ಮೂಡಿಗೆರೆಕೃಷಿಯಲ್ಲಿ ಏಳು ಬೀಳು, ಲಾಭ ನಷ್ಟ ಇದ್ದೇ ಇರುತ್ತದೆ. ನಷ್ಟವಾದಾಗ ಕುಗ್ಗಬಾರದು. ಭೂಮಿ ತಾಯಿ ನಂಬಿದರೆ ಖಂಡಿತಾ ಕೈ ಹಿಡಿಯತ್ತಾಳೆ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಪ್ರಗತಿಪರ ಕೃಷಿಕ ಡಾ. ಎಂ.ಸಿ.ರಂಗಸ್ವಾಮಿ ಮಗ್ಗೆಮನೆ ಹೇಳಿದರು.

2ನೇ ದಿನದ ಕೃಷಿ ಮತ್ತು ತೋಟಗಾರಿಕಾ ಮೇಳ

ಕನ್ನಡಪ್ರಭ ವಾರ್ತೆ, ಮೂಡಿಗೆರೆಕೃಷಿಯಲ್ಲಿ ಏಳು ಬೀಳು, ಲಾಭ ನಷ್ಟ ಇದ್ದೇ ಇರುತ್ತದೆ. ನಷ್ಟವಾದಾಗ ಕುಗ್ಗಬಾರದು. ಭೂಮಿ ತಾಯಿ ನಂಬಿದರೆ ಖಂಡಿತಾ ಕೈ ಹಿಡಿಯತ್ತಾಳೆ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಪ್ರಗತಿಪರ ಕೃಷಿಕ ಡಾ. ಎಂ.ಸಿ.ರಂಗಸ್ವಾಮಿ ಮಗ್ಗೆಮನೆ ಹೇಳಿದರು. ಶನಿವಾರ ಕೆವಿಕೆ ಆವರಣದಲ್ಲಿ 2ನೇ ದಿನದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಸಮಗ್ರ ಕೃಷಿಯಲ್ಲಿ ಆದಾಯ ದ್ವಿಗುಣ ಬಗ್ಗೆ ಮಾತನಾಡಿದರು. ಕೃಷಿ ಭೂಮಿಯನ್ನು ಜಾಗ ಖಾಲಿ ಬಿಡದೇ ಎಲ್ಲಾ ಜಾಗವನ್ನು ಕೃಷಿಗೆ ಬಳಸಿಕೊಳ್ಳಬೇಕು. ಅದರಲ್ಲಿ ವಿವಿಧ ಬೆಳೆ ಜತಗೆ ವೈಜ್ಞಾನಿಕವಾಗಿ ಸಾವಯವ ಮಿಶ್ರ ಬೆಳೆ ಪದ್ಧತಿ ಮಾಡಬೇಕು. ಹೊಸ ತಳಿಗಳು, ತಂತ್ರಜ್ಞಾನ ಬೆಳೆಸಿ ಕೊಂಡು ನಾವು ಬೆಳೆದ ಬೆಳೆಯನ್ನು ನಮ್ಮದೇ ಆದ ಬ್ರಾಂಡ್ ಮಾಡಿ ಮಾರಬೇಕು. ಸರಕಾರ ರೈತರಿಗೆ ಸಬ್ಸಿಡಿ ಕೊಟ್ಟರೆ ಸಾಲುವುದಿಲ್ಲ. ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ಕೇಂದ್ರ ಹೆಚ್ಚಾಗಿ ಸ್ಥಾಪಿತವಾಗಬೇಕು. ಹೊಸ ತಂತ್ರಜ್ಞಾನದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಸಂಶೋಧನೆ ಮತ್ತು ಅಧಿಕ ಆದಾಯಕ್ಕೆ ಹೆಚ್ಚು ಆಧ್ಯತೆ ನೀಡಬೇಕು. ಬುದ್ಧಿವಂತ ವಿಜ್ಞಾನಿಗಳನ್ನು ನಮ್ಮ ದೇಶದಲ್ಲೇ ಉಳಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಜಿ.ಎನ್.ಕರಣ್ ಅವರು, ಆಧುನಿಕ ಕಾಫಿ ಬೆಳೆಯ ತಾಂತ್ರಿಕತೆ ಬಗ್ಗೆ ಮಾತನಾಡಿ, ಕಾಫಿ ಬೆಳೆ ಮುಂದಿನ ವರ್ಷ ಉತ್ತಮ ಫಸಲು ಬರಬೇಕೆಂದರೆ ಸಮಯಕ್ಕೆ ಸರಿಯಾಗಿ ಕಾಫಿ ಕೊಯ್ಲು ನಡೆಸಬೇಕು. ಹೂವು ಬಿಡುವ ಸಂದರ್ಭದಲ್ಲಿ ರಂಜಕ, ಒಂದು ವರ್ಷದಲ್ಲಿ 3ರಿಂದ 4 ಬಾರಿ ನೀರು ಹಾಯಿಸಲು ನೀರಿನ ಅವಶ್ಯಕತೆ ಇದೆ. ನೆರಳು ನಿರ್ವಹಣೆ, ಮಣ್ಣಿನ ಫಲವತ್ತತೆ, ಸೂಕ್ಷ್ಮ ಪೋಷಕಾಂಶ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ನೀಡುವ ಜತೆಗೆ ಸಮಯಕ್ಕೆ ಸಿರಿಯಾಗಿ ಗೊಬ್ಬರ ಬಳಕೆ ಮಾಡಬೇಕೆಂದು ಸಲಹೆ ನೀಡಿದರು. ಬಳಿಕ ಶಿವಮೊಗ್ಗದ ಅಡಕೆ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅವರಿಂದ ಅಡಕೆಯಲ್ಲಿ ಮಿಶ್ರ ಬೆಳೆ ಹಾಗೂ ಅಂತರ ಬೇಸಾಯಿ ಪದ್ಧತಿ ಬಗ್ಗೆ, ಎಸಿಎಫ್ ಎಂ.ಇ.ಚರಣ್ ಅವರಿಂದ ಕಾಡು ಪ್ರಾಣಿಗಳ ನಿರ್ವಹಣಾ ಕ್ರಮಗಳ ಬಗ್ಗೆ, ಶಿವಮೊಗ್ಗದ ಜಿಕೆಎಂಎಸ್‌ನ ಡಾ. ಪ್ರವೀಣ್ ಹಾಗೂ ಡಾ.ಮಹೇಶ್ ಅವರಿಂದ ಹವಾಮಾನ ಆಧಾರಿತ ಕೃಷಿ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಗೌತಳ್ಳಿ ಲಕ್ಷ್ಮಣ್‌ಗೌಡ, ಎಫ್‌ಯು ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಹಸಿರು ಆರ್ಗ್ಯಾನಿಕ್ಸ್ ಮುಖ್ಯಸ್ಥ ಬಿ.ಸಿ.ಅರವಿಂದ್, ಕೃಷಿಕ ಸಮಾಜದ ಕಾರ್ಯದರ್ಶಿ ಜಗನ್ನಾಥ್‌ಗೌಡ, ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

20 ಮೂಡಿಗೆರೆ 1ಎಮೂಡಿಗೆರೆ ಕೆವಿಕೆ ಆವರಣದಲ್ಲಿ 2ನೇ ದಿನದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಪ್ರಗತಿಪರ ಕೃಷಿಕ ಡಾ. ಎಂ.ಸಿ.ರಂಗಸ್ವಾಮಿ ಮಗ್ಗೆಮನೆ ಮಾತನಾಡಿದರು.