ಸಾರಾಂಶ
ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಈ ಹಿನ್ನೆಲೆ ಮೆರವಣಿಗೆ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಗೌರವ ಕೊಟ್ಟು ಅನುಭವಿಸಬೇಕು ಎಂದು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪಿ. ಶಾಂತಮಲ್ಲಪ್ಪ ನುಡಿದರು.ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.
ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಸುಲಭದಲ್ಲಿ ಸಿಕ್ಕಂತದ್ದಲ್ಲ, ಸ್ವಾತಂತ್ರ್ಯ ತಂದುಕೊಳ್ಳಲು ನಮ್ಮ ಹಿರಿಯರು ತಮ್ಮ ಜೀವ ಬಲಿದಾನ ನೀಡಿ ಹೋರಾಟಗಳನ್ನು ನಡೆಸಿ ವರ್ಷಗಟ್ಟಲೆ ಜೈಲುಗಳಲ್ಲಿ ಕಳೆದು ತಮ್ಮ ಜೀವ ಬಲಿದಾನ ನೀಡಿ ಸಿಕ್ಕಿರುವಂತಹದ್ದು ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಸಂಧ್ಯಾ ಟಿ ಎಸ್ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಕೋರುತ್ತಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವು ವ್ಯಕ್ತಿಗಳ ನಿರ್ದೇಶನ ಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡ್ಲಿಪೇಟೆ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಡಿ. ಎಚ್. ಶಾಂತಕುಮಾರ್, ಕೋಶಾಧಿಕಾರಿ ಡಾ. ಉದಯ ಕುಮಾರ್, ನಿರ್ದೇಶಕರಾದ ಯು.ಪಿ ನಾಗೇಶ್, ಸದಸ್ಯರಾದ ಸುಬ್ರಹ್ಮಣ್ಯ, ಡಿ. ಕೆ. ಯತೀಶ್, ದಿನೇಶ್, ಲೋಲಾಕ್ಷಿ, ಕೆ. ಕೆ. ರೇಣುಕಾ, ಆರ್.ಟಿ.ಐ ಕಾರ್ಯಕರ್ತರಾದ ಇಂದ್ರೇಶ್, ಶಾಲಾ ಅಧ್ಯಾಪಕರಾದ ಸುಧಾಮತಿ, ಉಷಾ, ಲಾವಣ್ಯ, ಚುಡಾಮಣಿ, ಸುಧೀರ್, ಅಂಗನವಾಡಿ ಕಾರ್ಯಕರ್ತೆಯರಾದ ನಗ್ಮಾ, ರೆಹನಾ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಮೊದಲಿಗೆ ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನಂತರ ಶನಿವಾರಸಂತೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು.
)
;Resize=(128,128))
;Resize=(128,128))
;Resize=(128,128))