ಜನ ಇತ್ತೀಚೆಗೆ ವಾರ್ಡುಗಳಲ್ಲಿ ಸಂಚಾರ ಮಾಡಬೇಕಾದರೆ ಪ್ರಾಣ ಬಿಗಿ ಹಿಡಿದಿಟ್ಟುಕೊಂಡು ಭಯದಲ್ಲೇ ಓಡಾಡುವ ಪರಿಸ್ಥಿತಿ ಬಂದೊದಗಿದೆ. ರಸ್ತೆಯಲ್ಲಿ ಓಡಾಡಲು ಬಂದರೆ ಸಾಕು ಹಿಂಡು ಹಿಂಡುಗಳಾಗಿ ಬರುವ ನಾಯಿಗಳು ಬೊಗಳುತ್ತಾ ದಾಳಿ ಮಾಡಲು ಬರುವವು. ಪ್ರತಿನಿತ್ಯ ಇಂತಹ ಘಟನೆಗಳು ಸರ್ವೆ ಸಾಮಾನ್ಯವಾಗಿದೆ. ಜನ ಈ ರಸ್ತೆಯಲ್ಲಿ ಓಡಾಡಲು ತುಂಬಾ ಹೆದರುವರು. ದಿನದ ೨೪ ಗಂಟೆ ರಸ್ತೆಯನ್ನೇ ತಮ್ಮ ಮನೆಯನ್ನಾಗಿಸಿಕೊಂಡ ನಾಯಿಗಳು ವಾಹನ ಸವಾರರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಬೀದಿ ಬೀದಿಯಲ್ಲೂ ನಾಯಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಬಹುತೇಕ ನಾಯಿಗಳು ರಸ್ತೆಗೆ ಬಂದವರ ಮೇಲೆ ದಾಳಿ ಮಾಡಿ ಕಚ್ಚಲು ಮುಗಿಬೀಳುವುದರಿಂದ ಜನ ಸಂಚಾರಕ್ಕೆ ಭಯಪಡುತ್ತಿದ್ದಾರೆ. ಪಟ್ಟಣದ ಜನ ಇತ್ತೀಚೆಗೆ ವಾರ್ಡುಗಳಲ್ಲಿ ಸಂಚಾರ ಮಾಡಬೇಕಾದರೆ ಪ್ರಾಣ ಬಿಗಿ ಹಿಡಿದಿಟ್ಟುಕೊಂಡು ಭಯದಲ್ಲೇ ಓಡಾಡುವ ಪರಿಸ್ಥಿತಿ ಬಂದೊದಗಿದೆ. ರಸ್ತೆಯಲ್ಲಿ ಓಡಾಡಲು ಬಂದರೆ ಸಾಕು ಹಿಂಡು ಹಿಂಡುಗಳಾಗಿ ಬರುವ ನಾಯಿಗಳು ಬೊಗಳುತ್ತಾ ದಾಳಿ ಮಾಡಲು ಬರುವವು. ಪ್ರತಿನಿತ್ಯ ಇಂತಹ ಘಟನೆಗಳು ಸರ್ವೆ ಸಾಮಾನ್ಯವಾಗಿದೆ. ಜನ ಈ ರಸ್ತೆಯಲ್ಲಿ ಓಡಾಡಲು ತುಂಬಾ ಹೆದರುವರು. ದಿನದ ೨೪ ಗಂಟೆ ರಸ್ತೆಯನ್ನೇ ತಮ್ಮ ಮನೆಯನ್ನಾಗಿಸಿಕೊಂಡ ನಾಯಿಗಳು ವಾಹನ ಸವಾರರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿವೆ.

ಶಾಲಾ ಮಕ್ಕಳು ರಸ್ತೆಯಲ್ಲಿ ಪೋಷಕರ ಜತೆಯಲ್ಲೇ ಓಡಾಡಬೇಕು. ಇಲ್ಲವಾದಲ್ಲಿ ಯಾವ ನಾಯಿ ದಾಳಿ ಮಾಡಿ ಗಾಯಗೊಳಿಸುವುದೋ ಎಂಬ ಭಯ. ಈ ಕಾರಣದಿಂದಾಗಿ ಆತಂಕದಿಂದ ಹಾಗೂ ಭಯದ ವಾತಾವರಣದಲ್ಲಿ ಓಡಾಡುತ್ತಿದ್ದಾರೆ. ಪ್ರತಿನಿತ್ಯ ೮ರಿಂದ ೧೦ ವಾಹನ ಸವಾರರಿಗೆ ನಾಯಿಗಳು ಅಡ್ಡ ಬಂದು ಅಪಘಾತ ಮಾಡುವುದಲ್ಲದೆ ಅವರ ಕೈಕಾಲು ಹಾಗೂ ದೇಹದ ಭಾಗಗಳಿಗೆ ಗಾಯಗೊಳಿಸಿ ವಾಹನ ಸವಾರರಿಗೆ ತುಂಬಾ ತೊಂದರೆ ನೀಡುತ್ತಿವೆ.

