ಮಕ್ಕಳ ಮನೋಭಾವಕ್ಕೆ ತಕ್ಕಂತೆ ಸಾಹಿತ್ಯ ರಚನೆ ಅಗತ್ಯ-ಹಿರೇಮಠ

| Published : Nov 26 2024, 12:45 AM IST

ಸಾರಾಂಶ

ಮಗುವಿನೊಂದಿಗೆ ಮಗುವಾಗಿ ಬರೆದು ಮಕ್ಕಳ ಸಾಹಿತ್ಯ ರಚನೆಯಾಗಬೇಕಾಗಿದೆ. ಮಕ್ಕಳ ಸೂಕ್ಷ್ಮ ಹಾವಭಾವಗಳ ಅವಲೋಕನ ಮಾಡಿ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಸಾಹಿತ್ಯ ರಚನೆ ಆಗಬೇಕಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ ಹಿರೇಮಠ ಹೇಳಿದರು.

ರಾಣಿಬೆನ್ನೂರು: ಮಗುವಿನೊಂದಿಗೆ ಮಗುವಾಗಿ ಬರೆದು ಮಕ್ಕಳ ಸಾಹಿತ್ಯ ರಚನೆಯಾಗಬೇಕಾಗಿದೆ. ಮಕ್ಕಳ ಸೂಕ್ಷ್ಮ ಹಾವಭಾವಗಳ ಅವಲೋಕನ ಮಾಡಿ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಸಾಹಿತ್ಯ ರಚನೆ ಆಗಬೇಕಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ ಹಿರೇಮಠ ಹೇಳಿದರು.ನಗರದ ಮೆಡ್ಲೇರಿ ರಸ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ರಂಗಕುಸುಮ ಪ್ರಕಾಶನದ 20ನೇ ವಾರ್ಷಿಕೋತ್ಸವ, ಮಕ್ಕಳ ಸಾಂಸ್ಕೃತಿಕ ಸೌರಭ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಬಾಲ್ಯದಲ್ಲಿಯೇ ರಂಗ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಅರಿವು ಮೂಡಿಸಬೇಕು. ಮಕ್ಕಳು ಮುಂದೆ ಈ ಕ್ಷೇತ್ರದಲ್ಲಿ ಉತ್ತಮವಾದ ಭವಿಷ್ಯವನ್ನು ಕಂಡುಕೊಳ್ಳಲು ಸಾಕಷ್ಟು ಅವಕಾಶಗಳಿದೆ ಎಂದರು.ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಡಿಗರ ಮಾತನಾಡಿ, ಕನ್ನಡ ನಾಡು, ನುಡಿ, ಜಲ ರಕ್ಷಣೆಯ, ಸಾಹಿತ್ಯ ರಚನೆಗೆ, ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಸತತ 20 ವರ್ಷಗಳಿಂದ ರಂಗ ಕುಸುಮ ಪ್ರಕಾಶನವು ಈ ಕಾರ್ಯವನ್ನು ಅವಿರತವಾಗಿ ಮಾಡುತ್ತಾ ಬಂದಿದೆ. ಮಕ್ಕಳ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ನಾಡಿನ ಬಾಲ ಹಾಗೂ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್. ಅಶೋಕ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ಮಾತನಾಡಿದರು.