ಸಾರಾಂಶ
ಎಚ್.ಎನ್.ನಾಗರಾಜು ಹೊಳವನಹಳ್ಳಿ.ಕನ್ನಡಪ್ರಭ ವಾರ್ತೆ ಕೊರಟಗೆರೆ ಇತಿಹಾಸ ಪ್ರಸಿದ್ದವಾದ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆಗೆ ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ರೈತರು, ವಿವಿಧ ತಳಿಯ ರಾಸುಗಳ ಜಾತ್ರೆಗೆ ಆಗಮಿಸಿದ್ದು, ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ.ದಕ್ಷಿಣ ಭಾರತದ ಐತಿಹಾಸಿಕ ಕಮನಿಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಸಂಕ್ರಾಂತಿ ಹಬ್ಬದ ಮಾರನೇ ದಿನದಿಂದ ರಾಸುಗಳ ಜಾತ್ರೆ ಪ್ರಾರಂಭವಾಗಿದೆ. ರಾಸುಗಳನ್ನ ಕೊಳ್ಳಲು ಮಾರಲು ರಾಜ್ಯದ ಬಳ್ಳಾರಿ, ರಾಯಚೂರು, ಹಾಸನ, ಬೀದರ್, ಹಾವೇರಿ, ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.ಸಂಕ್ರಾಂತಿ ಹಬ್ಬದಿಂದ ೮ ದಿನಗಳ ಕಾಲ ನಡೆಯುವ ರಾಸುಗಳ ಜಾತ್ರೆಗೆ ಹಳ್ಳಿಕಾರ್ ತಳಿ, ಅಮೃತಮಹಲ್, ಹಳ್ಳಿ, ರಾಣಿ, ಬಳಿ, ಕಪ್ಪು, ರುಪಾಯಿ ಬಣ್ಣದ ಎತ್ತುಗಳು ಮಾರಾಟಕ್ಕೆ ಬೇಡಿಕೆಯಾಗಿದೆ. ಅತಿಹೆಚ್ಚು ಅಪ್ಪಟ ನಾಟಿ ಹಸುಗಳು, ಹಾಲು ಕೊಡುವ ಹಸು, ಹಾಗೂ ಹೊಲ ಉಳುವ ಎತ್ತುಗಳು ಹಾಗೂ ಹಳ್ಳಿಕಾರ್ ತಳಿಗೆ ಹೆಚ್ಚು ಬೇಡಿಕೆಯ ರಾಸುಗಳಾಗಿವೆ. ಜಾತ್ರೆಯಲ್ಲಿ ೫೦ ಸಾವಿರದಿಂದ ೫ ಲಕ್ಷದವರೆಗೂ ವಿವಿಧ ತಳಿಯ ರಾಸುಗಳು ಅದರಲ್ಲೂ ಹೆಚ್ಚಾಗಿ ಹಳ್ಳಿಕಾರ್ ರಾಸುಗಳು ಮಾರಾಟವಾಗುತ್ತಿವೆ.
ಫೆ.೫ ರಂದು ಬ್ರಹ್ಮ ರಥೋತ್ಸವ:ಸಂಕ್ರಾಂತಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆ ಪ್ರಾರಂಭ. ಫೆ.೩ ರಿಂದ ಫೆ.೧೪ರವರೆಗೂ ಸ್ವಾಮಿಗೆ ವಿಶೇಷ ಹೋಮ ಹವನ ಪೂಜೆಗಳು ನಡೆಯಲಿದ್ದು, ಫೆ.೫ರ ಬುಧವಾರ ಬ್ರಹ್ಮ ರಥೋತ್ಸವ ಜರುಗಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಆಂಜನೇಯಸ್ವಾಮಿ ಭಕ್ತರು ಆಗಮಿಸಲಿದ್ದಾರೆ.ಕೋಟ್ ಬಳಸಿ:-ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ ಸುಮಾರು ೧೦ ವರ್ಷಗಳಿಂದ ಇಲ್ಲಿಗೆ ಬಂದು ರಾಸುಗಳನ್ನ ಕೊಳ್ಳಲು ಬರುತ್ತಿದ್ದೇವೆ. ಈ ಭಾರಿ ರಾಸುಗಳ ಬೆಲೆ ಜಾಸ್ತಿಯಾಗಿದ್ದು, ವ್ಯಾಪಾರ ವಾಹಿವಾಟು ಸಾಧಾರಣವಾಗಿ ನಡೆಯುತ್ತಿದೆ. ೫೦ ಸಾವಿರದಿಂದ ೫ ಲಕ್ಷದವರೆಗೂ ರಾಸುಗಳ ಬೆಲೆ ಹೇಳುತ್ತಿದ್ದಾರೆ. ರಾಸುಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಅದರೆ ಬೆಲೆ ಜಾಸ್ತಿ ಆಗಿವೆ.- ಶಾಂತರಾಜು ರೈತ ದಾವಣಗೆರೆ ಜಿಲ್ಲೆಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸು ಜಾತ್ರೆ ಹಾಗೂ ರಥಸಪ್ತಮಿ ಇರುವುದರಿಂದ ರೈತರಿಗೆ ಹಾಗೂ ಅಂಗಡಿ ವ್ಯಾಪಾರ ಮಾಡುವವರಿಗೆ ತೊಟ್ಟಿಗಳಿಗೆ ನೀರು ಬಿಡಲಾಗಿದೆ. ಟ್ಯಾಂಕರ್ ಮೂಲಕ ನೀರು ಬಿಡುವ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಅವರಣದಲ್ಲಿರುವ ಕಂಬಗಳಿಗೆ ವಿದ್ಯುತ್ ಬಲ್ಪ್ ಅಳವಡಿಸಲಾಗಿದ್ದು, ಸ್ಥಳದಲ್ಲಿಯೇ ಪೊಲೀಸ್ ಹಾಗೂ ಕಂದಾಯ ಇಲಾಖೆ, ಹಾಗೂ ಪಶು ವೈದ್ಯರು ೨೪ ಗಂಟೆ ಇರುವಂತೆ ಸೂಚಿಸಲಾಗಿದೆ.