ಚನ್ನಗಿರಿ: ಪ್ರತಿಯೊಬ್ಬರು ನಮ್ಮ ಪರಿಸರದ ಕಾಳಜಿಗಳನ್ನು ಇಟ್ಟುಕೊಂಡು ಪರಿಸವನ್ನು ಸಂರಕ್ಷಣೆ ಮಾಡದೆ ಇದ್ದರೆ ಕುಡಿಯಲು ನೀರು ಸಿಗದಂತೆ ಆಗುವ ಕಾಲ ದೂರವಿಲ್ಲ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ನುಡಿದರು.
ಇಲ್ಲಿನ ರಾಮ ಮನೋಹರ ಲೋಹಿಯಾ ಭವನದಲ್ಲಿ ಶುಕ್ರವಾರ ವಿಶ್ವ ಮಾನವ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು ರಾಜ್ಯದ ಬೌಗೋಳಿಕ ವಿಸ್ತಾರಕ್ಕೆ ಅನುಗುಣವಾಗಿ ಶೇಕಡ 33ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ ಪ್ರಸ್ತುತವಾಗಿ ಶೇಕಡ 14ರಷ್ಟು ಅರಣ್ಯ ಪ್ರದೇಶ ವಿದೆ ಈಗೆ ಮನುಷ್ಯರ ದರಾಸೆಗಳಿಗೆ ಅರಣ್ಯ ಸಂಪತ್ತು ನಶಿಸಿ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಮಾನವ ಕುಲವೇ ಗಂಡಾಂತರಕ್ಕೆ ಸಿಲುಕಲಿದೆ ಎಂದರು.ಮರ-ಗಿಡಗಳು ಸಂಮೃದ್ದವಾಗಿದ್ದರೆ ಕಾಲ ಮಾನಕ್ಕೆ ತಕ್ಕಂತೆ ಮಳೆ-ಬೆಳೆಯಾಗಲಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಕೋಗಲೂರು ಶರಣಪ್ಪ ಮಾತನಾಡಿ ನಾಗರೀಕತೆ ಬೆಳೆದಂತೆಲ್ಲ ಮನುಷ್ಯರಲ್ಲಿರುವ ಮೌಲ್ಯಗಳೆ ನಶಿಸುತ್ತಿವೆ ಪರಿಸರ ಸಂರಕ್ಷಣೆ ಮತ್ತು ಕಾಳಜಿ ಇರುವಂತಹ ಪ್ರತಿಯೊಬ್ಬರು ಉತ್ತಮವಾದ ಸೇವಾ ಕಾರ್ಯಗಳನ್ನು ಮಾಡುತ್ತಾ ಪ್ರಶಂಶೆಗೆ ಪಾತ್ರರಾಗುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಮಾನವ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚಿಕ್ಕುಲಿಕೆರೆ ನಾಗೇಂದ್ರಪ್ಪ ಅವರ 66ನೇ ವರ್ಷದ ಜನ್ಮ ದಿನ ನಿಮಿತ್ತ ಕೇಕ್ ಕತ್ತರಿಸಲಾಯಿತು.
ನಂತರ ಪಾಂಡೋಮಟ್ಟಿ ಶ್ರೀಗಳು ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರಪ್ಪನಿಗೆ ಶಾಲು, ಹಾರ ಹಾಕಿ ಗೌರವಿಸಿದರು.
ಜಾನಪದ ಜಂಗಮ ಸಿದ್ದನಮಠದ ರಾಮಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶಪ್ಪ, ಗಂಗಾಧರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಪ್ರೇಮಾ,ಪುರಸಭೆಯ ಮಾಜಿ ಸದಸ್ಯ ಜಿ.ನಿಂಗಪ್ಪ, ಭಾರತಿಪ್ರಸಾದ್, ಕರೇಕಟ್ಟೆ ದೇವೆಂದ್ರಪ್ಪ, ಶೈಲೇಶ್ ಪಟೇಲ್, ಸಂತೆಬೆನ್ನೂರು ಬಸವರಾಜ್, ಸುಂದರೇಶ್ ಹಾಜರಿದ್ದರು.