ಭಾರತ ಕಲೆ, ಸಂಸ್ಕೃತಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಂಡಿದೆ: ಬಸವರಾಜ

| Published : Jan 02 2024, 02:15 AM IST

ಭಾರತ ಕಲೆ, ಸಂಸ್ಕೃತಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಂಡಿದೆ: ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಅವರು ಜ್ಯೋತಿಷ ಜ್ಞಾನದ ಶಿಲ್ಪಕಲೆ ಮಹಾಭಾರತದ ಪ್ರತಿಯೊಂದು ಘಟನೆಯನ್ನು ಕಲ್ಲಿನಲ್ಲಿ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತವು ಕಲೆ, ಸಾಂಸ್ಕೃತಿಕ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಂಡಿದೆ. ವಿಶ್ವಕರ್ಮ ಅವರು ಜ್ಯೋತಿಷ ಜ್ಞಾನದ ಶಿಲ್ಪಕಲೆ ಮಹಾಭಾರತದ ಪ್ರತಿಯೊಂದು ಘಟನೆಯನ್ನು ಕಲ್ಲಿನಲ್ಲಿ ಬರೆದಿದ್ದಾರೆ. ಎಂದು ಯಡ್ರಾಮಿಯ ಗುರು ಭೀಮಾಶಂಕರ ವಿದ್ಯಾಪೀಠ ವಸ್ತಾರಿ-ಶಿರಸಗಿ ಅಧ್ಯಕ್ಷ ಬಸವರಾಜ ಬೋರಗಿ ಹೇಳಿದರು.

ಸೋಮವಾರದಂದು ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯ್ತಿ ಕಲಬುರಗಿ ಆಶ್ರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು.

ಕಲ್ಲಿನಲ್ಲಿ ಜೀವಂತ ಕಥೆಯನ್ನು ತೆಗೆದಿದ್ದಾರೆ ಅವರ ಒಂದು ಕೈಕೆಳಿಗೆ 500 ಶಿಲ್ಪಿಗಳು ಕೆಲಸ ಮಾಡುತ್ತಿದ್ದರು ಅಮರ ಶಿಲ್ಪಿ ಜಕಣಾಚಾರಿ ಶಿಲ್ಪಿಕಲೆ ಅವನೊಬ್ಬ ಜ್ಯೋತಿಷನಾಗಿದ್ದಾನೆ ಸೋಮನಾಥಪುರದಲ್ಲಿ ಮೊಟ್ಟಮೊದಲ ಶಿಲ್ಪಕಲೆಯನ್ನು ಆರಂಭಿಸಿದರು ಬೇಲೂರು ಚನ್ನಕೇಶವ ದೇವಲಾಯದಲ್ಲಿ ಆರಂಭಿಸಿದ್ದರು ಬೇಲೂರು ಚನ್ನಕೇಶವ ದೇವಾಲಯದಲ್ಲಿ 18 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ ಎಂದರು.

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಿತಿ ಜಿಲ್ಲಾ ಅಧ್ಯಕ್ಷ ಐ.ಸಿ. ಪಂಚಾಳ ಮಾತನಾಡಿ, ಕೆಂಗಲ್ ಹಣಮಂತಯ್ಯ ವಿಧಾನ ಸೌಧ ಕಟ್ಟಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಬಹಳಷ್ಟು ಜನರಿಗೆ ಗೊತ್ತಿಲ್ಲ ಕೆಂಗಲ್ ಹಣಮಂತಯ್ಯ ಅವರ ಕನಸು ನನಸು ಮಾಡಿದವರು ವಿಶ್ವಕರ್ಮದವರು ಎಂದರು ಹೇಳಿದರು.

ಜಿಲ್ಲಾಧಿಕಾರಿಗಳ ಶಿಷ್ಠಾಚರಾದ ತಹಶೀಲ್ದಾರ ಸೈಯದ್ ನಿಸಾರ ಅಹ್ಮದ್ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮರಗೆಲಸ ಮಾಡುವವರನ್ನು ಗೌವರವಿಸಿ ಸನ್ಮಾನಿಸಿದರು.

ವೇದಿಕೆ ಮೇಲೆ ಅಫಜಲಪೂರ ಮೂರಜಾವ ಮಠ ಪ್ರಣಾಂನಂದ ಸ್ವಾಮಿಜಿ, ದೊಡ್ಡೇಂದ್ರ ಸ್ವಾಮೀಜಿ ಸುಲೇಪೇಟ್ ಏಕದಂಡಿ ಮಠ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ಅಧ್ಯಕ್ಷರಾದ ಕಮಲಾಕರ ಕಲಾವಿದ ಮೋಹನ ಸಿತನೂರ ಇದ್ದರು.