ಹತ್ತನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಬಿ.ಟಿ.ಜಾಹ್ನವಿಗೆ ಆಮಂತ್ರಣ

| Published : Feb 12 2024, 01:36 AM IST

ಹತ್ತನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಬಿ.ಟಿ.ಜಾಹ್ನವಿಗೆ ಆಮಂತ್ರಣ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ಟಿ.ಜಾಹ್ನವಿಯವರು ಲೇಖನ, ಕಥೆಗಳ ಮೂಲಕ ಸಮಾಜ ತಿದ್ದುವ, ಮಾರ್ಗದರ್ಶನ ಮಾಡುವ ಕೆಲಸ ಮಾಡಿದ್ದಾರೆ. ಇವರು ಕ್ರಿಯಾಶೀಲ ಬರಹಗಾರರಾಗಿದ್ದಾರೆ. ಇವರು 10ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಾಹಿತ್ಯ ವಲಯಕ್ಕೆ ಸಂತೋಷ ಹಾಗೂ ಮೆರುಗು ತಂದಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಿ.ಟಿ.ಜಾಹ್ನವಿಯವರಿಗೆ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.

ಫೆ.27ರಂದು ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ಮಠದ ಕಲ್ಯಾಣ ಮಂದಿರದಲ್ಲಿ ನಡೆಯುವ ದಾವಣಗೆರೆ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಥೆಗಾರ್ತಿ, ಲೇಖಕಿ, ಬಿ.ಟಿ. ಜಾಹ್ನವಿಯವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ನೇತೃತ್ವದಲ್ಲಿ ಗೌರವ ಪೂರ್ವಕವಾಗಿ ಆಹ್ವಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಬಿ.ಟಿ.ಜಾಹ್ನವಿಯವರು ಲೇಖನ, ಕಥೆಗಳ ಮೂಲಕ ಸಮಾಜ ತಿದ್ದುವ, ಮಾರ್ಗದರ್ಶನ ಮಾಡುವ ಕೆಲಸ ಮಾಡಿದ್ದಾರೆ. ಇವರು ಕ್ರಿಯಾಶೀಲ ಬರಹಗಾರರಾಗಿದ್ದಾರೆ. ಇವರು 10ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಾಹಿತ್ಯ ವಲಯಕ್ಕೆ ಸಂತೋಷ ಹಾಗೂ ಮೆರುಗು ತಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಪರಿಷತ್‌ನ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಮಲ್ಲಮ್ಮ, ರುದ್ರಾಕ್ಷಿಬಾಯಿ, ನಾಗರಾಜ್ ಸಿರಿಗೆರೆ, ದಾಗಿನಕಟ್ಟೆ ಪರಮೇಶಪ್ಪ, ಷಡಕ್ಷರಪ್ಪ ಎಂ.ಬೇತೂರು, ಶಿವಕುಮಾರ್, ಎ.ಎಂ.ಸಿದ್ದೇಶ್ ಕುರ್ಕಿ, ವೀಣಾ ಕೃಷ್ಣಮೂರ್ತಿ, ನಾಗವೇಣಿ, ಎಸ್.ಸಿದ್ದೇಶಪ್ಪ, ಕೆ.ಪರಮೇಶಪ್ಪ, ಎ.ಮಹಾಲಿಂಗಪ್ಪ, ವಿಜಯ ಮಹಾಂತೇಶ, ಭೂಮೇಶ್ ಮುಂತಾದವರಿದ್ದರು.