ಇತ್ತೀಚಿನ ದಿನಗಳಲ್ಲಿ ಜನಗಳ ಓಡಾಟ, ವಾಹನಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಕ್ಕಳು ವಯೋವೃದ್ಧರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿರುವ ಕಾರಣ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಅದರ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ ಹಾಗೂ ವಾಹನ ಸವಾರರು ರಸ್ತೆಯ ನಿಯಮಗಳನ್ನ ಅರಿವಿಲ್ಲದೆ ವಾಹನಗಳನ್ನು ಚಲಾಯಿಸುವುದು ನಿಯಮಗಳ ಉಲ್ಲಂಘನೆ ಅಪಘಾತಕ್ಕೆ ಹೆಚ್ಚು ಕಾರಣವಾಗುತ್ತಿದೆ. ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಹಾಗೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಜನವರಿ ಒಂದರಿಂದ ೩೦ರವರೆಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ನಡೆಸಲಾಯಿತು.ಶಾಲಾ ಮುಖ್ಯ ಶಿಕ್ಷಕ ಸುರೇಶ್ ಬಿ ಎನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನಗಳ ಓಡಾಟ, ವಾಹನಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಕ್ಕಳು ವಯೋವೃದ್ಧರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿರುವ ಕಾರಣ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಅದರ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ ಹಾಗೂ ವಾಹನ ಸವಾರರು ರಸ್ತೆಯ ನಿಯಮಗಳನ್ನ ಅರಿವಿಲ್ಲದೆ ವಾಹನಗಳನ್ನು ಚಲಾಯಿಸುವುದು ನಿಯಮಗಳ ಉಲ್ಲಂಘನೆ ಅಪಘಾತಕ್ಕೆ ಹೆಚ್ಚು ಕಾರಣವಾಗುತ್ತಿದೆ. ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಹಾಗೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಜನವರಿ ಒಂದರಿಂದ ೩೦ರವರೆಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವಿದ್ದು ಆ ಮೂಲಕ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ರಸ್ತೆ ನಿಯಮ ಪಾಲನೆ ಮತ್ತು ಸುರಕ್ಷತಾ ಕ್ರಮಗಳನ್ನು ಕಲಿಸುವುದು ತುಂಬಾ ಮುಖ್ಯವಾಗಿದೆ. ಆದ್ದರಿಂದ ಜಾಥಾ ಮೂಲಕ ನಮ್ಮ ಶಾಲೆಯ ಮಕ್ಕಳು ರಸ್ತೆ ಸುರಕ್ಷತಾ ಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲಾಗಿದೆ ಎಂದರು.ನಗರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಲ್ಲಪ್ಪ ಮಾತನಾಡಿ, ೧೮ ವರ್ಷ ಒಳಪಟ್ಟ ಮಕ್ಕಳು ವಾಹನವನ್ನು ಚಲಾಯಿಸಬಾರದು ಹಾಗೂ ೧೮ ವರ್ಷಗಳ ಪಟ್ಟ ಮಕ್ಕಳಿಗೆ ಪೋಷಕರು ವಾಹನವನ್ನು ಚಲಾಯಿಸಲು ನೀಡಬಾರದು ಹಾಗೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸಬಾರದು ಹೆಲ್ಮೆಟ್ ಅನ್ನು ಸುರಕ್ಷತೆಗಾಗಿ ತಪ್ಪದೆ ಧರಿಸಿ ಪೊಲೀಸ್ ನವರು ನೋಡುತ್ತಾರೆ ಎಂಬ ಕಾರಣಕ್ಕೆ ಧರಿಸುವುದು ಬೇಡ ಎಂದು ಹೇಳಿದರು.ಬಾಲ್ಯವಿವಾಹ ಪೋಕ್ಸೋ ಕಾಯ್ದೆ ಬಗ್ಗೆಯೂ ಕೂಡ ಮಕ್ಕಳಿಗೆ ತಿಳಿವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಪ್ರೇಮ ರೇಖಾ ಹಾಗೂ ಇತರ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.