಿಲಯ ನಂ. 3ರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದುವರೆಗೂ ನಗರದ ಬಾಡಿಗೆ ಕಟ್ಟಡ ಮತ್ತು ನಿರಾಶ್ರಿತರ ಕಟ್ಟಡದಲ್ಲಿ ಇರಬೇಕಿತ್ತು. ಆದರೀಗ ಆರೂವರೆ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಉದ್ಘಾಟನೆಗೊಂಡಿದೆ. ವಿಶಾಲವಾದ ಮೈದಾನ, ಲಿಫ್ಟ್, ವ್ಯವಸ್ಥಿತ ಕಟ್ಟಡ ನಿರ್ಮಾಣವಾಗಿರುವುದು ಹೆಮ್ಮೆ ಮೂಡಿಸಿದೆ. ವಿದ್ಯಾರ್ಥಿಗಳು ತಮ್ಮ ಮನೆಯನ್ನು ಸುವ್ಯವಸ್ಥಿತವಾಗಿ ನೋಡಿಕೊಂಡಂತೆ ಇದನ್ನು ನೋಡಿಕೊಳ್ಳಬೇಕು. ಜತೆಗೆ ಹೆತ್ತವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಶಿಕ್ಷಣದಿಂದ ಸಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಭಾವಿಸಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಶೈಕ್ಷಣಿಕವಾಗಿ ನಮ್ಮ ಜಿಲ್ಲೆ ಮುಂದುವರಿಯಬೇಕೆಂದು ಕಾಳಜಿ ಹೊಂದಿರುವರು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ನಾಲ್ಕು ಬಿಸಿಎಂ ಜತೆಗೆ ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ನೂತನ ವಸತಿನಿಲಯ ಸ್ಥಾಪನೆಗೆ ಶ್ರಮಿಸಿರುವರು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಶಿಕ್ಷಣಕ್ಕೆ ಮೂಲ ಸೌಕರ್ಯ ಒದಗಿಸುವ ಕಾರಣಕ್ಕೆ ಮೆಟ್ರಿಕ್ ನಂತರದ ನೂರು ವಿದ್ಯಾರ್ಥಿಗಳಿಗೆ ವಸತಿನಿಲಯ ಉದ್ಘಾಟನೆಗೊಂಡಿದೆ. ಈ ವಸತಿನಿಲಯ ಮುಂದಿನ ಪೀಳಿಗೆಗೂ ಅನುಕೂಲ ಆಗಬೇಕು. ಈ ಹಿನ್ನೆಲೆ ಮೂಲ ಸೌಕರ್ಯಗಳು ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮಂತ್ ಹದಗಲ್ ಮಾತನಾಡಿದರು. ಮುಖಂಡರಾದ ಎಂ.ಎಂ. ಮೈದೂರ, ಸಿದ್ದಣ್ಣ ಕುಲಕರ್ಣಿ, ಅಧಿಕಾರಿಗಳಾದ ಎನ್.ಎನ್. ಪಾಟೀಲ, ವಾಸು ಲಮಾಣಿ, ಎಸ್.ಎಂ. ಮೇಗಳಮನಿ, ಸಲೀಂ ಇದ್ದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಬಿ.ಎಸ್.ಆರ್. ಸಂತೋಷ ಅವರನ್ನು ಸನ್ಮಾನಿಸಲಾಯಿತು.