ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನೌಕರ ವೇಣುಗೋಪಾಲ್ ಅವರನ್ನು ಸಹೋದ್ಯೋಗಿಗಳು ಬುಧವಾರ ಅಭಿನಂದಿಸಿದರು.ಬಳಿಕ ನೂತನ ನಿರ್ದೇಶಕ ವೇಣುಗೋಪಾಲ್ ಮಾತನಾಡಿ, ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳು ಒಮ್ಮತದಿಂದ ನನ್ನನ್ನು ಸರ್ಕಾರಿ ನೌಕರರ ಸಂಘದ ನಿರ್ದೇಶಕನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು, ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ನ್ಯಾಯಾಲಯದ ಶಿರಸ್ತೇದಾರ್ ಜೈಶಂಕರ್, ಕೋರ್ಟ್ ಅಮೀನರಾದ ಶಿವಮುದ್ದಪ್ಪ, ಸತೀಶ್, ಆನಂದ್ ಸಿಬ್ಬಂದಿ ಮಂಚಯ್ಯ ಇದ್ದರು.ಎಂ.ಡಿ.ಹನುಮಂತೇಗೌಡರಿಗೆ ಅಭಿನಂದನೆ
ಪಾಂಡವಪುರ:ನೀರಾವರಿ ಇಲಾಖೆ ಸುದೀರ್ಘ ಸೇವೆ ಸಲ್ಲಿಸಿದ ವಯೋ ನಿವೃತ್ತಿ ಹೊಂದುತ್ತಿರುವ ಎಂ.ಡಿ.ಹನುಮಂತೇಗೌಡರನ್ನು ಪ್ರಗತಿ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಬಳಿಕ ಟ್ರಸ್ಟ್‌ನ ಅಧ್ಯಕ್ಷ ಎಂ.ಜೆ.ನಾಗೇಶ್ ಮಾತನಾಡಿ, ನೀರಾವರಿ ಇಲಾಖೆಯಲ್ಲಿ ಉತ್ತಮ ಸೇವೆ ನಿರ್ವಹಿಸುತ್ತಾ ಸಾಮಾಜಿಕ ಕಳಕಳಿ ಹೊಂದಿದ್ದ ಹನುಮಂತೇಗೌಡರು, ರೈತರ ಜಮೀನುಗಳಿಗೆ ಸಕಾಲದಲ್ಲಿ ನೀರು ಹರಿಸುವ ಕಡೆ ಹೆಚ್ಚು ಗಮನ ಹರಿಸಿದ್ದರು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ ಇವರು, ಇಲಾಖೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಟ್ರಸ್ಟ್‌ನ ನಿರ್ದೇಶಕ ಡಾ.ಬಿ.ಸಿ.ವಿಜಯಕುಮಾರ್ ಮಾತನಾಡಿ, ಸೇವೆಯನ್ನು ಕರ್ತವ್ಯ ಎಂದು ಭಾವಿಸಿ ರೈತಾಪಿ ಕುಟುಂಬಗಳಿಗೆ ಉತ್ತಮ ಸ್ಪಂದನೆ ನೀಡಿ ಕೆಲಸ ಮಾಡಿದ್ದಾರೆ. ವ್ಯವಸಾಯಕ್ಕೆ ಜೀವನಾಡಿ ನೀರಾವರಿ ಇಲಾಖೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ತಮ್ಮ ಮೃದು ಸ್ವಭಾವದಿಂದಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಂದ ಹಿಡಿದು ಕಟ್ಟ ಕಡೆಯ ನೌಕರರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು ಎಂದರು.
ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಳು ಮತ್ತು ಕುಟುಂಬ ವರ್ಗ ಹಾಜರಿದ್ದರು.