ಸಾರಾಂಶ
ತರೀಕೆರೆ, ಲಕ್ಕವಳ್ಳಿ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಸಂಘದಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮದ ರಾಜಬೀದಿಯಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಶ್ರೀ ಮಹಾ ಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
11 ದಿನಗಳ ಕಾಲ ಶ್ರೀ ಗಣಪತಿ ಉತ್ಸವ । 17ಕ್ಕೆ ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ, ವಿಸರ್ಜನೆ
ಕನ್ನಡಪ್ರಭ ವಾರ್ತೆ, ತರೀಕೆರೆಲಕ್ಕವಳ್ಳಿ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಸಂಘದಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮದ ರಾಜಬೀದಿಯಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಶ್ರೀ ಮಹಾ ಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ಸಂಪ್ರದಾಯದಂತೆ ನಿಗದಿತ ಅವಧಿಯಲ್ಲಿ ಬೆಳಗ್ಗೆ 10.30 ರಿಂದ 11.05 ಗಂಟೆ ಒಳಗೆ ಪ್ರತಿಷ್ಠಾಪನೆ, ಪೂಜೆ ನೇರವೇರಿಸಲಾಯಿತು. 11 ದಿನಗಳ ಕಾಲ ಶ್ರೀ ಗಣಪತಿ ಉತ್ಸವ ಆಯೋಜಿಸಿದ್ದು, ಪೂಜೆ ಕಾರ್ಯಕ್ರಮ ನೇರವೇರಲಿವೆ. ಸೆ. 7 ರಿಂದ ಸೆ.17 ರ ವರೆಗೆ ಗ್ರಾಮ ಪಂಚಾಯಿತಿ, ಸರ್ಕಾರಿ ಇಲಾಖೆ, ವಿವಿಧ ಶಾಲೆ,ವಾಣಿಜ್ಯ ಮಂಡಳಿ, ಸಂಘ ಸಂಸ್ಥೆಗಳಿಂದ, ಗ್ರಾಮದ ಪ್ರಮುಖ ಮುಖಂಡರಿಂದ ಹಾಗೂ ಶ್ರೀ ಮಹಾ ಗಣಪತಿ ಸೇವಾ ಸಂಘದಿಂದ ಸರಣಿಯಂತೆ ಪೂಜಾ
ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀ ಮಹಾ ಗಣಪತಿ ಸೇವಾ ಸಂಘದ ಪದಾಧಿಕಾರಿ ಹೇಮಣ್ಣ ತಿಳಿಸಿದ್ದಾರೆ.ಸೆ.13 ರಂದು ನವಗ್ರಹಹೋಮ ಹವನ, ಪುಣ್ಯಾಹ, ಶ್ರೀ ಮಹಾ ಗಣಪತಿ ಹೋಮ, ಪೂರ್ಣಾಹುತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಸತ್ಯನಾರಾಯಣ ಪೂಜೆ, ಪ್ರತಿದಿನ ಸಂಜೆಪೂಜೆ ನಂತರ ಗ್ರಾಮದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಸೆ. 17 ರಂದು ಬೆಳಿಗ್ಗೆ 9.30ಕ್ಕೆ ಸಮಯಕ್ಕೆ ಸರಿಯಾಗಿ ಶ್ರೀ ಗಣೇಶ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ರಾಜಬೀದಿಯಲ್ಲಿ ನಾದಸ್ವರ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಶ್ರದ್ಧಾ ಭಕ್ತಿಯಿಂದ ಎಲ್ಲಾ ಗ್ರಾಮದ ಭಕ್ತರು ಸಹಕಾರ ದಿಂದ ಅದ್ಧೂರಿಯಾಗಿ ವಿವಿಧ ಆಕರ್ಷಣೆ ಗಳೊಂದಿಗೆ ಮೆರವಣಿಗೆ ಹಾಗೂ ನಡೆಸಿ ಶ್ರೀ ಗಣಪತಿ ವಿಸರ್ಜನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಶ್ರೀ ಮಹಾ ಗಣಪತಿ ಸೇವಾ ಸಂಘದ ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಪರಮೇಶ್, ಜಯಣ್ಣ, ಪ್ರಕಾಶ್, ನಂದಕುಮಾರ್, ಕುಮಾರ್, ಸಂಜೀವ ಕುಮಾರ್,ಹೇಮಣ್ಣ, ರಾಜು, ಗುರುಪ್ರಸಾದ್, ರಮೇಶ್, ಶಿವು, ಚಂದ್ರಹಾಸ, ಮಂಜುನಾಥ ಹಾಗು ಭಕ್ತರು ಭಾಗವಹಿಸಿದ್ದರು.8ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಶ್ರೀ ಮಹಾ ಗಣಪತಿ ಸೇವಾ ಸಂಘದ ವತಿಯಿಂದ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು.