ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಗಾಡಿ ಗೊಂಬೆ ಸೇರಿದಂತೆ ಹಲವು ಕಲಾತಂಡ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪಟ್ಟಣದಲ್ಲಿ ಶ್ರೀ ಹನುಮ ಸೇವಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.ಪಟ್ಟಣದ ಹುಣಸೂರು ಬೇಗೂರು ರಸ್ತೆಯಲ್ಲಿರುವ ಕನಕ ಭವನದ ಮುಂಭಾಗ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ದಾವಣಗೆರೆ ಶ್ರೀ ಮುರುಘಾಮಠದ ನಟರಾಜ ಸ್ವಾಮೀಜಿ, ಶ್ರೀ ಮಹದೇವ ಸ್ವಾಮೀಜಿ, ಶ್ರೀ ಷಡಕ್ಷರ ಸ್ವಾಮೀಜಿ, ಶ್ರೀ ನಾಗೇಂದ್ರ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ದೊಡ್ಡದಾರಿಯ ಸ್ವಾಮೀಜಿ ಅವರು ಹನುಮ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯು ಪಟ್ಟಣದ ಹುಣಸೂರು ಬೇಗೂರು ಮಾರ್ಗವಾಗಿ ಒಂದನೇ ಮುಖ್ಯರಸ್ತೆ ಮುಖಾಂತರ ಶ್ರೀ ಲಕ್ಷ್ಮಿ ವರದರಾಜಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಗಾಡಿ ಗೊಂಬೆ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.ತಾಲೂಕು ಹನುಮ ಸೇವಾ ಸಮಿತಿಯ ಅಧ್ಯಕ್ಷ ರಾಜು, ಉಪಾಧ್ಯಕ್ಷ ರೂಪೇಶ್, ಕಾರ್ಯದರ್ಶಿ ಮುತ್ತುರಾಜ್, ಖಜಾಂಚಿ ಪ್ರಮೋದ್, ಮುಖಂಡರಾದ ಕೃಷ್ಣನಾಯಕ, ಜಯಪ್ರಕಾಶ್, ಮಧುಕುಮಾರ್, ಗಿರಿಗೌಡ, ಅನಿಲ್ ರಾಜು, ಅಶೋಕ್, ನಂದೀಶ್, ಚಂದ್ರಮೌಳೇಶ್‌, ಸುಧಾಕರ, ರಘುನಾಥ್, ಪ್ರಶಾಂತ್, ಅಶೋಕ್, ನಾರಾಯಣ್ ಲಾಲ್, ಶ್ರೀಕಾಂತ್, ಪಪ್ಪು, ಸುಧಾಕರ, ಸುರೇಶ್, ಮಹೇಶ್, ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.