ಭ್ರಷ್ಟಾಚಾರ ಕಂಡು ಬಂದ್ರೆ ಲೋಕಾಯುಕ್ತಕ್ಕೆ ತಿಳಿಸಿ

| Published : Oct 31 2024, 12:59 AM IST

ಸಾರಾಂಶ

ಭ್ರಷ್ಟಾಚಾರ ಕಾಯ್ದೆ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ರೀತಿ ಆಸ್ತಿ ಗಳಿಸುವುದು ಅಪರಾಧ. ಎಲ್ಲೆ ಭ್ರಷ್ಟಾಚಾರ ನಡೆಯುತ್ತಿದ್ದರೂ ಲೋಕಾಯುಕ್ತಕ್ಕೆ ಯಾವ ಭಯವಿಲ್ಲದೇ ತಿಳಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ವರಿಷ್ಠಾಧಿಕಾರಿ ನಂದಿನಿ ತಿಳಿಸಿದರು. ಸಮಾಜದಲ್ಲಿ ನೋಡಿದರೇ ಭ್ರಷ್ಟಾಚಾರವು ಹೆಚ್ಚಿನ ರೀತಿಯಲ್ಲಿ ದುರಂತಕ್ಕೆ ಒಳಗಾಗುತ್ತಿದೆ. ಎಷ್ಟೇ ಒಳ್ಳೆ ಆಡಳಿತ ಕೊಟ್ಟರೂ ಭ್ರಷ್ಠಾಚಾರ ಎಂಬುದು ನಮ್ಮ ದೇಶವು ಕೊನೆ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಭ್ರಷ್ಟಾಚಾರ ಕಾಯ್ದೆ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ರೀತಿ ಆಸ್ತಿ ಗಳಿಸುವುದು ಅಪರಾಧ. ಎಲ್ಲೆ ಭ್ರಷ್ಟಾಚಾರ ನಡೆಯುತ್ತಿದ್ದರೂ ಲೋಕಾಯುಕ್ತಕ್ಕೆ ಯಾವ ಭಯವಿಲ್ಲದೇ ತಿಳಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ವರಿಷ್ಠಾಧಿಕಾರಿ ನಂದಿನಿ ತಿಳಿಸಿದರು.

ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ, ಸೆಂಟ್ರಲ್ ಕಾಮರ್ಸ್‌ ಪ್ರಥಮ ದರ್ಜೆ ಕಾಲೇಜು ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗರೂಕತೆ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಯಾವ ರೀತಿಯ ಗುಣಾತ್ಮಕ ಅಭಿವೃದ್ಧಿಯನ್ನು ನಾವು ಎಲ್ಲರೂ ಹೋಗಬೇಕು ಎಂಬುದು ಪ್ರಮುಖ ವಿಚಾರವಾಗಿದೆ. ರಾಷ್ಟ್ರದ ಸಮೃದ್ಧಿಗಾಗಿ ಸತ್ಯ, ನಿಷ್ಠೆ ಸಂಸ್ಕೃತಿ ಎಂಬುವುದು ಇರಬೇಕು. ಕೆಲಸ ಮಾಡಬೇಕು. ಕಂಪನಿ ಬರಬೇಕು ಎಂಬುದು ಮಾತ್ರ ಆಗಿರುವುದಿಲ್ಲ. ಅಬ್ದುಲ್ ಕಲಾಂ ಸೇರಿದಂತೆ ಇತರರ ಆದರ್ಶವನ್ನು ಗಮನಿಸಿದರೇ ಅವರಿಗೆ ಹಣ ಮಾತ್ರ ಪ್ರಮುಖವಾಗಿರುವುದಿಲ್ಲ. ಅವರ ವ್ಯಕ್ತಿತ್ವವನ್ನು ನಾವು ನೋಡುತ್ತೇವೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಇತರರ ವ್ಯಕ್ತಿತ್ವ ನೋಡಿದರೇ ಯಾರು ಹಣದಿಂದಲ್ಲ ಎಂದ ಅವರು, ಕೆಲವರ ಹಸರನ್ನು ಹೇಳಿ ಉದಾಹರಣೆ ನೀಡಿದರು. ನಮ್ಮಲ್ಲಿ ವಿದ್ಯೆ, ಶ್ರೀಮಂತಿಕೆ ಜೊತೆಗೆ ವಿನಯತೆಯ ಪ್ರಾಮಾಣಿಕ ಮತ್ತು ಮೌಲ್ಯಯುತ ಅಂಶಗಳು ಸಹ ಮುಖ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಸಮಾಜದಲ್ಲಿ ನೋಡಿದರೇ ಭ್ರಷ್ಟಾಚಾರವು ಹೆಚ್ಚಿನ ರೀತಿಯಲ್ಲಿ ದುರಂತಕ್ಕೆ ಒಳಗಾಗುತ್ತಿದೆ. ಎಷ್ಟೇ ಒಳ್ಳೆ ಆಡಳಿತ ಕೊಟ್ಟರೂ ಭ್ರಷ್ಠಾಚಾರ ಎಂಬುದು ನಮ್ಮ ದೇಶವು ಕೊನೆ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಭ್ರಷ್ಟಾಚಾರ ಹೋಗಲಾಡಿಸಲು ನಮ್ಮ ಲೋಕಾಯುಕ್ತ ಇಲಾಖೆ ಜಾಗರೂಕತೆ ಅರಿವು ಸಪ್ತಾಹ ಆಚರಿಸಲಾಗುತ್ತಿದೆ. ಭ್ರಷ್ಟಾಚಾರ ಕಾಯಿದೆ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ರೀತಿ ಆಸ್ತಿ ಗಳಿಸುವುದು ಅಪರಾಧ. ಎಲ್ಲೆ ಭ್ರಷ್ಟಾಚಾರ ನಡೆಯುತ್ತಿದ್ದರೆ ಲೋಕಾಯುಕ್ತಕ್ಕೆ ಯಾವ ಭಯವಿಲ್ಲದೇ ತಿಳಿಸಬಹುದು ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ. ಮೋಹನ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಪ್ರಸ್ತುತದಲ್ಲಿ ಪ್ರಾಮಾಣೀಕತೆ ತುಂಬ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸಿ ಭ್ರಷ್ಟಾಚಾರವನ್ನು ಕಡಿಮೆ ಮಾಡಬೇಕು. ಒಂದು ಇತಿಮಿತಿ ಒಳಗೆ ಭ್ರಷ್ಟಾಚಾರ ತರಬೇಕೆಂದು ಹಿಂದಿನಿಂದಲೂ ಎಷ್ಟೇ ಪ್ರಯತ್ನ ಮಾಡಿದರೂ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗರೂಕತೆ ಅರಿವು ಸಪ್ತಾಹ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಪಸಭಾಪತಿ ವೈ.ಎಸ್. ವೀರಭದ್ರಪ್ಪ, ಕಾರ್ಯದರ್ಶಿ ಶಬ್ಬೀರ್‌ ಅಹಮದ್, ಖಜಾಂಚಿ ಎಚ್.ಡಿ. ಜಯೇಂದ್ರಕುಮಾರ್‌, ಸೆಂಟ್ರಲ್ ಕಾಮರ್ಸ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಕಾಂತ್ ಪಡೆಸೂರ್‌, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಗಿರಿಗೌಡ, ಬಿ.ಆರ್. ಉದಯ ಕುಮಾರ್‌, ಕೆ.ಟಿ. ಜಯಶ್ರೀ, ಲೋಕಾಯುಕ್ತ ಅಧಿಕಾರಿ ಶಿಲ್ಪ, ಬಾಲು ಸೇರಿದಂತೆ ಇತರರು ಉಪಸ್ಥಿತರಿದ್ದರು.