ಕನ್ನಡಪ್ರಭ ವಾರ್ತೆ ಗುಳೇದಗುಡ್ಡಪಟ್ಟಣದ ಗಾಯತ್ರಿ ನಗರದಲ್ಲಿ ಹೇರಳವಾಗಿ ಸಂಗ್ರಹಗೊಂಡ ಮಳೆ ನೀರಿನಿಂದ ಗಬ್ಬು ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲಿನ ನಿವಾಸಿಗಳು ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದೆಂಬ ಭಯದಿಂದ ಬದುಕುವಂತಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಗಾಯತ್ರಿ ನಗರದಲ್ಲಿ ಹೇರಳವಾಗಿ ಸಂಗ್ರಹಗೊಂಡ ಮಳೆ ನೀರಿನಿಂದ ಗಬ್ಬು ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲಿನ ನಿವಾಸಿಗಳು ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದೆಂಬ ಭಯದಿಂದ ಬದುಕುವಂತಾಗಿದೆ.

ಪಟ್ಟಣದ ಗಾಯಿತ್ರಿ ನಗರದಲ್ಲಿ ತಿಂಗಳಿಂದ ಮಲೀನ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಮಲೀನ ನೀರಿನಿಂದ ಸಮಸ್ಯೆ ಅನುಭವಿಸುತ್ತ ತಮ್ಮ ವೇದನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಸುಮಾರು 65ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ನೇಕಾರರೇ ವಾಸವಾಗಿದ್ದಾರೆ. ಮೊದಲೇ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಸಾಕಷ್ಟು ಪ್ರಮಾಣದಲ್ಲಿ ಮಲೀನ ನೀರು, ಸೊಳ್ಳೆಗಳ ಕಾಟ, ಇದರಿಂದ ರೋಗ ರುಜಿನಗಳಿಗೆ ತುತ್ತಾಗುವಂತಾಗಿದೆ. ಮಳೆ ಬಂದಾಗೊಮ್ಮೆ ನೀರು ಸರಾಗವಾಗಿ ಹರಿದು ಹೋಗುವ ಯಾವುದೇ ವ್ಯವಸ್ಥೆ ಇಲ್ಲಿ ಮಾಡಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಇದನ್ನು ಪುರಸಭೆ ಅಧಿಕಾರಿಗಳ ಎದುರು ತಮ್ಮ ಅಲಳನ್ನು ತೋಡಿಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳು ನೀರು ಸಾರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಗಟಾರ ನಿರ್ಮಿಸಲು ಮುಂದಾಗಿ, ಮನೆಗಳ ಹಿಂದೆ, ಮುಂದೆ ಈಗಾಗಲೇ ತಗ್ಗುಗಳನ್ನು ತೋಡಿದ್ದಾರೆ. ಆದರೆ ತಗ್ಗುಗಳು ಈಗ ಮಳೆ ನೀರಿನಿಂದ ತುಂಬಿದ್ದು, ಇದರಿಂದ ಸೊಳ್ಳೆಗಳು, ಜಲಚರ ಜೀವಿಗಳ ಭಯ ಹೆಚ್ಚಾಗಿದೆ. ಸಾರ್ವಜನಿಕರು ಭಯದಲ್ಲಿ ಇಲ್ಲಿ ಜೀವನ ಸಾಗಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ. ಗಟಾರದಲ್ಲಿ ನಿಂತ ನೀರು ಸಾಕಷ್ಟು ಕೊಳಚೆಯಾಗಿದೆ. ಅದರಿಂದ ಸೊಳ್ಳೆಗಳು ಕೂಡ ಮಿತಿಮೀರಿವೆ.

ಇಲ್ಲಿನ ನಿವಾಸಿಗಳು ಸೊಳ್ಳೆಗಳ ಸಮಸ್ಯೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಗಾಯತ್ರಿ ನಗರದಲ್ಲಿನ ಮಲೀನ ನೀರು ಹಾಗೂ ಸೊಳ್ಳೆಗಳ ಕಿರಿಕಿರಿಯಿಂದ ಸಾರ್ವಜನಿಕರನ್ನ ಮುಕ್ತಗೊಳಿಸಬೇಕು. ಗಟಾರದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಮೂಲಕ ಅಧಿಕಾರಿಗಳು ಸಾರ್ವಜನಿಕರ ನೆಮ್ಮದಿಗೆ ಮುಂದಾಗಬೇಕು ಎಂದು ಗಾಯತ್ರಿ ನಗರದಲ್ಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.