ಕವಿ ಮತ್ತು ಕತೆಗಾರ ಲಿಂಗರಾಜ ಸೊಟ್ಟಪ್ಪನವರ ಅವರು ಮಕ್ಕಳ ಮನೋವಿಕಾಸಕ್ಕಾಗಿ ಸಾಂಸ್ಕೃತಿಕ ಚಟುವಟಿಕೆ ಮಹತ್ವ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.ಸಾಮಾಜಿಕ ಸಾಮರಸ್ಯ ಮತ್ತು ಸದೃಢತೆಗೆ ಪಾಲಕರ ಮಹತ್ವ ಕುರಿತು ಡಾ.ಎಂ.ಇ. ಶಿವಕುಮಾರ ಪಾಲಕರಲ್ಲಿ ಅರಿವು ಮೂಡಿಸಿದರು.ಚಲನ ಚಿತ್ರನಟಿ ಮಾಲತಿ ಮೈಸೂರು, ಸುಮಾ ಹೆಗ್ಡೆ, ಪ್ರಿಯಾ ಸವಣೂರ, ಶ್ರೀಕಾಂತ ಈಳಿಗೇರ, ನಾಗರತ್ನ ಗಂಗಾವತಿ ಅವರಿಗೆ ಕರ್ನಾಟಕ ಕಲಾನಿಧಿ ಪ್ರಶಸ್ತಿ, ಹಾವೇರಿಯ ಗಣೇಶ ರಾಯ್ಕರ, ಧಾರವಾಡದ ಸವಿತಾ ಗೌಡರ ಜಹಾಂಗೀರ, ಕೊಪ್ಪಳದ ಗುರುರಾಜ ಹೊಸಪೇಟೆ, ಪರಮೇಶ ಐರಣಿ, ವಿಜಯನಗರ ಜಿಲ್ಲೆಯ ಧರ್ಮನಗೌಡ ಅವರಿಗೆ ರಂಗ ಕುಸುಮ ಕಲಾನಿಧಿ ಪ್ರಶಸ್ತಿ ಹಾಗೂ ವೆಂಕಟೇಶ ಬಡಿಗೇರ, ಸಿ.ಎಚ್. ನಾಗೇಂದ್ರಪ್ಪ, ಸುರೇಶ ತಂಗೋಡ, ಹಾಲಪ್ಪ ಚಿಗಟೇರಿ, ಅನಂತ್ ತಾಮಣ್ಣನವರ ಅವರಿಗೆ ರಂಗಕಾವ್ಯ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ನೀಡಲಾಯಿತು.ಸಾಯಿ ಡಾನ್ಸ್ ಗ್ರೂಪ್, ಶಾರದಾ ಭರತ ನಾಟ್ಯ ಕಲಾಶಾಲೆ, ರಾಜೇಶ್ವರಿ ಪ್ರೌಢ ಶಾಲೆ ನೃತ್ಯ ತಂಡ, ಹನುಮಾಪುರ ಪ್ರೌಢ ಶಾಲೆ ನೃತ್ಯತಂಡ, ಶಿರಡಿ ಇಂಟರ್ ನ್ಯಾಶನಲ್ ಶಾಲೆ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು. ಸಮಾರಂಭದ ಅಂಗವಾಗಿ ಮಕ್ಕಳ ಕವಿಗೋಷ್ಠಿ, ರಂಗೋಲಿ ಸ್ಪರ್ಧೆ ನಡೆಯಿತು. ಕಸಾಪ ತಾಲೂಕಾಧ್ಯಕ್ಷ ಪ್ರಭಾಕರ ಶಿಗ್ಲಿ, ಚನ್ನರಾಯ ಪಟ್ಟಣದ ಸಚಿನ್ ಎಸ್.ಎ. ಹು.ವಿ. ಸಿದ್ದೇಶ, ಮಹದೇವ, ಮಹೇಶಕುಮಾರ ಹನಕೆರೆ, ಮಸಾಪ ಕಾರ್ಯಾಧ್ಯಕ್ಷ ಜಗದೀಶ ಮಳಿಮಠ, ಸಂಘಟನಾ ಕಾರ್ಯದರ್ಶಿ ಮೇಘನಾ ವೆಂಕಟೇಶ, ಕಾವ್ಯ ಅಂಗಡಿ. ಚನ್ನಬಸಪ್ಪ ನಾಡರ, ಮಲ್ಲಪ್ಪ ಕರಿಯಣ್ಣನವರ, ಸಿ.ಜಿ.ಮಲ್ಲೂರ, ಶಂಭಗೌಡ ಘಂಟೆಪ್ಪಗೌಡರ, ಮಲ್ಲಪ್ಪ ಕರಿಯಣ್ಣನವರ, ನಿಂಗನಗೌಡ ಪಾಟೀಲ, ಬಸವರಾಜ ಪೂಜಾರ, ಪಾರ್ವತಿಬಾಯಿ ಕಾಶೀಕರ, ಬಸಮ್ಮ ಏಗನಗೌಡರ, ಮಹಾಂತೇಶ ನಾಯ್ಕೋಡಿ, ಚನ್ನಬಸಪ್ಪ ನಾಡರ, ರವಿರಾಜ ಸವಣೂರ ಉಪಸ್ಥಿತರಿದ್ದರು.