ಸಾರಾಂಶ
ಹಿಂದುಳಿದ ಪ್ರವರ್ಗ 2ಎ ದಲ್ಲಿ ಬರುವ ಹೂಗಾರ್ ಸಮಾಜದ ಜನತೆಗೆ ಸರ್ಕಾರದಿಂದ ಪ್ರಮಾಣಪತ್ರ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಬಸವರಾಜ ಹೂಗಾರ ಕರೆ ನೀಡಿದರು.
ಧಾರವಾಡ: ಹೂಗಾರ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಈ ಸಮಾಜದ ಸರ್ವಾಂಗಿನ ಬೆಳವಣಿಗೆಗಾಗಿ ಹೂಗಾರ ಮಾಲಿ ಮಾಲಗಾರ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ತಿಳಿಸಿದರು.
ನಗರದ ಸಂಘದ ಕಾರ್ಯಾಲಯದಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ, ಬಸವ ಕೇಂದ್ರ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಾದಿ ಶರಣರ ಕಾಲದಿಂದ ಶರಣ ಹೂಗಾರ ಮಾದಯ್ಯನವರು ಆದಿಯಾಗಿ ಕಾಯಕ ಕುಲಕಸುಬುಗಳ ಸಾಂಪ್ರದಾಯಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹಿಂದುಳಿದ ಪ್ರವರ್ಗ 2ಎ ದಲ್ಲಿ ಬರುವ ಹೂಗಾರ್ ಸಮಾಜದ ಜನತೆಗೆ ಸರ್ಕಾರದಿಂದ ಪ್ರಮಾಣಪತ್ರ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಧಾರವಾಡ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ಕಾಲವಾಡ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬನಪ್ಪ ಹೂಗಾರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಹೂಗಾರ ಸಮಾಜ ಸಂಘಟನೆಯ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ, ಬಸವ ಕೇಂದ್ರದ ಎಸ್.ಕೆ. ಕುಂದರಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಕಾಡಸಿದ್ದೇಶ್ವರ ಹೂಗಾರ, ಎಸ್.ಎಚ್. ಹೂಗಾರ ಸನ್ಮಾನಿಸಿದರು.ನೂತನ ಜಿಲ್ಲಾಧ್ಯಕ್ಷ ಪಡೆಯಪ್ಪ ಹೂಗಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರಾಜ್ಯ ಅಧ್ಯಕ್ಷ ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಬನಪ್ಪ ಹೂಗಾರ, ಜಿಪಂ ಸದಸ್ಯ ಹಂಪನಗೌಡ, ಎಸ್.ಕೆ. ಕುಂದರಗಿ, ಜಿಲ್ಲಾ ಉಪಾಧ್ಯಕ್ಷ ವೀಣಾ ಪೂಜಾರ ಸೇರಿದಂತೆ ಹಲವರಿದ್ದರು.