ಪೌತಿಖಾತೆ, ಹದ್ದುಬಸ್ತು, ವಿದ್ಯುತ್ ಸಂಪರ್ಕಕಲ್ಪಿಸುವುದು, ಸಾಗುವಳಿ ಚೀಟಿ, ಕಂದಾಯಗ್ರಾಮ, ಖಾತೆ ಮಾಡುವ ಬಗ್ಗೆ, ಪೋಡಿ ದುರಸ್ತಿ, ಪಹಣಿತಿದ್ದುಪಡಿ, ಹೊಲಕ್ಕೆ ದಾರಿ ಬಿಡಿಸಿಕೊಡುವ ಬಗ್ಗೆ, ಶ್ರವಣಬೆಳಗೊಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ, ಇನಾಮು ರದ್ದುಪಡಿಸುವ ಕುರಿತು ಕೊಣನೂರು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡಲು ಮನವಿ, ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್.ಐ.ಆರ್‌ ದಾಖಲಿಸುವಂತೆ ಸೂಚಿಸಿದರಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ವೀಕಾರ ಮಾಡಿರುವ ೧೩೫ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿರುವ 1069 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕುರಿತು ವರದಿ ನೀಡುವುದರ ಜೊತೆಗೆ ಇಂದು ಸ್ವೀಕಾರ ಮಾಡಿರುವ ೧೩೫ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನ ಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು, ಸಾರ್ವಜನಿಕರ ಸ್ವಂತ ಜಮೀನು ಒತ್ತುವರಿ ಆಗಿದ್ದಲ್ಲಿ ನ್ಯಾಯಾಲಯದ ನಿರ್ದೇಶನವಿದ್ದರೆ ಮಾತ್ರ ಬಿಡಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

ಕಳೆದ ೨೦ ವರ್ಷದಿಂದ ಪಡಿತರ ಕಾರ್ಡ್ ಹೊಂದಿದ್ದು, ಆದಾಯ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿರುವುದರಿಂದ ೫ ವರ್ಷದಿಂದ ಪಡಿತರ ಕಾರ್ಡ್‌ ರದ್ದಾಗಿರುವುದನ್ನು ಸರಿಪಡಿಸಲು ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಅರಕಲಗೂಡು ತಾಲೂಕಿನ ಮಾದಿಹಳ್ಳಿಯಲ್ಲಿ ಏತನೀರಾವರಿಗೆ ಭೂಸ್ವಾಧೀನವಾಗಿದ್ದು, ಪರಿಹಾರಕೋರಿ ಬಂದ ಮನವಿಗೆ ಖುದ್ದು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ಪೌತಿಖಾತೆ, ಹದ್ದುಬಸ್ತು, ವಿದ್ಯುತ್ ಸಂಪರ್ಕಕಲ್ಪಿಸುವುದು, ಸಾಗುವಳಿ ಚೀಟಿ, ಕಂದಾಯಗ್ರಾಮ, ಖಾತೆ ಮಾಡುವ ಬಗ್ಗೆ, ಪೋಡಿ ದುರಸ್ತಿ, ಪಹಣಿತಿದ್ದುಪಡಿ, ಹೊಲಕ್ಕೆ ದಾರಿ ಬಿಡಿಸಿಕೊಡುವ ಬಗ್ಗೆ, ಶ್ರವಣಬೆಳಗೊಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ, ಇನಾಮು ರದ್ದುಪಡಿಸುವ ಕುರಿತು ಕೊಣನೂರು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡಲು ಮನವಿ, ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್.ಐ.ಆರ್‌ ದಾಖಲಿಸುವಂತೆ ಸೂಚಿಸಿದರಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಾಯ ಗ್ರಾಮದಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು, ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಅಂತಿಮ ಬಿಲ್ ಹಣ ಪಾವತಿ ಮಾಡುವಂತೆ ಸೂಚಿಸಿದರಲ್ಲದೆ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೇಡ್ ಹಾಕಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸಲು ನಿರ್ದೇಶನ ನೀಡಿದರು. ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನವಾಗಿರುವ ಜಾಗಕ್ಕೆ ಹಾಗೂ ಬೆಳೆ ಪರಿಹಾರ,ಖಾತೆ ಬದಲಾವಣೆ,ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರದಲ್ಲಿ ಗೋಮಾಳದಲ್ಲಿ ಎರಡು ಗುಂಟೆ ಜಾಗ ಕಲ್ಪಿಸುವಂತೆ ಅಹವಾಲು ಅರ್ಜಿಗಳು ಸ್ವೀಕಾರವಾಯಿತು.

ಸಾರ್ವಜನಿಕರಿಗೆ ಕಾನೂನು ಸೇವೆಗಳ ಸಹಾಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಕೋಶ ತೆರೆಯಲಾಗಿದೆ. ಯಾರ ಸಹಾಯವಿಲ್ಲದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಬಾಲ ಗರ್ಭಿಣಿ, ಫೋಕ್ಸೋ ಹಾಗೂ ಮಾದಕ ವಸ್ತುಗಳ ಸೇವನೆಯನ್ನುತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ,ಉಪ ವಿಭಾಗಾಧಿಕಾರಿ ಜಗದೀಶ್‌ ಗಂಗಣ್ಣನವರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.