ಕಡೂರುಶಾಸಕ ಕೆ.ಎಸ್.ಆನಂದ್ ಅವರ ಅನುದಾನದಲ್ಲಿ ಕಡೂರು ಕ್ಷೇತ್ರದ ಆಸಂದಿ ಗ್ರಾಮದಲ್ಲಿ 6 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನಗಳ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.

ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾಹಿತಿ

ಕನ್ನಡಪ್ರಭ ವಾರ್ತೆ ಕಡೂರು

ಶಾಸಕ ಕೆ.ಎಸ್.ಆನಂದ್ ಅವರ ಅನುದಾನದಲ್ಲಿ ಕಡೂರು ಕ್ಷೇತ್ರದ ಆಸಂದಿ ಗ್ರಾಮದಲ್ಲಿ 6 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನಗಳ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಶಾಸಕ ಕೆ.ಎಸ್. ಆನಂದ್ ಗ್ರಾಮಸ್ಥರ ಮನವಿ ಮೇರೆಗೆ ತಮ್ಮ ಶಾಸಕರ ಅನುದಾನದಲ್ಲಿ ಆಸಂದಿ ಗ್ರಾಮದ ವಿವಿಧೆಡೆ 6 ಹೈಮಾಸ್ಟ್ ದೀಪಗಳನ್ನು ಮಂಜೂರು ಮಾಡಿಸಿ ಗ್ರಾಮದ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಅದರಲ್ಲಿ ಗ್ರಾಮದ ಕನಕ ವೃತ್ತ, ಶ್ರೀ ಬೀರ ಲಿಂಗೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಚಂಡಿಕೇಶ್ವರಿ ದೇವಸ್ಥಾನ, ಶ್ರೀ ಮಳ್ಳಮ್ಮ ದೇವಸ್ಥಾನ, ಆಡಿಗೆ ವೃತ್ತ, ಹಾಗೂ ಶ್ರೀ ಕೋಟಿ ಚೌಡೇಶ್ವರಿ ದೇವಸ್ಥಾನಗಳಲ್ಲಿ ಅಳ‍ಡಿಸಲಾಗಿದೆ ಎಂದರು.

ಈಗಾಗಲೇ ₹2 ಕೋಟಿ ವೆಚ್ಚದಲ್ಲಿ ಗಿರಿಯಾಪುರ -ಆಸಂದಿ ಗ್ರಾಮದವರಗೆ ರಸ್ತೆ ನಿರ್ಮಾಣ, ಸಮುದಾಯಭವನ, ಶಾಲೆ ಗಳಿಗೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಅಲ್ಲದೆ ಈ ಹಿಂದೆ ಆಸಂದಿ ಗ್ರಾಮಕ್ಕೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೂ ಶಾಸಕರು ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಹಾಗಾಗಿ ಅವರಿಗೆ ಸುತ್ತಲಿನ ಗ್ರಾಮಗಳ ಜನರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಬಾಸೂರು ಚಂದ್ರಮೌಳಿ, ಜ್ಞಾನೇಶ್, ಎನ್.ದೇವರಾಜ್, ಪ್ರಮೋದ್, ಎನ್. ದೇವರಾಜ್, ರಾಜು, ಎಸ್,ದೇವರಾಜ್,ಮನು ಕುಚೇಲಪ್ಪ,ರಾಜಣ್ಣ,ಸಾಗರ್ ಲಕ್ಕೇಗೌಡ,ಭೋಗಪ್ಪ, ಶಿವಯ್ಯ ಒಡೆಯರ್, ಅಜ್ಜಪ್ಪ ಒಡೆಯರ್, ಓಂಕಾರಪ್ಪ,ಗಿರೀಶ್,ಗುತ್ತಿಗೆದಾರ ಚಂದ್ರಶೇಖರ್ ಹಾಗು ಗ್ರಾಮಸ್ಥರು ಇದ್ದರು.

7ಕೆಕೆಡಿಯು2.

ಕಡೂರು ತಾಲೂಕಿನ ಆಸಂದಿ ಗ್ರಾಮದಲ್ಲಿ ಶಾಸಕ ಕೆ.ಎಸ್. ಆನಂದ್ ಶಾಸಕರ ಅನುದಾನದಲ್ಲಿ ನೀಡಿದ ಹೈಮಾಸ್ಟ್ ದೀಪಗಳನ್ನು ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಉದ್ಘಾಟಿಸಿದರು.