ಸಾರಾಂಶ
ತಿಂಗಳಿಗೂ ಮುಂಚೇ ಆನ್ಲೈನ್ ನಲ್ಲಿ ರೂಮ್ ಬುಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಬಂದ ಪ್ರವಾಸಿಗರಿಗೆ ರೆಸಾರ್ಟ್ಸ್, ಹೋಂ ಸ್ಟೇ ಸಿಗಲಿಲ್ಲ. ದಾಂಡೇಲಿಯಲ್ಲಿ ವಸತಿ ಕೊಠಿಡಿಯೂ ಸಿಗದೆ ಪರಾದಾಡಿದರು.
ದಾಂಡೇಲಿ:
ನೂತನ ವರ್ಷ ಆಚರಣೆಗೆ ರಾಜ್ಯ, ದೇಶದ ಇತರ ಭಾಗಗಳಿಂದ ಪ್ರವಾಸಿಗರು ದಾಂಡೇಲಿ, ಜೋಯಿಡಾ ರೆಸಾರ್ಟ್ಸ್, ಹೋಂ ಸ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಆಗಮಿಸಿದ್ದರಿಂದ ವಸತಿಗೆ ಕೊಠಡಿಯೂ ಸಿಗದೆ ಪರದಾಡಿದರು.ಇತ್ತೀಚಿನ ವರ್ಷಗಳಲ್ಲಿ ದಾಂಡೇಲಿ ಮತ್ತು ಜೋಯಿಡಾ ಪ್ರವಾಸೋದ್ಯಮ ತಾಣವಾಗಿ ಬೆಳೆಯುತ್ತಿದೆ. ಇಲ್ಲಿಯ ರೆಸಾರ್ಟ್ಸ್, ಹೋಂ ಸ್ಟೇ, ಜಲ ಸಹಾಸ ಕ್ರೀಡೆಗಳು, ಜಂಗಲ್ ಸಫಾರಿ ಸೇರಿದಂತೆ ಹಲವಾರು ಪ್ರವಾಸಿ ಚಟುವಟಿಕೆಗಳು ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಮತ್ತು ನಿರಂತರ ರಜೆಗಳು ಬಂದಾಗ ಇಲ್ಲಿಯ ಪ್ರವಾಸಿ ತಾಣಗಳು ತುಂಬಿಕೊಳ್ಳುವುದು ಕಾಣುತ್ತದೆ. ಹೊಸ ವರ್ಷದ ಸಂದರ್ಭದಲ್ಲಂತೂ ಇಲ್ಲಿ ಹೊರ ಊರ ಪ್ರವಾಸಿಗರದ್ದೇ ದರ್ಬಾರ್.ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಸರಿಸುಮಾರು ೩೨೦ರಷ್ಟು ರೆಸಾರ್ಟ್ಸ್, ಹೋಂ ಸ್ಟೇ ಗಳಿದ್ದು ಹೊಸ ವರ್ಷ ಆಚರಣೆ ವೇಳೆ ಎಲ್ಲವು ತುಂಬಿಕೊಂಡಿವೆ. ಕ್ರಿಸ್ಮಸ್ ಆರಂಭದ ದಿನದಿಂದ ವರ್ಷಾಂತ್ಯದ ದಿನದ ವರೆಗೂ ರೆಸಾರ್ಟ್ಸ್, ಹೋಂ ಸ್ಟೇ ಕೊಠಡಿಗಳು ಅಲಭ್ಯವಾಗಿವೆ. ಅದರಲ್ಲೂ ವರ್ಷದ ಕೊನೆಯ ದಿನ ೩೧ರಂದು ಇಲ್ಲಿ ಒಂದೇ ಒಂದು ಕೊಠಡಿ, ರೂಂ ಪ್ರವಾಸಿಗರಿಗೆ ಸಿಕ್ಕಿಲ್ಲ. ದಾಂಡೇಲಿ ನಗರದೊಳಗಿರುವ ವಸತಿ ನಿಲಯಗಳ ಕೊಠಡಿಗಳು ಕೂಡ ತುಂಬಿದ್ದವು. ತಿಂಗಳು ಮೊದಲೇ ಆನ್‌ಲೈನ್ ಬುಕಿಂಗ್ ಆಗಿದ್ದು ಕೊಠಡಿ ಮಾಹಿತಿ ಇಲ್ಲದೆ ಅಂತಿಮ ಕ್ಷಣದಲ್ಲಿ ಬಂದ ಪ್ರವಾಸಿಗರು ರಾತ್ರಿ ಮಲಗಲು ವಸತಿ ಸಿಗದೇ, ಊಟಕ್ಕೆ ಜಾಗವೂ ಸಿಗದೇ ಪರದಾಡಿದರು. ದಾಂಡೇಲಿಯಲ್ಲಿ ಇದೀಗ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ವಾಹನ ಹೆಚ್ಚಾಗಿ ಕಾಣಿಸುತ್ತಿವೆ. ಬಂದ ಪ್ರಾಸಿಗರು ಕೆಲವರು ತಮ್ಮ ವಾಹನದಲ್ಲಿಯೇ ರಾತ್ರಿ ಕಳೆದಿದ್ದಾರೆ.ಜಲ ಸಾಹಸ ಕ್ರೀಡೆಗಳಿಗೂ ಜನ:ದಾಂಡೇಲಿ ಜೋಯಿಡಾದ ಪ್ರಮುಖ ಆಕರ್ಷಣೆ ಇಲ್ಲಿಯ ವೈಟ್‌ವಾಟರ್ ರಾಫ್ಟಿಂಗ್ ಹಾಗೂ ಇತರೆ ಜಲ ಸಹಾಸ ಕ್ರೀಡೆಗಳು. ಮಾವಳಂಗಿಯಲ್ಲಿ ನಡೆಯುವ ವಾಟರ ಆಕ್ಟಿವಿಟೀಸ್‌ಗಳು ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ. ಡಿ. ೩೦, ೩೧ರಂದು ಹೊಸ ವರ್ಷಾಚರಣೆಗೆ ಬಂದ ಪ್ರವಾಸಿಗರು ಅದರಲ್ಲೂ ರಜಾ ದಿನವಾಗಿದ್ದರಿಂದ ವಾಟರ್ ಆಕ್ಟಿವಿಟೀಸ್ ಸಂಪೂರ್ಣವಾಗಿ ಭರ್ತಿಯಾಗಿತ್ತು. ಇಡೀ ದಿನ ನಿರಂತರವಾಗಿ ವಾಟರ್ ಆಕ್ಟಿವಿಟೀಸ್ ನಡೆದರೂ ಕೂಡ ಕೊನೆಗೆ ಕೆಲವರು ಈ ಜಲ ಸಹಾಸ ಕ್ರೀಡೆ ನಡೆಸಲಾಗದೆ ಬೇಸರಿಸಿ ಮರಳಿದ್ದಾರೆ.;Resize=(128,128))
;Resize=(128,128))
;Resize=(128,128))