ದಾಸಶ್ರೇಷ್ಠ ಭಕ್ತ ಕನಕದಾಸರ ಸ್ಮರಣೆ

| Published : Nov 09 2025, 03:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಕನಕದಾಸರು ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಮಹಾನ್‌ ವ್ಯಕ್ತಿ. ಅವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕನಕದಾಸರು ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಮಹಾನ್‌ ವ್ಯಕ್ತಿ. ಅವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕುರುಬರ ಸಂಘ ಶನಿವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಸಾಹಿತಿ, ಸಂತರಾಗಿ ಕನಕದಾಸರು, ಸಾಮಾಜಿಕ ಚಿಂತನೆಯನ್ನು ಬಿತ್ತಿದ್ದಾರೆ. ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ. ಇಂದಿನ ಯುವಕರು ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಕೆ.ಎಸ್.ಹಿರೇಕುರುಬರ, ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ. ಕನಕದಾಸರು ಸರಳ ಭಾಷೆಯಲ್ಲಿಯೇ ಸಾಮಾಜಿಕ ಚಿಂತನೆಗಳನ್ನು ಬಿತ್ತಿದ್ದಾರೆ. ಅವರ ಸಾಹಿತ್ಯ ಸಮಾಜಕ್ಕೆ ಒಂದು ಮಾರ್ಗದರ್ಶಿಯಾಗಿದೆ ಎಂದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುನಾಥ ಮುರಡಿ ಮಾತನಾಡಿ, ಕನಕದಾಸರ ಭಕ್ತಿ ಅಪಾರವಾಗಿತ್ತು. ಅವರ ಭಕ್ತಿಗೆ ಮೆಚ್ಚಿದ ಉಡುಪಿ ಶ್ರೀಕೃಷ್ಣನೇ ಹಿಂದಕ್ಕೆ ತಿರುಗಿ, ಕನಕ ದಾಸರಿಗೆ ದರ್ಶನ ನೀಡಿದ್ದಾನೆ. ಈಗಲೂ ಅದು ಕನಕನ ಕಿಂಡಿ ಎಂದೇ ಪ್ರಸಿದ್ಧವಾಗಿದೆ. ಅದಕ್ಕಾಗಿಯೇ ಕನಕದಾಸರನ್ನು ಭಕ್ತಶ್ರೇಷ್ಠ ಕನಕದಾಸರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.ಜಯಂತಿ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಯಿತು. ಕಲಶಗಳೊಂದಿಗೆ ಮಹಿಳೆಯರು, ಕಲಾತಂಡಗಳು, ಕುರುಬರ ಸಂಘದ ಸದಸ್ಯರು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆ, ಬಾರ ಎತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ಮುಖಂಡರಾದ ಬಸಪ್ಪ ದೇವಣಗಾಂವ, ಸಿದ್ದು ಬುಳ್ಳಾ, ರಮೇಶ ಮಸಬಿನಾಳ, ಪ್ರಕಾಶ ಗುಡಿಮನಿ, ಸುನಿಲ ಮಾಗಿ, ಶರಣು ಪೂಜಾರಿ, ಪ್ರಕಾಶ ದೊಡಮನಿ, ರಾಜು ಸಿಂದಗೇರಿ, ನಾಗೇಶ ನಾಗೂರ, ಜಿ.ಪಿ.ಬಿರಾದಾರ, ಮಡಿವಾಳಪ್ಪ ಬ್ಯಾಲಾಳ, ಅಪ್ಪು ಪಟ್ಟೇದ, ಆದೇಶ ಪೂಜಾರಿ, ಸೋಮರಾಯ ಪೂಜಾರಿ, ಜಟ್ಟೆಪ್ಪ ಪೂಜಾರಿ, ಶರಣಪ್ಪ ಪೂಜಾರಿ, ಸಿದ್ದ ದೊಡ್ಡಿಣಿ, ಸಿದ್ದು ಬೊಮ್ಮನಳ್ಳಿ, ಯಮನು, ದೇವಣಗಾಂವ, ಚಂದು ಪೂಜಾರಿ, ಭೀರು ಹಳ್ಳಿ, ಬೀರು ದೆವೂರ, ಮಾಳು ಪೂಜಾರಿ, ಈರಣ್ಣ ಕಡ್ಲೇವಾಡ, ಜಕ್ಕು ದೊಡ್ಡಿಣಿ, ಭೀಮು ಬುಳ್ಳಾ, ಶ್ರೀಶೈಲ ತಿಳಗೂಳ, ವಿಠ್ಠಲ ಚಿಕ್ಕರೂಗಿ, ಅಮ್ಮೋಗಿ ಪಡಗಾನೂರ, ಪೂಜು ಬಿಸನಾಳ, ಸಿದ್ದು ಹಿಪ್ಪರಗಿ, ಬಸ್ಸು ಪೂಜಾರಿ, ಶಿವರಾಜ ತಳವಾರ ಸೇರಿ ಸೇರಿ ಸಮಾಜದ ಮುಖಂಡರು, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಶಿರಸ್ತೇದಾರ ಸುರೇಶ ಮ್ಯಾಗೇರಿ ನಿರೂಪಿಸಿ, ವಂದಿಸಿದರು.