ವಾಹನ ಸಂಚಾರಕ್ಕೂ ನಾಯಿಗಳೇ ಅಡ್ಡಿ:ಪಟ್ಟಣದ ಅಂಗಡಿ-ಮುಗ್ಗಟ್ಟು, ಸರ್ಕಾರಿ ಕಚೇರಿ, ಖಾಸಗಿ ಕಚೇರಿ, ಹೋಟೆಲ್, ಚಿಕನ್ ಮಟನ್ ಅಂಗಡಿ, ಬಟ್ಟೆ ಅಂಗಡಿ, ವಾಹನ ರಿಪೇರಿ ಅಂಗಡಿಗಳು ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ಜನರ ಓಡಾಟ ಹಾಗೂ ವಾಹನ ಸಂಚಾರವೂ ಅಷ್ಟು ದಟ್ಟಣೆಯಿಂದ ಕೂಡಿದೆ. ಇದರ ಮಧ್ಯೆ ಸಂಚಾರಕ್ಕೆ ತೊಂದರೆ ಕೊಡಲೆಂದೇ ರಸ್ತೆಗಳಿದಿರುವ ನಾಯಿಗಳು ವಾಹನ ಸವಾರರು, ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರತಿನಿತ್ಯ ತೊಂದರೆ ನೀಡುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.ಬೇರೆ ಊರಿನ ನಾಯಿಗಳು:ಹಲವು ವರ್ಷಗಳ ಹಿಂದೆ ಇಲ್ಲಿ ಊರಿನಲ್ಲಿ ನಾಯಿಗಳೇ ಇರಲಿಲ್ಲ. ಬೇರೆ ಸ್ಥಳದಿಂದ ಸುಮಾರು ೭೦ರಿಂದ ೮೦ ನಾಯಿಯನ್ನು ಟೆಂಪೋದಲ್ಲಿ ತುಂಬಿಕೊಂಡು ರಾತ್ರಿ ವೇಳೆಯಲ್ಲಿ ಪಟ್ಟಣಕ್ಕೆ ಬಿಡುತ್ತಿದ್ದಾರೆ. ಅದು ಯಾರು ಬಿಡುತ್ತಿದ್ದಾರೋ ಗೊತ್ತಿಲ್ಲ. ಏತಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದನ್ನು ಪುರಸಭೆಯವರು ಕಂಡು ಹಿಡಿಯಬೇಕಾಗಿದೆ. ಹಾಗೂ ನಾಯಿಗಳನ್ನು ಹಿಡಿದು ಸಾರ್ವಜನಿಕರಿಗೆ ತೊಂದರೆ ನೀಡದಂತೆ ಕಾಪಾಡಬೇಕಿದೆಂದು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್ ಆತಂಕಪಟ್ಟರು.

* ಹೇಳಿಕೆ: 1ಪಟ್ಟಣದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ನಾಯಿಗಳಿದ್ದವು. ಯಾವೂ ನಮ್ಮ ಪಟ್ಟಣದ ನಾಯಿಗಳೇ ಅಲ್ಲ ನಮ್ಮ ಊರಿನ ನಾಯಿಗಳು ಯಾವೂ ಯಾರಿಗೂ ತೊಂದರೆ ನೀಡುವುದಿಲ್ಲ. ಈ ಹೊಸ ನಾಯಿಗಳೆಲ್ಲ ಕೇವಲ ರಸ್ತೆಯಲ್ಲೇ ಅಡ್ಡಾಡುತ್ತಿದ್ದು ಪ್ರತಿನಿತ್ಯ ವಾಹನ ಸಂಚಾರಕ್ಕೆ ತುಂಬಾ ಅಡ್ಡಿಯಾಗಿದೆ.

ರಾಜ್‌ಕುಮಾರ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