ವೀರನಪುರ ಸಮೀಪ ಅಕ್ರಮ ಗಣಿಗಾರಿಕೆ; ಕೊಲೆ ಬೆದರಿಕೆ: ಲಿಂಗಣಾಪುರ ಗುರುಸ್ವಾಮಿ

| Published : Oct 31 2024, 12:45 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ೩೦ ಮೀಟರ್ ಅಂತರದಲ್ಲಿ ಸರ್ವೇ ನಂ. ೨೯೮ ರಲ್ಲಿ ೨.೩೦ (ಎರಡು ಎಕರೆ ಮೂವತ್ತು ಗುಂಟೆ) ಸರ್ಕಾರಿ ಖರಾಬು ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಕೇಳಲು ಹೋದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಿಂಗಣಾಪುರ ಗುರುಸ್ವಾಮಿ ಆರೋಪಿಸಿದರು.

ಕ್ರಮಕ್ಕೆ ಮನವಿ

ಚಾಮರಾಜನಗರ: ತಾಲೂಕಿನ ವೀರನಪುರ ಗ್ರಾಮದ ೩೦ ಮೀಟರ್ ಅಂತರದಲ್ಲಿ ಸರ್ವೇ ನಂ. ೨೯೮ ರಲ್ಲಿ ೨.೩೦ (ಎರಡು ಎಕರೆ ಮೂವತ್ತು ಗುಂಟೆ) ಸರ್ಕಾರಿ ಖರಾಬು ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಕೇಳಲು ಹೋದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಿಂಗಣಾಪುರ ಗುರುಸ್ವಾಮಿ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸರ್ವೇ ನಂ. ೬೦/೨, ೬೨/೨, ರೂಪೇಶ್ ಕುಮಾರ್ ರೆಡ್ಡಿ ಇವರ ಹೆಸರಿನಲ್ಲಿ ಗಣಿಗಾರಿಕೆ ನಡೆಸಲು ಪರ್‍ಮಿಟ್ ಇದೆ. ಇವರು ಬೇರೆಯವರಿಗೆ ಸಬ್ ಲೀಸ್ ಆದಿಶೇಷ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು ಗೋಪಾಲರೆಡ್ಡಿ ಬಿನ್ ಬೂಸಿರೆಡ್ಡಿ ಮತ್ತು ಭಾಸ್ಕರ್ ರೆಡ್ಡಿ ಇವರಿಗೆ ಕೊಟ್ಟಿರುತ್ತಾರೆ. ಈ ಸರ್ವೇ ನಂಬರ್‌ನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಈ ಸರ್ವೇ ನಂ. ಊರಿನಿಂದ ಸುಮಾರು ೩೦೦ ಮೀಟರ್ ಅಂತರದಲ್ಲಿ ಎಂದು ಹೇಳಿದರು.

ಈ ಸರ್ವೆ ನಂಬರ್ ಪಕ್ಕದಲ್ಲೇ ಸರ್ವೇ ನಂ. ೨೯೮ ರಲ್ಲಿ ೨.೩೦ (ಎರಡು ಎಕರೆ ಮೂವತ್ತು ಗುಂಟೆ) ಸರ್ಕಾರಿ ಖರಾಬು ಜಮೀನಿದ್ದು ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಈಗಾಗಲೇ ಸುಮಾರು ೫,೦೦೦ ಕ್ಯೂಬಿಕ್ ಮೀಟರ್‌ನಷ್ಟು ಕಪ್ಪು ಶಿಲೆ ದಿಮ್ಮಿಗಳನ್ನು ತೆಗೆದು ಅಕ್ರಮವಾಗಿ ರವಾನೆ ಮಾಡಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರೂ ಏನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗ್ರಾಮದ ಪಕ್ಕದಲ್ಲೇ ಗಣಿಗಾರಿಕೆ ನಡೆಸುತ್ತಿರುವುದರಿಂದ ಯಾವ ಸಮಯದಲ್ಲದರೂ ಸಿಡಿಮದ್ದುಗಳನ್ನು ಸಿಡಿಸುತ್ತಿದ್ದು, ಚಿಕ್ಕ ಮಕ್ಕಳು, ವಯಸ್ಸಾದವರು ಮತ್ತು ಸಾರ್ವಜನಿಕರಿಗೆ ಮತ್ತು ವಾಸದ ಮನೆಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಳಿದರೆ ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ. ಸಂಬಂಧಪಟ್ಟರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ವೀರನಪುರ ಗ್ರಾಮದ ಚಿನ್ನಪ್ಪ, ಕೆಂಪಣ್ಣ, ಗುರುಸ್ವಾಮಿ ಇದ್ದರು.