ಗೊಂದಲ ಬಗೆಹರಿಸದಿದ್ದರೆ ಮತ್ತೆ ಹೋರಾಟ

| Published : Nov 14 2025, 04:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಸ್ಪಂದಿಸಿ ಪ್ರತಿ ಟನ್ ಕಬ್ಬಿಗೆ ₹ 3300 ಘೋಷಣೆ ಮಾಡಿತ್ತು. ಇದರಿಂದ ಅನೇಕ ರೈತರು ಸ್ವಲ್ಪ ಖುಷಿ ಪಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಈ ಮೊದಲು ಇದ್ದ 10.25 ರಿಕವರಿ ಪದ್ಧತಿಯನ್ನು ಒಟ್ಟು 11.25 ರಿಕವರಿ ಬಂದರೆ ಮಾತ್ರ ₹ 3300 ನೀಡುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ. ರಾಜ್ಯ ಸರ್ಕಾರ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದು, ಇದು ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಸ್ಪಂದಿಸಿ ಪ್ರತಿ ಟನ್ ಕಬ್ಬಿಗೆ ₹ 3300 ಘೋಷಣೆ ಮಾಡಿತ್ತು. ಇದರಿಂದ ಅನೇಕ ರೈತರು ಸ್ವಲ್ಪ ಖುಷಿ ಪಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಈ ಮೊದಲು ಇದ್ದ 10.25 ರಿಕವರಿ ಪದ್ಧತಿಯನ್ನು ಒಟ್ಟು 11.25 ರಿಕವರಿ ಬಂದರೆ ಮಾತ್ರ ₹ 3300 ನೀಡುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ. ರಾಜ್ಯ ಸರ್ಕಾರ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದು, ಇದು ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಎಂದು ಆರೋಪಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಅವರು ಗುರುವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಮತ್ತು ವಿಜಯಪುರ ಮತ್ತು ಬಾಗಲಕೋಟೆಯ ಅನೇಕ ಸ್ಥಳಗಳಲ್ಲಿ ಕಬ್ಬು ಬೆಳೆಗಾರರು ಮತ್ತು ರೈತರು ಪ್ರತಿ ಟನ್ ಕಬ್ಬಿಗೆ ₹ 3500 ನೀಡಲೇಬೇಕು ಎಂದು ಹೋರಾಟ ನಡೆಸಿದ್ದರು. ಇದರ ಬಲದಿಂದಲೇ ರಾಜ್ಯ ಸರ್ಕಾರ ಮಣಿದು ಪ್ರತಿ ಟನ್ ಕಬ್ಬಿಗೆ ₹ 3300 ನೀಡುವುದಾಗಿ ಘೋಷಣೆ ಮಾಡಿತ್ತು. ಇದರಿಂದ ಅನೇಕ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಇದೀಗ ರಿಕವರಿ ಪದ್ಧತಿ ಅಳವಡಿಸಿರುವುದು ರೈತರಿಗೆ ಮಾಡಿದ ದೊಡ್ಡ ಮೋಸವಾಗಿದೆ. ಇದರಿಂದ ಎಲ್ಲ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಂಬಲ ಬೆಲೆ ದೊರಕಲು ಸಾಧ್ಯವಿಲ್ಲ. ಹೀಗಾಗಿ, ಈ ಗೊಂದಲಮಯ ಆದೇಶವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕೋಟ್‌ ಸರ್ಕಾರವು ಮತ್ತೊಮ್ಮೆ ರೈತರ ಸಭೆಯನ್ನು ಕರೆದು ತಮ್ಮ ಆದೇಶವನ್ನು ಮರುಪರಿಶೀಲನೆ ಮಾಡಿ 10.25 ರಿಕವರಿ ದರ ₹ 3500 ಘೋಷಿಸಬೇಕು. ಈ

ಮನವಿಗೆ ಕೂಡಲೇ ಸ್ಪಂದಿಸದೆ ಹೋದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ರೈತರ ಹೋರಾಟವನ್ನು ಮತ್ತೆ ಆರಂಭ ಮಾಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ರಮೇಶ ಮಡಿವಾಳ, ನಿಂಗನಗೌಡ ಪಾಟೀಲ, ರಮೇಶ ಕುಂಬಾರ, ಸುರೇಶ ನಾಯಿಕ, ಪಿಂಟು ಕಬಾಡಗಿ, ಸಂಗಪ್ಪ ಕರಿಗಾರ, ಜಗದೀಶ ಮರೆಗುದ್ದಿ, ಹಣಮಂತ ಮಹಿಷವಾಡಗಿ, ಈರಪ್ಪ ಖೋತ, ರುದ್ರಪ್ಪ ಕಂಬಾರ, ಮಂಜುಳಾ ಹಣಮಾಪುರೆ, ಶಾಂತಾ ಕೋಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.