ಸಾರಾಂಶ
ಕೂಲಿ ಮಾಡದಿದ್ದರೂ ಖಾತೆಗೆ ನರೇಗಾ ಹಣ ಖಾತ್ರಿ ಎಂಬ ಶಿರ್ಷಿಕೆಯಡಿ ದೊಡ್ಡಿಂದುವಾಡಿ ಗ್ರಾಪಂ ನಲ್ಲಿ ಪಿಡಿಒ ಕರ್ತವ್ಯಲೋಪದ ಬಗ್ಗೆ ಕನ್ನಡಪ್ರಭ ವರದಿ ಪ್ರಕಟಿಸಿದ್ದ ಹಿನ್ನೆಲೆ ಗ್ರಾಪಂಗೆ ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೂಲಿ ಮಾಡದಿದ್ದರೂ ಖಾತೆಗೆ ನರೇಗಾ ಹಣ ಖಾತ್ರಿ ಎಂಬ ಶಿರ್ಷಿಕೆಯಡಿ ದೊಡ್ಡಿಂದುವಾಡಿ ಗ್ರಾಪಂ ನಲ್ಲಿ ಪಿಡಿಒ ಕರ್ತವ್ಯಲೋಪದ ಬಗ್ಗೆ ಕನ್ನಡಪ್ರಭ ವರದಿ ಪ್ರಕಟಿಸಿದ್ದ ಹಿನ್ನೆಲೆ ಗ್ರಾಪಂಗೆ ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ನಮೂನೆ 6, ಮತ್ತು ನಮೂನೆ 9ರಲ್ಲಿ ಫಲಾನುಭವಿ ಸಹಿ ಇಲ್ಲದ್ದು ಮತ್ತು ಈ ವೇಳೆ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಕಡತ ನಿರ್ವಹಣೆಯಲ್ಲಿನ ಲೋಪ ಕಂಡು ಬಂದಿದೆ. ಅಲ್ಲದೆ ಫಲಾನುಭವಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿಲ್ಲ, ಅಲ್ಲದೆ ಕೆಲಸ ನಿರ್ವಹಿಸಿದ್ದಕ್ಕೆ ಎನ್ ಎಂಆರ್ ಪ್ರತಿಗೆ ಸಹಿ ಇಲ್ಲದ್ದು ಕಂಡು ಬಂದಿತಲ್ಲದೆ, ಈ ವೇಳೆ ಪೂರಕ ದಾಖಲೆ ನೀಡುವಂತೆ ಅಧಿಕಾರಿ ಕೇಳಿದ ವೇಳೆ ಪಿಡಿಒ ಮರಿಸ್ವಾಮಿ ನಿರುತ್ತರ ನೀಡಿದ್ದಾರೆ.ಎಂಜಿನಿಯರ್‌ನನ್ನು ಕೆಲಸ ಮಾಡಿದ್ದಕ್ಕೆ ನೀವು ನಿರ್ವಹಿಸಿದ ಎನ್‌ಎಂಆರ್ ಹಾಗೂ ಇನ್ನಿತರೆ ಕಾಮಗಾರಿ ಸಂಬಂಧಿಸಿದ ದಾಖಲೆ ಸಲ್ಲಿಸಿ ಎಂದರೆ ಅವರು ಸಹಾ ಸಲ್ಲಿಸಿದ ವೇಳೆ ಕರ್ತವ್ಯ ಲೋಪ ಕಂಡು ಬಂದಿದೆ. ಅಲ್ಲದೆ ಈ ವೇಳೆ ಫಲಾನುಭವಿ ಖಾತೆಗೆ ಹಾಕಿದ 3476 ಹಣ ಬಸವ ವಸತಿ ಯೋಜನೆಯ ಕೂಲಿ ಹಣ ಎಂದು ಪಿಡಿಓ ಸಮರ್ಥಿಸಿಕೊಂಡಿದ್ದಾರೆ . ಇದೇ ವೇಳೆ ಹಾಜರಿದ್ದ ದೂರುದಾರ ಪ್ರಸಾದ್ ಸಹಾ ನಾನು ಬಸವ ವಸತಿ ಯೋಜನೆಯಡಿಯಲ್ಲಿಯೂ ಕೆಲಸ ನಿರ್ವಹಿಸಿಲ್ಲ, ಅರ್ಜಿ ಹಾಕಿಲ್ಲ, ಆಗಿದ್ದರೂ ನನ್ನ ಖಾತೆಗೆ ಹಣ ಹಾಕುವ ಮೂಲಕ ಅಧಿಕಾರಿಗಳು ಸರ್ಕಾರಿ ಹಣ ಪೋಲಾಗುವಂತೆ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿ ವಿರುದ್ದ ಕ್ರಮವಹಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.